ಲಾಕ್‌ಡೌನ್‌ ಅವಧಿಯಲ್ಲಿ ಹೊಸ ಸಿನಿಮಾ ಮಾಡಿ ಮುಗಿಸಿದ ರಿಷಬ್ ಶೆಟ್ಟಿ

ಕೊರೊನಾ ವೈರಸ್‌ ಲಾಕ್‌ಡೌನ್‌ ವೇಳೆ ಕೆಲಸ ಇಲ್ಲದೇ ಅದೇಷ್ಟೋ ಜನ ಮನೆಯಲ್ಲಿ ಕೂತಿದ್ದರು. ಸಿನಿಮಾ ಶೂಟಿಂಗ್ ಇಲ್ಲದೇ ಇಂಡಸ್ಟ್ರಿ ಮಂದಿ ಸಹ ಮನೆಯಲ್ಲಿ ಕುಳಿತಿದ್ದರು. ಆದರೆ, ನಿರ್ದೇಶಕ ರಿಷಬ್ ಶೆಟ್ಟಿ ಲಾಕ್‌ಡೌನ್‌ ಸಮಯದಲ್ಲಿ ಸೈಲೆಂಟ್ ಆಗಿ ಸಿನಿಮಾವೊಂದು ಮಾಡಿ ಮುಗಿಸಿದ್ದಾರೆ.

ರಿಷಬ್ ಶೆಟ್ಟಿ ಏಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ರುದ್ರಪ್ರಯಾಗ' ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿಯಿರುವ ನಟ ಕೊರೊನಾ ಲಾಕ್‌ಡೌನ್‌ ಟೈಂನಲ್ಲಿ ಹೊಸ ಸಿನಿಮಾವೊಂದು ಶೂಟಿಂಗ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ....

ಸೆಪ್ಟೆಂಬರ್ 10ಕ್ಕೆ ಫಸ್ಟ್ ಲುಕ್

ಸೆಪ್ಟೆಂಬರ್ 10ಕ್ಕೆ ಫಸ್ಟ್ ಲುಕ್

ಕೊರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಕೈಕಟ್ಟಿ ಸುಮ್ಮನಿದ್ದ ಸಮಯದಲ್ಲಿ ರಿಷಬ್ ಶೆಟ್ಟಿ ಒಂದು ಸಿನಿಮಾವನ್ನೇ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಚಿತ್ರದ ಶೀರ್ಷಿಕೆ ಏನು ಎಂದು ಸೆಪ್ಟೆಂಬರ್ 10 ರಂದು ಬಹಿರಂಗಪಡಿಸಲಿದ್ದಾರೆ. ಅದಕ್ಕೊಂದು ಪ್ರೋಮೋ ಸಹ ಬಿಡುಗಡೆ ಮಾಡಿದ್ದಾರೆ.

ಸರ್ಪ್ರೈಸ್ ಪ್ಯಾಕೇಜ್

ಸರ್ಪ್ರೈಸ್ ಪ್ಯಾಕೇಜ್

ರಿಷಬ್ ಶೆಟ್ಟಿ ಇಂತಹದೊಂದು ಸಿನಿಮಾ ಮಾಡ್ತಿದ್ದಾರೆ, ಶೂಟಿಂಗ್ ನಡೆಯುತ್ತಿದೆ, ಇವರೆಲ್ಲ ಆಕ್ಟ್ ಮಾಡ್ತಿದ್ದಾರೆ ಎಂದು ಇದುವರೆಗೂ ಯಾರಿಗೂ ತಿಳಿದಿರಲಿಲ್ಲ. ಇಡೀ ಚಿತ್ರರಂಗದ ಶೂಟಿಂಗ್ ಮತ್ತೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ರಿಷಬ್ ಶೆಟ್ಟಿ ಶೂಟಿಂಗ್ ಮಾಡಿ ರಿಲೀಸ್ ಗೆ ಸಿದ್ಧವಾಗಿಬಿಟ್ಟಿದ್ದಾರೆ.

ನಾಳೆ ಮತ್ತೆ ಭೇಟಿಯಾಗೋಣ

ನಾಳೆ ಮತ್ತೆ ಭೇಟಿಯಾಗೋಣ

'ಸರ್ಪ್ರೈಸ್ ಅಂತ ಹಾಕಿದ್ವಲ್ಲ... ಅದ್ಕೆ ಸ್ವಲ್ಪ ಬೇಗನೇ ಬಂದ್ವಿ. ಸಾರಿ...ಜಾಸ್ತಿ ದಿನ ಮನೇಲಿ ಸುಮ್ಮ್ನೆ ಕುತ್ಕೊಳ್ಳೊಕ್ ಆಗ್ದೆ ಸಿನೆಮಾ ಮಾಡ್ಕೊಂಡ್ ಬಂದಿದ್ದೀವಿ, ಅದ್ನ ಹೇಳೋಣ ಅಂತ ಬಂದಿದ್ದು. ಟೈಟಲ್, ಫಸ್ಟ ಲುಕ್ ಹಾಗೂ ಉಳಿದ ವಿವರಗಳೊಂದಿಗೆ ನಾಳೆ ಮತ್ತೆ ಭೇಟಿಯಾಗೋಣ' ಎಂದಿದ್ದಾರೆ.

Recommended Video

ಧನ್ವೀರ್ ಯಶಸ್ಸು ನೋಡಿ ಖುಷಿಪಟ್ಟ ಸ್ನೇಹಿತ | Filmibeat Kannada
ರಿಷಬ್ ಮಾಡುತ್ತಿರುವ ಚಿತ್ರಗಳ ವಿವರ

ರಿಷಬ್ ಮಾಡುತ್ತಿರುವ ಚಿತ್ರಗಳ ವಿವರ

ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿಣಿ ಕಥೆ, ಬೆಲ್‌ ಬಾಟಂ 2 ಹಾಗೂ ಇನ್ನು ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Kannada director Rishab Shetty and team was completed new movie shooting during the coronavirus lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X