ರಿಷಬ್ ಶೆಟ್ಟಿ ಮುದ್ದು ಮಗನ ಹುಟ್ಟುಹಬ್ಬ: ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ ಕುಟುಂಬ
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಗಾಗ ಮುದ್ದು ಮಗನ ಫೋಟೋವನ್ನು ಹಂಚಿಕೊಳ್ಳುತ್ತಿದ್ದ ರಿಷಬ್ ಮಗನ ಹುಟ್ಟುಹಬ್ಬಕ್ಕೆ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಜೊತೆಗೆ ಮೊದಲ ವರ್ಷ ತುಂಬಿದ ಸಡಗರದಲ್ಲಿ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.
ರಿಷಬ್ ಸದ್ಯ ಹುಟ್ಟೂರಿನಲ್ಲಿದ್ದಾರೆ. ಕುಟುಂಬದ ಜೊತೆ ಕಾಲಕಳೆಯುತ್ತಿರುವ ರಿಷಬ್ ಇತ್ತೀಚಿಗಷ್ಟೆ ಮಗನ ಆರೈಕೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. "ಇದು ನನ್ನ ವರ್ಕ್ ಫ್ರಮ್ ಹೋಮ್" ಎಂದು ಬರೆದುಕೊಂಡಿದ್ದರು. ಈಗ ಮುದ್ದು ಮಗನಿಗೆ ವರುಷ ತುಂಬಿದ ಸಂತಸದಲ್ಲಿರುವ ರಿಷಬ್ ದಂಪತಿ ಮಗನ ಹುಟ್ಟುಹಬ್ಬವನ್ನು ಮನೆಯಲ್ಲಿಯೆ ಸರಳವಾಗಿ ಸೆಲೆಬ್ರೆಟ್ ಮಾಡಿದ್ದಾರೆ. ಮುಂದೆ ಓದಿ...

ವಿಡಿಯೋ ಮೂಲಕ ರಣ್ವಿತ್ ಗೆ ಶುಭಾಶಯ
ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಮಗನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗನ ಮೊದಲ ಫೋಟೋದಿಂದ ವರುಷ ತುಂಬಿದವರೆಗಿನ ಫೋಟೋಗಳನ್ನು ಸೇರಿಸಿ ಒಂದು ಸುಂದರ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಜೊತೆಗೆ ಮಗನ ಬಗ್ಗೆ ಒಂದಿಷ್ಟು ಬರೆದುಕೊಂಡಿದ್ದಾರೆ. ಮಗನನ್ನು ಮೊದಲ ಬಾರಿಗೆ ಪರಿಚಯಿಸುವಾಗಲು ರಿಷಬ್ ವಿಡಿಯೋ ಮೂಲಕ ಪರಿಚಯಿಸಿದ್ದರು.
'ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ..'
"ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲಿ" ಎಂದಿದ್ದಾರೆ.

ಅಪ್ಪನ ಜೊತೆ ಕಾರು ಓಡಿಸುತ್ತಿರುವ ಮಗ
ಒಂದು ವರ್ಷ ತುಂಬುವುದೊರಳಗೆ ಮಗ ರಣ್ವಿತ್ ಅಪ್ಪನ ಜೊತೆ ಕಾರ್ ಚಲಾಯಿಸುತ್ತಿದ್ದಾನೆ. ರಿಷಬ್ ಶೆಟ್ಟಿ ಮಗನನ್ನು ಜೊತೆಯಲ್ಲಿಯೆ ಕೂರಿಸಿಕೊಂಡು ಕಾರು ಚಲಾಯಿಸುತ್ತಿದ್ದರೆ, ಮಗ ಕೂಡ ಅಪ್ಪನ ಹಾಗೆ ಕಾರು ಚಲಾಯಿಸುತ್ತಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಮುದ್ದು ಕಂದನ ಕಾರ್ ಡ್ರೈವ್ ಗೆ ಸಿಕ್ಕಾಪಟ್ಟೆ ಲೈಕ್ ಸಿಕ್ಕಿದೆ.
ರಿಷಬ್ ಮಗನಿಗೆ ರಕ್ಷಿತ್ ಶುಭಾಶಯ
ಗೆಳೆಯ ರಿಷಬ್ ಶೆಟ್ಟಿ ಮಗನ ಮೊದಲ ಹರ್ಷದ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಕೂಡ ವಿಶ್ ಮಾಡಿದ್ದಾರೆ. ರಣ್ವಿತ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ರಕ್ಷಿತ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ರಣ್ವಿತ್ ಜೊತೆ ಇರುವ ಎರಡು ಫೋಟೋವನ್ನು ರಕ್ಷಿತ್ ಹಂಚಿಕೊಂಡಿದ್ದಾರೆ. ರಕ್ಷಿತ್ ಜೊತೆಗೆ ಸಾಕಷ್ಟು ಜನ ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications











