twitter
    For Quick Alerts
    ALLOW NOTIFICATIONS  
    For Daily Alerts

    ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ ಆಯ್ಕೆ

    |

    ಪ್ರತಿಷ್ಠಿತ ಕಾನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದ್ದು, ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌ನಲ್ಲಿ ನಟೇಶ್ ಹೆಗ್ಡೆ ನಿರ್ದೇಶನ 'ಪೆಡ್ರೋ' ಆಯ್ಕೆಯಾಗಿದೆ.

    Recommended Video

    ಅಣ್ಣಾವ್ರ ಜೊತೆ ಅಭಿನಯಿಸಿದ ಈ ನಟಿ ವಿಮಾನ ಹಾರಿಸುತ್ತಾರೆ ಗೊತ್ತಾ? | Madhavi now a Aircraft Pilot

    ಕಾನ್ ಸಿನಿಮೋತ್ಸವದ ಶೋಕೇಸ್ 'ಗೋಸ್ ಫಾರ್ ಕಾನ್'ಗೆ ವೇದಿಕೆಯಾಗಿರುವ ಜಗತ್ತಿನ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದಾದ ಮಾರ್ಚೆ ಡು ಫಿಲ್ಮ್ (ಸಿನಿಮಾ ಮಾರುಕಟ್ಟೆ) ವಿವಿಧ ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಭಾರತದ ಎನ್‌ಎಫ್‌ಡಿಸಿಗೆ ಪ್ರತ್ಯೇಕ ಸ್ಥಾನ ನೀಡಲಾಗಿದ್ದು, ಇದೇ ಮೊದಲ ಬಾರಿ ಎನ್‌ಎಫ್‌ಡಿಸಿ ಫಿಲ್ಮ್‌ ಬಜಾರ್‌ನಲ್ಲಿ ಐದು ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕನ್ನಡದ 'ಪೆಡ್ರೋ' ಕೂಡ ಸೇರಿದೆ.

    ನಟೇಶ್ ಹೆಗ್ಡೆ ಮೊದಲ ಸಿನಿಮಾ

    ನಟೇಶ್ ಹೆಗ್ಡೆ ಮೊದಲ ಸಿನಿಮಾ

    ನಟೇಶ್ ಹೆಗ್ಡೆ ಚೊಚ್ಚಲ ನಿರ್ದೇಶನದ ಚಿತ್ರವನ್ನು ರಿಷಬ್ ಶೆಟ್ಟಿ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಮಾರ್ಚೆ ಡು ಫಿಲ್ಮ್‌ನಲ್ಲಿ 'ಗೋಸ್ ಟು ಕಾನ್‌'ಗೆ ತಮ್ಮ ಚಿತ್ರ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ರಿಷಬ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.

    ಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರ

    ಜೂನ್ 22-24ರಂದು ಪ್ರದರ್ಶನ

    ಜೂನ್ 22-24ರಂದು ಪ್ರದರ್ಶನ

    ಜೂನ್ 22-24ರ ಅವಧಿಯಲ್ಲಿ ಆನ್‌ಲೈನ್ ಮೂಲಕ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಚಿತ್ರೋದ್ಯಮದ ಪರಿಣತರು ಜೂನ್ 24ರಂದು ಸಿನಿಮಾ ನಿರ್ಮಾರ್ತೃಗಳ ಜತೆ 'ಗೋಸ್ ಟು ಕಾನ್ ಸ್ಪೀಡ್ ಮೀಟಿಂಗ್‌'ಗಳಲ್ಲಿ ಸಂವಾದ ನಡೆಸುತ್ತಾರೆ. ವಿವಿಧ ದೇಶಗಳ, ಭಾಷೆಗಳ ಒಟ್ಟು 20 ಚಿತ್ರಗಳು ಇದಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ 'ಪೆಡ್ರೋ' ಕೂಡ ಸೇರಿದೆ.

