For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಭರ್ಜರಿ ಯಶಸ್ಸು: ಚಿತ್ರವನ್ನು ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದ ರಿಷಬ್ ಶೆಟ್ಟಿ!

  |

  'ಕಾಂತಾರ' ಸದ್ಯ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಚಿತ್ರದ ಹೆಸರು. ಬಹುಶಃ ಇನ್ನೊಂದೆರಡು ವಾರಗಳ ಕಾಲ ಈ ಹೆಸರು ಸತತವಾಗಿ ಕೇಳಿಬರುತ್ತಲೇ ಇರುತ್ತದೆ ಎನ್ನಬಹುದು. ಹೌದು, ಶುಕ್ರವಾರ ಬಿಡುಗಡೆಗೊಂಡ ಕಾಂತಾರ ಸಿನಿಮಾ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ವೀಕ್ಷಕನ ಮೆಚ್ಚುಗೆಗೂ ಪಾತ್ರವಾಗಿದೆ. ಕರಾವಳಿ ಭಾಗದ ಜನರಿಗೆ ಮಾತ್ರ ತಿಳಿದಿದ್ದ ಭೂತ ಕೋಲ, ದೈವನರ್ತನದ ಮಹತ್ವವನ್ನು ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ಇದೀಗ ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ.

  ರಿಷಬ್ ಶೆಟ್ಟಿ 'ಕಾಂತಾರ' 2ನೇ ದಿನದ ಕಲೆಕ್ಷನ್ ಎಷ್ಟು? ಮೂರು ದಿನ ಲೆಕ್ಕಾಚಾರವೇನು?ರಿಷಬ್ ಶೆಟ್ಟಿ 'ಕಾಂತಾರ' 2ನೇ ದಿನದ ಕಲೆಕ್ಷನ್ ಎಷ್ಟು? ಮೂರು ದಿನ ಲೆಕ್ಕಾಚಾರವೇನು?

  ಚಿತ್ರದ ಮೇಕಿಂಗ್, ಕಲಾವಿದರ ಅಭಿನಯ, ನಿರ್ದೇಶನ, ಕತೆ, ಸಂಗೀತ, ಛಾಯಾಗ್ರಹಣ ಹೀಗೆ ಕಾಂತಾರ ಎಲ್ಲಾ ವಿಭಾಗಗಳಲ್ಲಿಯೂ ಪರ್ಫೆಕ್ಟ್ ಆಗಿರುವ ಕಾರಣ ಚಿತ್ರವನ್ನು ವೀಕ್ಷಕರು ಒಪ್ಪಿ ಅಪ್ಪಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನೆಯಲ್ಲಿಯೂ ಸಹ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಚಿತ್ರದುದ್ದಕ್ಕೂ ಅದ್ಭುತ ನಟನೆ ಮಾಡಿರುವ ರಿಷಬ್ ಶೆಟ್ಟಿ ಅಂತಿಮ ಇಪ್ಪತ್ತು ಸಿನಿಮಾಗಳಲ್ಲಿ ಪ್ರೇಕ್ಷಕ ನಿಬ್ಬೆರಗಾಗಿ ನೋಡುವಂತಹ ಅತ್ಯದ್ಭುತ ನಟನೆ ಮಾಡಿದ್ದಾರೆ.

  'ಅಪ್ಪು ಪಪ್ಪು' ಸ್ನೇಹಿತ್ ವಿವಾದ: ಸ್ನೇಹಿತ್ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸಿದ ಉಪೇಂದ್ರ ಮತ್ತು ಪ್ರೇಮ್'ಅಪ್ಪು ಪಪ್ಪು' ಸ್ನೇಹಿತ್ ವಿವಾದ: ಸ್ನೇಹಿತ್ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸಿದ ಉಪೇಂದ್ರ ಮತ್ತು ಪ್ರೇಮ್

  ಇನ್ನು ಜನರು ಕಾಂತಾರ ಚಿತ್ರವನ್ನು ಮೆಚ್ಚಿಕೊಂಡ ಕಾರಣ ಚಿತ್ರತಂಡ ನಿನ್ನೆ ವಿಶೇಷ ಪತ್ರಿಕಾಗೋಷ್ಟಿ ನಡೆಸಿ ಸಕ್ಸಸ್ ಮೀಟ್ ನಡೆಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ಚಿತ್ರ ಹೇಗೆ ಹುಟ್ಟಿತು ಎಂಬುದನ್ನು ವಿವರಿಸಿದ್ದಾರೆ ಹಾಗೂ ಚಿತ್ರವನ್ನು ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಪಿಸುವುದರ ಮೂಲಕ ಮನಗೆದ್ದಿದ್ದಾರೆ.

