Kantara- 3: ಕ್ಲೈಮ್ಯಾಕ್ಸ್‌ನಲ್ಲಿ ಬಿಗ್‌ ಟ್ವಿಸ್ಟ್; 'ಕಾಂತಾರ' ಪಾರ್ಟ್- 3 ಕೂಡ ಕನ್ಫರ್ಮ್

ರಿಷಬ್ ಶೆಟ್ಟಿ ಮತ್ತೆ ಗೆದ್ದಿದ್ದಾರೆ. ಮತ್ತೆ ತೆರೆಮೇಲೆ ದೈವ ದರ್ಶನ ಮಾಡಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. 3 ವರ್ಷಗಳ ಹಿಂದಿನ 'ಕಾಂತಾರ' ಚಿತ್ರವನ್ನು ಮರೆಸುವಂತೆ ಪ್ರೀಕ್ವೆಲ್ ಕಟ್ಟಿಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ದಂತಕತೆಯನ್ನು ಮುಂದುವರೆಸುತ್ತಿದ್ದಾರೆ. ಅದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇತ್ತೀಚೆಗೆ 'ಕಾಂತಾರ- 2' ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆಗಳು ಎದುರಾಗಿತ್ತು. ನೋಡೋಣ ಮುಂದಿನ ದಿನಗಳಲ್ಲಿ, ಸದ್ಯಕ್ಕೆ ನನಗೆ ಕೊಂಚ ವಿಶ್ರಾಂತಿ ಬೇಕು ಎಂದು ಹೇಳುತ್ತಾ ಬರುತ್ತಿದ್ದರು. ಇದೀಗ ಚಾಪ್ಟರ್-1 ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ಕ್ಲೈಮ್ಯಾಕ್ಸ್‌ನಲ್ಲಿ ಮತ್ತೊಂದು ಭಾಗ ಸಿನಿಮಾ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೊನೆಯಲ್ಲಿ ಮುಂದಿನ ಭಾಗಕ್ಕೆ ಸುಳಿವು ಕೊಟ್ಟು ಚಿತ್ರವನ್ನು ಮುಗಿಸಿದ್ದಾರೆ.

Rishab Shetty Hints at Kantara-3 After Chapter-1 Success Continuation of the Legend Teased

'ಕಾಂತಾರ' ಚಿತ್ರದ ಕಥೆಯನ್ನು ಮುಂದುವರಸುವ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿ "ಕಾಂತಾರ' ಚಿತ್ರದ ಮೊದಲ ಪೋಸ್ಟರ್ ಬಿಟ್ಟಿದ್ವಿ. ಅದರಲ್ಲಿ ಒಂದು ಬಾವಿಯ ಚಿತ್ರ ಇತ್ತು. ಚಾಪ್ಟರ್-1 ಪೋಸ್ಟರ್‌ ಫಸ್ಟ್ ಗ್ಲಿಂಪ್ಸ್‌ನಲ್ಲಿ ನಾಯಕನನ್ನು ಬಾಯಿಯೊಳಗಿನಿಂದ ತೋರಿಸಲಾಗಿತ್ತು. ಅಂದರೆ ಆ ಬಾವಿಯಲ್ಲಿ ಸಾಕಷ್ಟು ಕಥೆಗಳಿವೆ. ಇನ್ನು ಎಷ್ಟು ಕಥೆಗಳು ಬರುತ್ತವೆ ಎನ್ನುವುದು ಗೊತ್ತಿಲ್ಲ" ಎಂದಿದ್ದರು. 3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದಲ್ಲಿ ಬಾವಿಯನ್ನು ತೋರಿಸಿರಲಿಲ್ಲ. ಆ ಬಾವಿ ಮುಚ್ಚಿ ಹೋಗಿದ್ದೇಗೆ? ಎನ್ನುವ ಕಥೆಯನ್ನು ಚಾಪ್ಟರ್‌- 3ನಲ್ಲಿ ರಿಷಬ್ ಶೆಟ್ಟಿ ಹೇಳಲಿದ್ದಾರೆ. ಸದ್ಯ ಪ್ರೀಕ್ವೆಲ್‌ನಲ್ಲಿ ಅದಕ್ಕೆ ಲಿಂಕ್ ಕೂಡ ಕೊಟ್ಟಿದ್ದಾರೆ.