    ಭಾರತದ ಐದು ಸಿನಿಮಾಗಳು

    ಭಾರತದ ಐದು ಸಿನಿಮಾಗಳು

    ಎನ್‌ಎಫ್‌ಡಿಸಿ ಫಿಲ್ಮ್ ಬಜಾರ್‌ನಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ 'ಪೆಡ್ರೋ', ಪ್ರಸೂನ್ ಚಟರ್ಜಿ ನಿರ್ದೇಶನದ 'ಟೂ ಫ್ರೆಂಡ್ಸ್', ಅಜಿತ್ ಪಾಲ್ ಸಿಂಗ್ ಅವರ 'ಫೈರ್ ಇನ್ ದಿ ಮೌಂಟೇನ್ಸ್', ಇರ್ಫಾನಾ ಮಜುಂದಾರ್ ನಿರ್ದೇಶನದ 'ಶಂಕರ್ಸ್ ಫೇರೀಸ್', ಆಶೀಶ್ ಪಂತ್ ಅವರ 'ದಿ ನಾಟ್' ಚಿತ್ರಗಳು ಆಯ್ಕೆಯಾಗಿವೆ.

    ರಿಷಬ್ ಶೆಟ್ಟಿ ಚಿತ್ರದಲ್ಲಿ ಶೈನ್ ಶೆಟ್ಟಿ: ಬಿಗ್ ಬಾಸ್ ವಿನ್ನರ್‌ಗೆ ಒಲಿದ ಪ್ರಮುಖ ಪಾತ್ರ?ರಿಷಬ್ ಶೆಟ್ಟಿ ಚಿತ್ರದಲ್ಲಿ ಶೈನ್ ಶೆಟ್ಟಿ: ಬಿಗ್ ಬಾಸ್ ವಿನ್ನರ್‌ಗೆ ಒಲಿದ ಪ್ರಮುಖ ಪಾತ್ರ?

    ಹಳ್ಳಿಯೊಂದರಲ್ಲಿನ ಕಥೆ

    ಹಳ್ಳಿಯೊಂದರಲ್ಲಿನ ಕಥೆ

    ಹಾಂಕಾಂಗ್ ಏಷ್ಯಾ ಫಿಲ್ಮ್ ಫೈನಾನ್ಸಿಂಗ್ ಫೋರಂ (ಎಚ್‌ಎಎಫ್) ಅಡಿಯಲ್ಲಿ ಕೂಡ ಸಮರ್ಥ್ ಮಹಾರ್ಜನ್ ನಿರ್ದೇಶನದ 'ದಿ ಬಾರ್ಡರ್‌ಲ್ಯಾಂಡ್ಸ್' ಎಂಬ ಭಾರತೀಯ ಚಿತ್ರ ಆಯ್ಕೆಯಾಗಿದೆ. ಕುಗ್ರಾಮವೊಂದರಲ್ಲಿ ಆಕಸ್ಮಿಕವಾಗಿ ತಪ್ಪು ಎಸಗುವ ಮಧ್ಯ ವಯಸ್ಕ ಲೈನ್‌ಮ್ಯಾನ್‌ ಮತ್ತು ಅದಕ್ಕೆ ಅನಿರೀಕ್ಷಿತ ರೀತಿಯಲ್ಲಿ ಹಳ್ಳಿ ಪ್ರತಿಕ್ರಿಯಿಸುವ ಕಥೆ 'ಪೆಡ್ರೋ' ಚಿತ್ರದಲ್ಲಿದೆ.

    'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬರ್ತಿದ್ದಾರೆ ರಿಷಬ್: ಏನಿದು ಶೆಟ್ರಾ ಹೊಸ ಕಥೆ?'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬರ್ತಿದ್ದಾರೆ ರಿಷಬ್: ಏನಿದು ಶೆಟ್ರಾ ಹೊಸ ಕಥೆ?

    English summary
    Rishab Shetty produced, Natesh Hegde directed movie Pedro selected for Goes to Cannes showcase at Marche du Film.
    Wednesday, May 27, 2020, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X