RCB Vs CSK ; ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿಗೆ ಮೈದಾನದಿಂದಲೇ ಸೆಲ್ಯೂಟ್ ಹೊಡೆದ ಸಿರಾಜ್...!

ಅಸಾಧ್ಯವನ್ನ ಸಾಧ್ಯವನ್ನಾಗಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸಿದೆ. ರಣ ರೋಚಕ ಕದನದಲ್ಲಿ ಚೆನೈ ತಂಡವನ್ನ 27 ರನ್‌ಗಳಿಂದ ಮಣಿಸಿ ದಿಗ್ವಿಜಯ ಸಾಧಿಸಿದೆ.

ಇನ್ನೂ.. ನಿನ್ನೆಯ ಪಂದ್ಯ ಕೇವಲ ಪಂದ್ಯವಾಗಿರಲಿಲ್ಲ. ಬದಲಿಗೆ ಅಳಿವು ಉಳಿವಿನ ಸವಾಲಿನಿಂದ ಕೂಡಿದ ಪಂದ್ಯವಾಗಿತ್ತು. ಈ ಕಾರಣಕ್ಕೆ ನಮ್ಮ ತಂಡವನ್ನ ಹುರಿದುಂಬಿಸಲು, ಪಂದ್ಯವನ್ನ ಕಣ್ತುಂಬಿಕೊಳ್ಳಲು ಮೈದಾನಕ್ಕೆ ಡಾ.ಶಿವರಾಜ್ ಕುಮಾರ್ ಹೋಗಿದ್ದರು. ರಿಷಬ್ ಶೆಟ್ಟಿ ಕೂಡ ಕ್ರೀಡಾಂಗಣದಲ್ಲಿ ಹಾಜರಿಯನ್ನ ಹಾಕಿದ್ದರು.

rishab-shetty-receives-a-salute-and-flying-kiss-from-mohammad-siraj

ಹೆಚ್ಚು ಕಡಿಮೆ 29680 ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ಗೆಲುವು ಸಾಧಿಸಿದ್ದೇ ತಡ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜೈಕಾರ ಮೊಳಗಿತ್ತು. ಇದೇ ಸಮಯದಲ್ಲಿ ಆರ್ ಸಿ ಬಿಯ ಪ್ರಚಂಡ ವೇಗಿ ಮೊಹಮ್ಮದ್ ಸಿರಾಜ್ ತಂಡದ ಮಹಾ ಗೆಲುವನ್ನ ಗ್ಯಾಲರಿಯಲ್ಲಿ ಸಂಭ್ರಮಿಸುತ್ತಿದ್ದ ರಿಷಬ್ ಶೆಟ್ಟಿ ಅವರಿಗೆ ಮೈದಾನದಿಂದಲೇ ಸೆಲ್ಯೂಟ್ ಹೊಡೆದರು.

ತಮ್ಮತ್ತ ಕೈ ಮಾಡಿ ಸಿರಾಜ್ ಸೆಲ್ಯೂಟ್ ಹೊಡೆದಿದ್ದನ್ನ ಗಮನಿಸಿದ ರಿಷಬ್ ಶೆಟ್ಟಿ ಎದ್ದು ನಿಂತು ಮೊಹಮ್ಮದ್ ಸಿರಾಜ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಕೈ ಸನ್ನೆ ಮಾಡಿ ಶುಭಹಾರೈಕೆಯನ್ನು ತಿಳಿಸಿದರು. ಇಷ್ಟೇ ಅಲ್ಲ ಮೊಹಮ್ಮದ್ ಸಿರಾಜ್‌ಗೆ ಫ್ಲೈಯಿಂಗ್ ಕಿಸ್ ಕೂಡ ನೀಡಿದ ರಿಷಬ್ ಶೆಟ್ಟಿ ಸಿರಾಜ್ ಬಯ್ಯಾ ಲವ್ ಯೂ' ಎಂದು ಜೋರಾಗಿ ಕೂಗಿ ಹೇಳಿದರು. ರಿಷಬ್ ಶೆಟ್ಟಿ ಅವರ ಈ ಪ್ರೀತಿ ಕಂಡು ಸಿರಾಜ್ ಕೂಡ ಫ್ಲೈಯಿಂಗ್ ಕಿಸ್ ನೀಡಿದರು

