ಚಕ್ರವರ್ತಿ ಸೂಲಿಬೆಲೆ ಕುರಿತ ಹಾಡು ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ
ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ಹುಟ್ಟುಹಬ್ಬ ಇಂದು. ಇದೇ ದಿನ ನಿರ್ದೇಶಕ ರಿಷಬ್ ಶೆಟ್ಟಿ ಅವರು ಚಕ್ರವರ್ತಿ ಸೂಲಿಬೆಲೆ ಕುರಿತಾದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರ ಫೇಸ್‌ಬುಕ್ ಪುಟದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಕುರಿತಾದ 'ನಮೋ ಚಕ್ರವರ್ತಿ' ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ ಅವರು ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಕೊರೊನಾ ಲಾಕ್‌ಡೌನ್ ಇರುವ ಕಾರಣ ಯಾವುದೇ ಸಾಮಾಜಿಕ ಕಾರ್ಯ ಅಥವಾ ಆಚರಣೆಗಳು ಇಂದು ಮಾಡುತ್ತಿಲ್ಲ.

ಅಭಿಲಾಶ್ ಸೋಮೇನಹಳ್ಳಿ ರಚಿಸಿರುವ ಹಾಡು
ಚಕ್ರವರ್ತಿ ಸೂಲಿಬೆಲೆ ಅವರ ಕುರಿತಾದ 'ನಮೋ ಚಕ್ರವರ್ತಿ' ಹಾಡನ್ನು ಅಭಿಲಾಶ್ ಸೋಮೇನಹಳ್ಳಿ ಎಂಬುವರು ರಚಿಸಿದ್ದು, ಮನೋಜ್ ವಸಿಷ್ಠ ಹಾಡನ್ನು ಹಾಡಿದ್ದಾರೆ. ಏಪ್ರಿಲ್ 9 ರ ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಫೇಸ್‌ಬುಕ್ ನಲ್ಲಿ ಹಾಡು ಬಿಡುಗಡೆ ಆಗಿದೆ.

ಹಾಡು ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ
ಚಕ್ರವರ್ತಿ ಸೂಲಿಬೆಲೆಯವರ ಜನ್ಮ ದಿನವಾದ ಇಂದು ಅವರ ಅಭಿಮಾನಿ ಬಳಗದ ವತಿಯಿಂದ ಪ್ರೀತಿಯ ಉಡುಗೊರೆಯಾಗಿ ಅಭಿಲಾಷ್ ಸೋಮೇನಹಳ್ಳಿಯವರು ರಚಿಸಿರುವ, ಮನೋಜ್ ವಸಿಷ್ಠ ರವರು ಗಾಯನ ಮಾಡಿರುವ "ನಮೋ ಚಕ್ರವರ್ತಿ" ಹಾಡನ್ನು ಬಿಡುಗಡೆಗೊಳಿಸಲು ಹರ್ಷಿಸುತ್ತೇನೆ'' ಎಂದಿರುವ ರಿಷಬ್ ಶೆಟ್ಟಿ, ಚಕ್ರವರ್ತಿ ಸೂಲಿಬೆಲೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಹ ಕೋರಿದ್ದಾರೆ.

ಫಿಫ್ತ್ ಫಿಲ್ಲರ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು
ರಿಷಬ್ ಶೆಟ್ಟಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರು ಗೆಳೆಯರಾಗಿದ್ದು, ಈ ಹಿಂದೆ ಚಕ್ರವರ್ತಿ ಸೂಲಿಬೆಲೆ ಅವರು ಆಯೋಜಿಸಿದ್ದ ಫಿಫ್ತ್ ಪಿಲ್ಲರ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಉಪನ್ಯಾಸಕರಾಗಿ ಭಾಗವಹಿಸಿದ್ದರು.

ಎರಡು ಗಂಟೆಯಲ್ಲಿ 3000 ಕ್ಕೂ ಹೆಚ್ಚು ಮಂದಿ ವೀಕ್ಷಣೆ
ಚಕ್ರವರ್ತಿ ಸೂಲಿಬೆಲೆ ಅವರ ಕುರಿತಾದ ಹಾಡನ್ನು ಬಿಡುಗಡೆಯಾದ ಎರಡು ಗಂಟೆಯಲ್ಲಿ 3000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಾಡಿನ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











