ಫೋಟೋಗಳು: ರಿಷಬ್ ಮಗನ ಹಳ್ಳಿ ಶೈಲಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಫಿದಾ

ಸಿನಿ ಸೆಲೆಬ್ರಿಟಿಗಳು ಸದ್ಯ ವಿಶ್ರಾಂತಿ ಮೂಡಿನಲ್ಲಿದ್ದಾರೆ. ಲಾಕ್ ಡೌನ್ ನಿಂದ ಅನೇಕರು ತಮ್ಮ ತಮ್ಮ ಊರು ಸೇರಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸಹ ತಮ್ಮ ಹುಟ್ಟೂರಿನಲ್ಲಿದ್ದು ಮಗನ ಜೊತೆ ಕಾಲಕಳೆಯುತ್ತಿದ್ದಾರೆ.

ಇದೆ ಸಮಯದಲ್ಲಿ ರಿಷಬ್ ಮಗನ ಹುಟ್ಟುಹಬ್ಬವನ್ನು ಯಾವುದೆ ಆಡಂಬರವಿಲ್ಲದೆ ಜೋರಾಗಿ ಸಂಭ್ರಮಿಸಿದ್ದಾರೆ. ಪಕ್ಕ ಹಳ್ಳಿ ಶೈಲಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಸಂತಸ ಪಟ್ಟಿದ್ದಾರೆ. ಕುಟುಂಬದ ಜೊತೆ ರಿಷಬ್ ಅಡಿಕೆ ತೋಟದಲ್ಲಿ ಮಗ ರಣ್ವಿತ್ ಶೆಟ್ಟಿ ಬರ್ತಡೇ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹಳ್ಳಿ ಸೊಡಗಿನ ಹುಟ್ಟುಹಬ್ಬ

ಹಳ್ಳಿ ಸೊಡಗಿನ ಹುಟ್ಟುಹಬ್ಬ

ರಿಷಬ್ ಶೆಟ್ಟಿ ದಂಪತಿ ಮಗನ ಹುಟ್ಟುಹಬ್ಬವನ್ನು ಅಡಿಕೆ ತೋಟದ ಮಧ್ಯೆ ಆಚರಣೆ ಮಾಡಿದ್ದಾರೆ. ತೋಟದಲ್ಲಿ ಸಿಗುವ ವಸ್ತುಗಳನ್ನೆ ಬಳಸಿಕೊಂಡು ಸುಂದರವಾಗಿ ಡೆಕೊರೇಷನ್ ಕೂಡ ಮಾಡಿದ್ದಾರೆ. ಇನ್ನೂ ಮನೆಯಲ್ಲಿಯೇ ವಿಶೇಷವಾದ ಕೇಕ್ ಅನ್ನು ತಯಾರಿಸಲಾಗಿದೆ.

ತೆಂಗು, ಅಡಿಕೆಯಿಂದ ಸಿಂಗಾರಗೊಂಡಿದ್ದ ವೇದಿಕೆ

ತೆಂಗು, ಅಡಿಕೆಯಿಂದ ಸಿಂಗಾರಗೊಂಡಿದ್ದ ವೇದಿಕೆ

ಯಾವುದೆ ಆಡಂಬರ ವಿಲ್ಲದೆ ತೋಟದಲ್ಲಿಯೆ ಸಿಗುವ ತೆಂಗು, ಅಡಿಕೆ ಗೊನೆ, ಹಲಸಿನ ಹಣ್ಣು, ಬಾಳೆಯಿಂದ ವೇದಿಕೆ ಸಿಂಗಾರ ಮಾಡಲಾಗಿದೆ. ಈ ಸುಂದರ ಪ್ರಕೃತಿಯ ನಡುವೆ ಮುದ್ದು ಮಗ ರಣ್ವಿತ್ ಶೆಟ್ಟಿಯ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಕಾಡಿನ ಹೂಗಳ ಘಮವಿತ್ತು