  ಇಬ್ಬರಿಗೆ ಕಾಂತಾರ ಅರ್ಪಣೆ

  ಇಬ್ಬರಿಗೆ ಕಾಂತಾರ ಅರ್ಪಣೆ

  ರಿಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಹಾಗೂ ದೈವ ನರ್ತಕರಿಗೆ ಹಾಗೂ ಅವರ ಕುಟುಂಬಗಳಿಗೆ ಅರ್ಪಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಪತ್ನಿ ಪ್ರಗತಿ ಪ್ರಗ್ನೆಂಟ್ ಆಗಿದ್ದಾಗ ಹುಟ್ಟುಕೊಂಡಿದ್ದ ಕತೆ ಇದು, ಇಂದು ತನ್ನ ಮಗು ಹಾಗೂ ಈ ಕಾಂತಾರ ಮಗು ಎರಡೂ ಚೆನ್ನಾಗಿವೆ ಎಂದು ರಿಷಬ್ ಕಾಂತಾರ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಚಿತ್ರದಲ್ಲಿ ಅಪ್ಪು ನಟಿಸಬೇಕಿತ್ತು

  ಚಿತ್ರದಲ್ಲಿ ಅಪ್ಪು ನಟಿಸಬೇಕಿತ್ತು

  ಇನ್ನು ಈ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೇ ಮಾಡಬೇಕಿತ್ತು ಎಂಬ ವಿಷಯವನ್ನು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು. ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡುವಾಗ ವಿಜಯ್ ಅವರು ಈ ಚಿತ್ರವನ್ನು ಯಾರಾದರೂ ಸ್ಟಾರ್ ಮಾಡಬಹುದಾ ಎಂದಾಗ ರಿಷಬ್ ಅವರು ಚಿತ್ರದಲ್ಲಿ ಆಕ್ಷನ್ ಹೆಚ್ಚಿರುವ ಕಾರಣ ಇದನ್ನು ಅಪ್ಪು ಸರ್ ಮಾತ್ರ ಮಾಡಬಹುದು ಎಂದಿದ್ದರು. ಅದರಂತೆ ವಿಜಯ್ ಕಿರಗಂದೂರು ಅಪ್ಪು ಅವರನ್ನು ಕರೆಸಿ ರಿಷಬ್ ಶೆಟ್ಟಿ ಬಳಿ ಕತೆಯನ್ನೂ ಹೇಳಿಸಿದ್ದರು ಹಾಗೂ ಅಪ್ಪು ಕತೆಗೆ ಫಿದಾ ಆಗಿ ಗ್ರೀನ್ ಸಿಗ್ನಲ್ ಅನ್ನೂ ಸಹ ನೀಡಿದ್ದರು. ಆದರೆ ಅಪ್ಪು ಬೇರೆ ಚಿತ್ರಗಳಲ್ಲಿ ನಿರತರಾಗಿದ್ದ ಕಾರಣ ಡೇಟ್ ಸಮಸ್ಯೆ ಎದುರಾಗಿ ಈ ಹಿಂದಿನ ಯೋಜನೆಯಂತೆ ಚಿತ್ರದಲ್ಲಿ ನೀವೇ ಅಭಿನಯಿಸಿ ಎಂದು ರಿಷಬ್ ಶೆಟ್ಟಿಗೆ ಹೇಳಿಕೆ ನೀಡಿದ್ದರು.

  ಚಿತ್ರ ಆರಂಭಕ್ಕೂ ಮುನ್ನ ಅಪ್ಪುಗೆ ನಮನ

  ಚಿತ್ರ ಆರಂಭಕ್ಕೂ ಮುನ್ನ ಅಪ್ಪುಗೆ ನಮನ

  ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ಆರಂಭದಲ್ಲಿ ಅಪ್ಪು ಅವರ ಫೋಟೊಗಳ ಎಡಿಟ್ ಮಾಡಿ 'ಸೂರ್ಯನೊಬ್ಬ ಚಂದ್ರನೊಬ್ಬ.. ರಾಜನೂ ಒಬ್ಬ' ಎಂಬ ಹಾಡಿನ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಿದ್ದ ಹೊಂಬಾಳೆ ಫಿಲ್ಮ್ಸ್ ಕಾಂತಾರದಲ್ಲಿಯೂ ಅದೇ ವಿಡಿಯೋ ಬಳಸಿ ಅಪ್ಪುಗೆ ಗೌರವ ನೀಡಿದೆ. ಈ ವಿಡಿಯೋ ತೆರೆ ಮೇಲೆ ಬರ್ತಾ ಇದ್ದಂತೆ ಪ್ರೇಕ್ಷಕ ತಾನೇ ಸುಮ್ಮನೆ ಕೂರೋಕೆ ಹೇಗೆ ಸಾಧ್ಯ ಹೇಳಿ.

  English summary
  Rishab Shetty dedicates Kantara movie to Puneeth Rajkumar and Daiva Narthakas
  Sunday, October 2, 2022, 8:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X