rishab-shetty-receives-a-salute-and-flying-kiss-from-mohammad-siraj

ರಿಷಬ್ ಶೆಟ್ಟಿ ಮತ್ತು ಮೊಹಮ್ಮದ್ ಸಿರಾಜ್ ಅವರ ಈ ಪರಸ್ಪರ ಗೌರವ ಮತ್ತು ಅಭಿಮಾನದ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿವೈನ್ ಸ್ಟಾರ್ ಗತ್ತು ಜಗತ್ತಿಗೆ ಗೊತ್ತು ಎಂಬ ಅಭಿಪ್ರಾಯ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇನ್ನೂ ರಿಷಬ್ ಶೆಟ್ಟಿ ಕ್ರಿಸ್ ಗೇಲ್ ಜೊತೆ ಪಂದ್ಯವನ್ನ ವೀಕ್ಷಿಸಿದರು. ಫೋಟೋ ಕ್ಲಿಕಿಸಿಕೊಂಡಿದ್ದರು. ಸಿರಾಜ್ ಅವರ ಈ ವಿಡಿಯೋ ಜೊತೆ ಜೊತೆ ರಿಷಬ್ ಶೆಟ್ಟಿ ಮತ್ತು ಕ್ರಿಸ್ ಗೇಲ್ ಅವರ ಫೋಟೋಗಳು ಕೂಡ ವೈರಲ್ ಆಗಿವೆ.

ಅಂದ್ಹಾಗೇ ರಿಷಬ್ ಶೆಟ್ಟಿಗೆ ಮೊದಲಿಂದ ಕ್ರಿಕೆಟ್ ಅಂದರೆ ಅಚ್ಚು ಮೆಚ್ಚು. ಆದರೂ ಕೂಡ ರಿಷಬ್ ಇಲ್ಲಿವರೆಗೆ ಸ್ಟೇಡಿಯಂಗೆ ಬಂದು ಯಾವ ಮ್ಯಾಚನ್ನೂ ನೋಡಿರಲಿಲ್ಲ. ನಿನ್ನೆ ಮೊದಲ ಬಾರಿ ರಿಷಬ್ ಶೆಟ್ಟಿ ಕ್ರೀಡಾಂಗಣದಲ್ಲಿ ಕುಂತು ರೋಚಕ ಮತ್ತು ರೋಮಾಂಚಕ ಕ್ಷಣಗಳನ್ನ ಅನುಭವಿಸಿದ್ದಾರೆ. ಒಂದರ್ಥದಲ್ಲಿ ನಿನ್ನೆಯ ಮ್ಯಾಚ್ ರಿಷಬ್ ಪಾಲಿಗೆ ಯಾವತ್ತು ಮರೆಯಲು ಸಾಧ್ಯ ಇಲ್ಲ.

ಉಳಿದಂತೆ ಸದ್ಯಕ್ಕೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಪ್ರಿಕ್ವೆಲ್‌ ಕಡೆ ಗಮನ ವಹಿಸಿದ್ದಾರೆ. ಖುದ್ದು ಅವರೇ ಮತದಾನದ ಮಾಡಿದ ನಂತರ ಹೇಳಿರುವಂತೆ ಕಾಂತಾರ ಚಿತ್ರದ ಚಿತ್ರೀಕರಣ ಪಾರ್ಟ್ ಬೈ ಪಾರ್ಟ್ ನಡೆಯುತ್ತಿದೆ. ಇನ್ನೂ ಚಿತ್ರಕ್ಕೆ ಅದ್ಧೂರಿಯಾದ ಸೆಟ್‌ಗಳನ್ನು ಕೂಡ ಹಾಕಲಾಗಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನ ರಿಷಬ್ ಶೆಟ್ಟಿ ಶೀಘ್ರದಲ್ಲಿಯೇ ನೀಡುವ ನಿರೀಕ್ಷೆ ಇದೆ.

More from Filmibeat

English summary
Sandalwood Star Director And Actor Rishab Shetty was saluted and given a flying kiss by cricketer Mohammad Siraj. Shetty, who was attending his first live match at a stadium, was there to support the Royal Challengers Bengaluru team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X