ಕಾಡಿನ ಹೂಗಳ ಘಮವಿತ್ತು

ವಿಶೇಷ ಅಂದರೆ ಯಾವುದೆ ಕೃತಕ ಹೂಗಳ ಅಲಂಕಾರವಿರಲಿಲ್ಲ. ಬರ್ತಡೇ ತುಂಬಾ ಕಾಡಿನ ಹೂಗಳ ಘಮವಿತ್ತು. ಜೊತೆಗೆ ಕಾಡಿನ ಹಣ್ಣುಗಳ ಸುಂಗಧ, ಮೊದಲ ಮಳೆಯ ಸಂಭ್ರಮ ನೋಡಿದರೆ ಸಾಕ್ಷಾತ್ ಸ್ವರ್ಗವೆ ಧರೆಗಿಳಿದಹಾಗಿದೆ. ಸುಂದರ ಪ್ರಕೃತಿಯ ನಡುವೆ ಮರೆಯಲಾಗದ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

ಪ್ರೀತಿಪಾತ್ರರ ನಡುವೆ ಸಂಭ್ರಮಿಸಿದ ರಿಷಬ್

ಪ್ರೀತಿಪಾತ್ರರ ನಡುವೆ ಸಂಭ್ರಮಿಸಿದ ರಿಷಬ್

ಲಾಕ್ ಡೌನ್ ಕಾರಣ ಸ್ನೇಹಿತರು, ಕುಟುಂಬದವರು ಯಾರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕೆಲವೇ ಕೆಲವು ಪ್ರೀತಿ ಪಾತ್ರರ ನಡುವೆ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ.

ಎಲ್ಲರ ಪ್ರೀತಿ ತುಂಬಿದ ಹಾರೈಕೆ ಇರಲಿ ಎಂದು ರಿಷಬ್

ಎಲ್ಲರ ಪ್ರೀತಿ ತುಂಬಿದ ಹಾರೈಕೆ ಇರಲಿ ಎಂದು ರಿಷಬ್

"ಮುದ್ದು ಕಂದ ರಣ್ವಿತ್ ನ ಮೊದಲ ವರ್ಷದ ಹುಟ್ಟುಹಬ್ಬ. ಕೊರೊನಾ ಕಾರಣದಿಂದ ಯಾವುದೇ ಆಡಂಬರ ಇಲ್ಲದೇ ನಾ ಹುಟ್ಟಿ ಬೆಳೆದ ಮನೆಯಲ್ಲಿ, ಹಳ್ಳಿ ಸೊಗಡಿನ ಅಲಂಕಾರ ತೆಂಗು, ಅಡಿಕೆಯ ಹಿಂಗಾರ, ನಡುವೆ ಬಾಳೆಯ ಸಿಂಗಾರ. ಅಲ್ಲಲ್ಲಿ ಕಾಡಿನ ಹೂ ಹಣ್ಣುಗಳ ಸುಗಂಧ, ಮೊದಲ ಮಳೆಯ ಸಂಭ್ರಮದಲ್ಲಿ ನಮ್ಮ ಕೆಲವೇ ಪ್ರೀತಿ ಪಾತ್ರರ ಜೊತೆ ಆಚರಿಸಲಾಯಿತು. ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆ ನನ್ನ ಮುದ್ದು ಮಗನ ಮೇಲಿರಲಿ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹಳ್ಳಿ ಶೈಲಿ ಹುಟ್ಟುಹಬ್ಬ ಆಚರಣೆ ಅಭಿಮಾನಿಗಳು ಫಿದಾ

ಹಳ್ಳಿ ಶೈಲಿ ಹುಟ್ಟುಹಬ್ಬ ಆಚರಣೆ ಅಭಿಮಾನಿಗಳು ಫಿದಾ

ರಿಷಬ್ ಶೆಟ್ಟಿ ಮಗನ ಹಳ್ಳಿ ಶೈಲಿಯ ಹುಟ್ಟುಹಬ್ಬ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಡೆಕೋರೇಷನ್, ಪ್ರಕೃತಿ ಸೌಂದರ್ಯ, ಕಾಡಿನ ಹೂ, ಹಣ್ಣು, ಹಾಳೆಯ ಟೊಪ್ಪಿ, ಸಂಭ್ರಮ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ತಿಳಿಸುತ್ತಿದ್ದಾರೆ.

More from Filmibeat

English summary
Director Rishab Shetty celebrating his son first birthday in areca plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X