ಚಿತ್ರೀಕರಣ ವೇಳೆ ಅವಘಡ; ರಿಷಬ್ ಶೆಟ್ಟಿ ತೆಲೆಗೆ ತಗುಲಿದ ಬೆಂಕಿ
ಹೀರೋ ಚಿತ್ರೀಕರಣ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿ ತಲೆಗೆ ಮತ್ತು ಬೆನ್ನಿಗೆ ಬೆಂಕಿ ತಗುಲಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಸನದಲ್ಲಿ ನಡೆದ ಚಿತ್ರೀಕರಣ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ರಿಷಬ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Recommended Video
ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೀರೋ ಸಿನಿಮಾದ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಚಿತ್ರೀಕರಣಕ್ಕಾಗಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಬೆಂಕಿ ತಗುಲಿದೆ. ನಟ ರಿಷಬ್ ಶೆಟ್ಟಿ ತಲೆ ಮತ್ತು ಬೆನ್ನಿಗೆ ಬೆಂಕಿ ತಗುಲಿಗೆ, ಕೂದಲು ಸುಟ್ಟು ಹೋಗಿದ್ದು, ಬೆನ್ನಿಗೆ ಗಾಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ರಿಷಬ್ ಶೆಟ್ಟಿ ಮತ್ತು ತಂಡ ದೊಡ್ಡ ಗಂಡಾಂತರದಿಂದ ಪಾರಾಗಿದ್ದು, ಸ್ವಲ್ಪ ಯಾಮಾರಿದ್ದರೂ ಪ್ರಾಣಕ್ಕೆ ಕುತ್ತು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಸದ್ಯ ಸಿನಿಮಾತಂಡ ಎಲ್ಲಾ ಗಂಡಾಂತರಗಳನ್ನು ದಾಟಿಬಂದಿದ್ದು, ಸಿನಿಮಾ ರಿಲೀಸ್ ಗೆ ಭರ್ಜರಿ ತಯಾರಿ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ನಿರೀಕ್ಷೆ ಮತ್ತು ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಚಿತ್ರದಿಂದ ಬಂದಿರುವ ಒಂದು ಹಾಡು ಸಹ ಗಾನಪ್ರಿಯರ ಮನಗೆದ್ದಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ಕಿರುತೆರೆಯ ಖ್ಯಾತ ನಟಿ ಗಾನವಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಹೀರೋ ಸಿನಿಮಾ ಹೇಗಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.


Click it and Unblock the Notifications











