ಸದ್ದಿಲ್ಲದೇ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿ ಆಯಿತು ರಿಷಬ್ ಶೆಟ್ಟಿ ನಿರ್ಮಾಣದ ಮುಂದಿನ ಚಿತ್ರ!

ಈಗಿನ ಸಿನಿ ರಸಿಕರು ನಿರೀಕ್ಷಿಸುವ ರೇಂಜಿಗೆ ಚಿತ್ರವೊಂದನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿ, ಎಡಿಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ತೆರೆ ಮೇಲೆ ತರಲು ಹಲವು ದಿನಗಳೇ ಬೇಕು ಎಂಬ ಮಾತಿತ್ತು. ಆದರೆ ಈಗಿನ ಹೊಸ ತಂಡಗಳು ಅಷ್ಟೆ ಕ್ವಾಲಿಟಿ ಇರುವ ಚಿತ್ರಗಳನ್ನು ಕಡಿಮೆ ಅವಧಿಯಲ್ಲಿಯೇ ಮಾಡಿ ಮುಗಿಸಿ ಪ್ರೇಕ್ಷಕರ ಎದುರು ತರುತ್ತಿವೆ.

ಇದಕ್ಕೆ ಉತ್ತಮ ಉದಾಹರಣೆ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ. ಈ ಚಿತ್ರದ ಶೂಟಿಂಗ್ ಅನ್ನು ಮಳೆಯ ಅಡ್ಡಿಯ ನಡುವೆಯೇ ವರ್ಷ ಕಳೆಯುವ ಮುನ್ನವೇ ಮಾಡಿ ಮುಗಿಸಲಾಗಿತ್ತು. ಕನಿಷ್ಠ ಎರಡು ವರ್ಷಗಳ ಕಾಲ ಕೆಲಸ ಮಾಡಿ ತಯಾರಿಸಿದಂತಹ ಕ್ವಾಲಿಟಿಯನ್ನು ಚಿತ್ರ ಹೊಂದಿತ್ತು. ಕೇವಲ ಕಾಂತಾರ ಮಾತ್ರವಲ್ಲದೇ ರಿಷಬ್ ಶೆಟ್ಟಿ ನಿರ್ದೇಶನದ ಹಲವು ಸಿನಿಮಾಗಳು ಹಾಗೆಯೇ. ಯಾವಾಗ ಶೂಟಿಂಗ್ ಶುರುವಾಯಿತು, ಯಾವಾಗ ಮುಗಿದುಹೋಯಿತು ಎಂಬುದೇ ಗೊತ್ತಾಗುವುದಿಲ್ಲ.

Rishab Shetty production next movie Vaghachipani shooting completed

ಇದೀಗ ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಮುಂದಿನ ಚಿತ್ರವೂ ಸಹ ಇದೇ ರೀತಿ ವೇಗವಾಗಿ ತನ್ನ ಚಿತ್ರೀಕರಣವನ್ನು ಮುಗಿಸಿದೆ. ಹೌದು, ಈ ಹಿಂದೆ ಪೆದ್ರೋ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ನಟೇಶ್ ಹೆಗಡೆ ನಿರ್ದೇಶಿಸುತ್ತಿರುವ 'ವಾಘಚಿಪಾಣಿ' ಎಂಬ ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ಮುಕ್ತಾಯಗೊಂಡಿದೆ.

ಈ ಚಿತ್ರಕ್ಕೆ ರಿಷಬ್ ಶೆಟ್ಟಿ ತನ್ನ ಚಿತ್ರ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಗೋಪಾಲ ಹೆಗಡೆ ಹಾಗೂ ಮಲಯಾಳಂನ ಖ್ಯಾತ ನಟ ದಿಲೀಶ್ ಪೋಥನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಇನ್ನೂ ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಡಬೇಕಿದೆ.

'ವಾಘಚಿಪಾಣಿ' ಎಂದರೆ ಹುಲಿಯ ಹೊಂಡ ಎಂಬ ಅರ್ಥ. ಈ ರೀತಿ ವಿಭಿನ್ನವಾದ ಶೀರ್ಷಿಕೆಯನ್ನು ಇಟ್ಟಿರುವ ಯುವ ನಿರ್ದೇಶಕ ನಟೇಶ್ ಹೆಗಡೆ ಪೆದ್ರೋ ರೀತಿಯೇ ಈ ಚಿತ್ರದ ಮೂಲಕವೂ ಸಹ ಸಿನಿ ರಸಿಕರ ಮನ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಇದೆ. ಈ ಚಿತ್ರ ಮಾತ್ರವಲ್ಲದೇ ಇನ್ನೂ ಹಲವು ಯುವ ನಿರ್ದೇಶಕರ ಚಿತ್ರಗಳಿಗೆ ಬಂಡವಾಳ ಹೂಡುವ ಕೆಲಸಕ್ಕೆ ಮುಂದಾಗಿರುವ ರಿಷಬ್ ಶೆಟ್ಟಿ ಚಿತ್ರಗಳ ಜತೆ ಯುಟ್ಯೂಬ್ ಶಾರ್ಟ್ ಫಿಲ್ಮ್ಸ್‌ಗೂ ಸಹ ಹಣ ಹೂಡುತ್ತಿದ್ದಾರೆ.

Rishab Shetty production next movie Vaghachipani shooting completed

ಸದ್ಯ ಕಾಂತಾರ 2 ಚಿತ್ರದ ಕಥೆ ಬರೆಯುವಲ್ಲಿ ನಿರತರಾಗಿರುವ ರಿಷಬ್ ಶೆಟ್ಟಿ ಇದಕ್ಕೂ ಮುನ್ನ ಘೋಷಿಸಿದ್ದ ಕೆಲ ಚಿತ್ರಗಳಿಂದ ಹೊರಬಂದಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕಾಡುಬೆಟ್ಟು ಶಿವನ ಕಥೆ ಹೇಳಿದ್ದ ರಿಷಬ್ ಶೆಟ್ಟಿ ಎರಡನೇ ಭಾಗದಲ್ಲಿ ಶಿವನ ಅಪ್ಪನ ಕಥೆ ಹಾಗೂ ಭೂತಕೋಲದ ಕುರಿತು ಇನ್ನೂ ಆಳವಾಗಿ ತೋರಿಸಲಿದ್ದಾರೆ.

More from Filmibeat

English summary
Rishab Shetty production next movie Vaghachipani shooting completed. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X