twitter
    For Quick Alerts
    ALLOW NOTIFICATIONS  
    For Daily Alerts

    ರಿಷಬ್ ಶೆಟ್ಟಿ ಮುಂದಿನ ಸಿನಿಮಾ 'ರುದ್ರಪ್ರಯಾಗ'

    |

    ನಿರ್ದೇಶಕನಾಗಿ ಗೆದ್ದು, ಈಗ ನಟನಾಗಿಯೂ ವಿಜಯ ಸಾಧಿಸಿದ ರಿಷಬ್ ಶೆಟ್ಟಿ ಈಗ ತಮ್ಮ ಮುಂದಿನ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.

    ರಿಷಬ್ ಇಂದು (ಜುಲೈ 7) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷವಾಗಿ ತಮ್ಮ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 'ರುದ್ರಪ್ರಯಾಗ' ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾವಾಗಿದೆ.

    ಹೊಸ ಬರಹಗಾರರ ಹುಡುಕಾಟದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಬರಹಗಾರರ ಹುಡುಕಾಟದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ

    'ರುದ್ರಪ್ರಯಾಗ' ಎಂಬ ಟೈಟಲ್ ಅನೇಕರಿಗೆ ವಿಶೇಷ ಅನಿಸುತ್ತದೆ. ಇದು ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮಸ್ಥಾನ. ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ 5 ಸಂಗಮಕ್ಷೇತ್ರಗಳ ಪೈಕಿ ಒಂದು. ಈ ಹೆಸರನ್ನು ಸಿನಿಮಾ ಇಟ್ಟಿದ್ದು, ಕುತೂಹಲ ಉಂಟು ಮಾಡಿದ್ದಾರೆ.

     rishab shetty next movie titeld as rudraprayaag

    ಸಿನಿಮಾದ ಪೋಸ್ಟರ್ ನಲ್ಲಿ ಚಿರತೆ, ಕಾಡು, ನದಿ ಇದೆ. ಜೊತೆಗೆನೇ ನಗರ, ರಾಣಿ ಚೆನ್ನಮ್ಮ ಪ್ರತಿಮೆ, ವಿಧಾನ ಸೌಧವೂ ಇದೆ. ಹೀಗಾಗಿ ಪೋಸ್ಟರ್ ಮೂಲವೇ ತಲೆಗೆ ಹುಳ ಬಿಟ್ಟಿದ್ದಾರೆ ಶೆಟ್ರು.

    125 ದಿನ ಪೂರೈಸಿ ವರ್ಷದ ದೊಡ್ಡ ಹಿಟ್ ಆದ 'ಬೆಲ್ ಬಾಟಂ'125 ದಿನ ಪೂರೈಸಿ ವರ್ಷದ ದೊಡ್ಡ ಹಿಟ್ ಆದ 'ಬೆಲ್ ಬಾಟಂ'

    'ರುದ್ರಪ್ರಯಾಗದ ಭಯಾನಕ ನರಭಕ್ಷಕ' ಎಂಬ ಹೆಸರಿನಲ್ಲಿ ಪೂರ್ಣಚಂದ್ರ ತೇಜಸ್ವಿ ಪುಸ್ತಕ ಬರೆದಿದ್ದರು. ಇದೇ ಕಥೆಯ ಮೇಲೆ ರಿಷಬ್ ಸಿನಿಮಾ ಮಾಡುತ್ತಿದ್ದಾರ ಎನ್ನುವ ಕುತೂಹಲ ಇದೆ. ಆದರೆ, ಪೋಸ್ಟರ್ ನಲ್ಲಿ ಸ್ವಷ್ಟವಾಗಿ ಸಿನಿಮಾದ ಕಥೆ ಮತ್ತು ನಿರ್ದೇಶನವನ್ನು ರಿಷಬ್ ಮಾಡುತ್ತಿದ್ದಾರೆ ಎಂದಿದೆ. ಇನ್ನು, ಜಯಣ್ಣ ಹಾಗೂ ಭೋಗೆಂದ್ರ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

    English summary
    Kannada director Rishab Shetty next movie titled as 'Rudraprayag'. Rudraprayag is one of the Panch Prayag.
    Sunday, July 7, 2019, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X