ರಕ್ಷಿತ್ ಶೆಟ್ಟಿ ಫ್ಯಾನ್ ಆಗಿ ಥಿಯೇಟರ್‌ಗೆ ಬಂದಿದ್ದ ಪ್ರಗತಿ ರಿಷಬ್ ಶೆಟ್ಟಿ ಜತೆ ಲವ್‌ನಲ್ಲಿ ಬಿದ್ದದ್ದು ಹೇಗೆ?

ಸದ್ಯ ಕಾಂತಾರ ಸಿನಿಮಾ ಮೂಲಕ ಇಡೀ ದೇಶಕ್ಕೆ ರೀಚ್ ಆಗಿ ದೊಡ್ಡ ಮಟ್ಟದ ಪ್ರಶಂಸೆ ಗಿಟ್ಟಿಸಿಕೊಂಡಿರುವ ರಿಷಬ್ ಶೆಟ್ಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಜೋರಾಗಿವೆ. ಕೇವಲ ಸಿನಿಮಾಗಳ ಕುರಿತಾಗಿ ಮಾತ್ರವಲ್ಲದೇ ವೈಯಕ್ತಿಕ ವಿಷಯಗಳ ಬಗ್ಗೆಯೂ ರಿಷಬ್ ಶೆಟ್ಟಿ ಸುದ್ದಿ ಮಾಡಿದ್ದರು.

ಕಾಂತಾರ ಸಕ್ಸಸ್ ಆದ ಬೆನ್ನಲ್ಲೇ ರಿಷಬ್ ಶೆಟ್ಟಿ ತಮ್ಮ ಮಗಳ ಫೋಟೊವನ್ನು ರಿವೀಲ್ ಮಾಡಿದ್ದರು. ಈ ಮೂಲಕ ರಿಷಬ್ ಶೆಟ್ಟಿ ಕುಟುಂಬದ ಬಗ್ಗೆ ಗೂಗಲ್‌ನಲ್ಲಿ ಹಲವರು ಹುಡುಕಿದ್ದರು. ಇನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಹ ನಟಿಸಿದ್ದ ವಿಚಾರವೂ ಸಹ ವೈರಲ್ ಆಗಿ ಈ ಜೋಡಿ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದೂ ಸಹ ಹೊರಬಿದ್ದಿತ್ತು.

ಹೌದು, ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು ಎಲ್ಲಿಯೂ ಹೆಚ್ಚಾಗಿ ಹೇಳಿಕೊಳ್ಳದ ಈ ಜೋಡಿ ಕಾಂತಾರ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿತ್ತು. ಪ್ರಗತಿ ಶೆಟ್ಟಿ ತನ್ನ ಹಾಗೂ ರಿಷಬ್ ಶೆಟ್ಟಿ ಪರಿಚಯ ಹೇಗಾಯ್ತು, ಇಬ್ಬರ ನಡುವೆ ಸ್ನೇಹ ಹೇಗೆ ಬೆಳೆಯಿತು ಹಾಗೂ ಅದಕ್ಕೆ ಕಾರಣವೇನು ಮತ್ತು ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದರು.

ರಿಷಬ್ ಶೆಟ್ಟಿ ಹೆಸರೂ ಸಹ ಗೊತ್ತಿರಲಿಲ್ಲ!

ರಿಷಬ್ ಶೆಟ್ಟಿ ಹೆಸರೂ ಸಹ ಗೊತ್ತಿರಲಿಲ್ಲ!

ಮೊದಲಿಗೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟನೆ ಮಾಡಿದ್ದ ರಿಷಬ್ ಶೆಟ್ಟಿ ಮೊದಲಿಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಕ್ಕಿ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಜರ್ನಿ ಶುರು ಮಾಡಿದ್ದರು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ತಾನು ಚಿತ್ರ ನೋಡಲು ಸ್ನೇಹಿತೆಯರೊಡನೆ ಚಿತ್ರಮಂದಿರಕ್ಕೆ ಬಂದಾಗ ತನ್ನ ಗೆಳತಿಯರು ರಿಷಬ್ ಶೆಟ್ಟಿ ಅವರನ್ನು ತೋರಿಸಿ ಅವರೇ ನಿರ್ದೇಶಕರು ಎಂದು ಹೇಳಿದರು, ಆಗ ಅವರ ಹೆಸರೂ ಸಹ ತನಗೆ ತಿಳಿದಿರಲಿಲ್ಲ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡರು.

ಚಿತ್ರಮಂದಿರದಲ್ಲೇ ಫೋಟೊ, ಪರಿಚಯ!

ಚಿತ್ರಮಂದಿರದಲ್ಲೇ ಫೋಟೊ, ಪರಿಚಯ!

ಇನ್ನು ಉಳಿದವರು ಕಂಡಂತೆ ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ ನೋಡಲು ಚಿತ್ರಮಂದಿರಕ್ಕೆ ಬಂದು ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಹೌದು, ಎಲ್ಲರೂ ರಕ್ಷಿತ್ ಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು ಹಾಗೂ ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ನ್ನು ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜತೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು ಎಂದು ಪ್ರಗತಿ ಶೆಟ್ಟಿ ತಿಳಿಸಿದರು. ಇನ್ನು ಆ ದಿನದಂದು ಪ್ರಗತಿ ಶೆಟ್ಟಿ ರಿಷಬ್ ಜತೆ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊವನ್ನು ಕಳೆದ ಬಾರಿಯ ವಿವಾಹ ವಾರ್ಷಿಕೋತ್ಸವದ ದಿನದಂದು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು.

ಪ್ರಗತಿಗಾಗಿ ಫೇಸ್‌ಬುಕ್‌ನಲ್ಲಿ ರಿಷಬ್ ಹುಡುಕಾಟ, ಪ್ರೀತಿ, ಗೀತಿ, ಮದುವೆ..

ಪ್ರಗತಿಗಾಗಿ ಫೇಸ್‌ಬುಕ್‌ನಲ್ಲಿ ರಿಷಬ್ ಹುಡುಕಾಟ, ಪ್ರೀತಿ, ಗೀತಿ, ಮದುವೆ..

ಹೀಗೆ ಚಿತ್ರಮಂದಿರದಲ್ಲಿ ಪ್ರಗತಿ ಹೇಳಿದ ಮಾತುಗಳಿಗೆ ಮಾರುಹೋದ ರಿಷಬ್ ಶೆಟ್ಟಿ, ಪ್ರಗತಿಯ ಫೇಸ್‌ಬುಕ್ ಖಾತೆ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಇಬ್ಬರ ನಡುವೆ ಚಾಟಿಂಗ್ ನಡೆದು, ಸ್ನೇಹ ಬೆಳೆದಿತ್ತು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷದ ಒಳಗೇ ಇಬ್ಬರೂ ವಿವಾಹವಾದೆವು ಎಂದು ಪ್ರಗತಿ ಹೇಳಿಕೊಂಡಿದ್ದರು. ಸದ್ಯ ಈ ಇಬ್ಬರೂ ವಿವಾಹವಾಗಿ ಆರು ವರ್ಷಗಳು ಕಳೆದಿದ್ದು, ಇಬ್ಬರು ಮಕ್ಕಳೂ ಸಹ ಇದ್ದಾರೆ.

More from Filmibeat

English summary
Rishab Shetty Love Story: Rishab Shetty met Pragathi in theatre for the first time. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X