ಈ ಹಿಂದೆ 'ಕೆಜಿಎಫ್- 2' ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಇದೇ ರೀತಿ ಟ್ವಿಸ್ಟ್ ಇಟ್ಟು ಚಾಪ್ಟರ್- 3 ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಸಿನಿರಸಿಕರು ಇವತ್ತಿಗೂ ಮತ್ತೆ ರಾಕಿಭಾಯ್ ಆರ್ಭಟ ನೋಡಲು ಕಾಯುತ್ತಿದ್ದಾರೆ. ಅದೇ ರೀತಿ ಮತ್ತೆ ದಂತಕತೆ ಕೇಳಲು ಸಿನಿರಸಿಕರು ಉತ್ಸುಕರಾಗುವಂತೆ ರಿಷಬ್ ಶೆಟ್ಟಿ ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಟ್ರೆಂಡ್‌ನಲ್ಲಿ ಸೀಕ್ವೆಲ್ ಸಿನಿಮಾಗಳ ಭರಾಟೆ ಕೂಡ ಜೋರಾಗಿದೆ. ಆದರೆ ಬಲವಂತವಾಗಿ ಕೆಲವರು ಕಥೆಯನ್ನು ಜಗ್ಗಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಕೆಲ ಕಥೆಗಳನ್ನು ಮತ್ತೆ ಮತ್ತೆ ನೋಡಲು ಪ್ರೇಕ್ಷಕರು ಬಯಸುತ್ತಾರೆ. ಅಂಥದ್ದೇ ಕಥೆ ಇದು. ಚಾಪ್ಟರ್-1 ನೋಡಿದ ಮೇಲೆ ಚಾಪ್ಟರ್-3 ಚಿತ್ರವನ್ನು ಮತ್ತಷ್ಟು ಸೊಗಸಾಗಿ ರಿಷಬ್ ಶೆಟ್ಟಿ ಕಟ್ಟಿಕೊಡುತ್ತಾರೆ ಎನ್ನುವ ಭರವಸೆ ಮೂಡಿದೆ. ಆದರೆ ಸದ್ಯಕ್ಕಲ್ಲ ಎನ್ನುವುದು ಗೊತ್ತಾಗುತ್ತಿದೆ.

'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ ಬೇರೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಶೀಘ್ರದಲ್ಲೇ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಬೇಕಿದೆ. ಬಳಿಕ ಶಿವಾಜಿ ಬಯೋಪಿಕ್ ಹಾಗೂ ತೆಲುಗಿನ ಮತ್ತೊಂದು ಚಿತ್ರದಲ್ಲಿ ನಟಿಸಬೇಕಿದೆ. ಆ ಬಳಿಕವೇ 'ಕಾಂತಾರ' - 3 ಬಗ್ಗೆ ಯೋಚಿಸಲಿದ್ದಾರೆ.

'ಕಾಂತಾರ- 1' ಚಿತ್ರ ಎಲ್ಲಾ ವಿಭಾಗಗಳಲ್ಲಿ ಅದ್ಭುತ ಎನ್ನಬಹುದು. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಎರಡರಲ್ಲೂ ಗೆದ್ದಿದ್ದಾರೆ. ರುಕ್ಮಿಣಿ ವಸಂತ್, ಪ್ರಮೋದ್ ಶೆಟ್ಟಿ, ಜಯರಾಂ, ಗುಲ್ಶನ್ ದೇವಯ್ಯ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಟೆಕ್ನಿಕಲಿ ಸಿನಿಮಾ ಸೂಪರ್ ಎನ್ನಬಹುದು. ವಿಷ್ಯುವಲಿ ಸಿನಿಮಾ ಅದ್ಭುತ ಅನುಭವ ಕೊಡುತ್ತದೆ. ಅದೇ ಕಾರಣಕ್ಕೆ ಪಾರ್ಟ್-3 ಬಂದರೂ ಪ್ರೇಕ್ಷಕರು ಸಿನಿಮಾ ನೋಡಲು ಸಿದ್ಧರಿದ್ದಾರೆ.

ರಿಷಬ್ ಶೆಟ್ಟಿ ಬೇರೆ ಬೇರೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ 'ಕಾಂತಾರ- 2' ಸಿನಿಮಾ ನೋಡಲು ಇನ್ನು ನಾಲ್ಕೈದು ವರ್ಷ ಕಾಯಬೇಕು. ಬೇರೆ ಕಮೀಟ್‌ಮೆಂಟ್ ಎಲ್ಲಾ ಮುಗಿಸಿ ರಿಷಬ್ ಮತ್ತೆ ಯಾವಾಗ 'ಕಾಂತಾರ' ಪ್ರಪಂಚಕ್ಕೆ ಹೋಗಲು ಮನಸ್ಸು ಮಾಡುತ್ತಾರೋ ಕಾದು ನೋಡಬೇಕು.

More from Filmibeat

English summary
Rishab Shetty Sparks Buzz About ‘Kantara-3’ Following the Success of Chapter-1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X