ರಿಷಬ್ ಶೆಟ್ಟಿ ಮುಂದಿನ ಸಿನಿಮಾ 'ರುದ್ರಪ್ರಯಾಗ'
ನಿರ್ದೇಶಕನಾಗಿ ಗೆದ್ದು, ಈಗ ನಟನಾಗಿಯೂ ವಿಜಯ ಸಾಧಿಸಿದ ರಿಷಬ್ ಶೆಟ್ಟಿ ಈಗ ತಮ್ಮ ಮುಂದಿನ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ರಿಷಬ್ ಇಂದು (ಜುಲೈ 7) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷವಾಗಿ ತಮ್ಮ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 'ರುದ್ರಪ್ರಯಾಗ' ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾವಾಗಿದೆ.
'ರುದ್ರಪ್ರಯಾಗ' ಎಂಬ ಟೈಟಲ್ ಅನೇಕರಿಗೆ ವಿಶೇಷ ಅನಿಸುತ್ತದೆ. ಇದು ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮಸ್ಥಾನ. ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ 5 ಸಂಗಮಕ್ಷೇತ್ರಗಳ ಪೈಕಿ ಒಂದು. ಈ ಹೆಸರನ್ನು ಸಿನಿಮಾ ಇಟ್ಟಿದ್ದು, ಕುತೂಹಲ ಉಂಟು ಮಾಡಿದ್ದಾರೆ.

ಸಿನಿಮಾದ ಪೋಸ್ಟರ್ ನಲ್ಲಿ ಚಿರತೆ, ಕಾಡು, ನದಿ ಇದೆ. ಜೊತೆಗೆನೇ ನಗರ, ರಾಣಿ ಚೆನ್ನಮ್ಮ ಪ್ರತಿಮೆ, ವಿಧಾನ ಸೌಧವೂ ಇದೆ. ಹೀಗಾಗಿ ಪೋಸ್ಟರ್ ಮೂಲವೇ ತಲೆಗೆ ಹುಳ ಬಿಟ್ಟಿದ್ದಾರೆ ಶೆಟ್ರು.
'ರುದ್ರಪ್ರಯಾಗದ ಭಯಾನಕ ನರಭಕ್ಷಕ' ಎಂಬ ಹೆಸರಿನಲ್ಲಿ ಪೂರ್ಣಚಂದ್ರ ತೇಜಸ್ವಿ ಪುಸ್ತಕ ಬರೆದಿದ್ದರು. ಇದೇ ಕಥೆಯ ಮೇಲೆ ರಿಷಬ್ ಸಿನಿಮಾ ಮಾಡುತ್ತಿದ್ದಾರ ಎನ್ನುವ ಕುತೂಹಲ ಇದೆ. ಆದರೆ, ಪೋಸ್ಟರ್ ನಲ್ಲಿ ಸ್ವಷ್ಟವಾಗಿ ಸಿನಿಮಾದ ಕಥೆ ಮತ್ತು ನಿರ್ದೇಶನವನ್ನು ರಿಷಬ್ ಮಾಡುತ್ತಿದ್ದಾರೆ ಎಂದಿದೆ. ಇನ್ನು, ಜಯಣ್ಣ ಹಾಗೂ ಭೋಗೆಂದ್ರ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.


Click it and Unblock the Notifications











