ಮಾಂಸ, ಮದ್ಯ ಸೇವಿಸದೇ ಬಂದು 'ಕಾಂತಾರ- 1' ಚಿತ್ರ ನೋಡ್ಬೇಕಾ? ರಿಷಬ್ ಏನಂತಾರೆ?

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ಟ್ರೈಲರ್ ಆರ್ಭಟ ಜೋರಾಗಿದೆ. ಎಲ್ಲಾ ಭಾಷೆಗಳಲ್ಲಿ ಸೇರಿ ಟ್ರೈಲರ್ 5.5 ಕೋಟಿಗೂ ಅಧಿಕ ವೀವ್ಸ್ ಸಾಧಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾತನಾಡಿದೆ. ಮಾಧ್ಯಮದವರ ಹಲವು ಪ್ರಶ್ನೆಗಳಿಗೆ ಉತ್ತರಿಸಿದೆ. ಮುಖ್ಯವಾಗಿ ಫೇಕ್ ಪೋಸ್ಟ್‌ವೊಂದರ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

'ಕಾಂತಾರ- 1' ಬಿಡುಗಡೆ ಹೊಸ್ತಿಲಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಪೋಸ್ಟ್‌ವೊಂದು ಸದ್ದು ಮಾಡ್ತಿದೆ. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೀತಿದೆ. ಟೀಕೆ ಗುರಿಯಾಗುತ್ತಿದ್ದಂತೆ ಅದನ್ನು ಪೋಸ್ಟ್ ಮಾಡಿದವರು ಕ್ಷಮೆ ಕೇಳಿದ್ದು ಆಯಿತು. ಆದರೂ ಚರ್ಚೆ ಮಾತ್ರ ನಿಲ್ಲುತ್ತಿಲ್ಲ. ಇದೀಗ ಅಂತಿಮವಾಗಿ ಚಿತ್ರತಂಡವೇ ಸ್ಪಷ್ಟನೆ ನೀಡಿದೆ. ಆ ಪೋಸ್ಟ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Rishab Shetty Responds to Controversy Over Fake Kantara-1 Vegetarian Post

'ಕಾಂತಾರ ಪರ್ವ' ಹೆಸರು ಟ್ವಿಟ್ಟರ್ ಪೇಜ್‌ನಲ್ಲಿ 4 ದಿನಗಳ ಹಿಂದೆ ಒಂದು ಪೋಸ್ಟ್ ಮಾಡಲಾಗಿತ್ತು. 'ಮದ್ಯಪಾನ, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸದೇ ಬಂದು 'ಕಾಂತಾರ- 1' ಸಿನಿಮಾ ನೋಡುವ ಸಂಕಲ್ಪ ಮಾಡಿಕೊಳ್ಳೋಣ' ಎಂದು ಅದರಲ್ಲಿ ಬರೆಯಲಾಗಿತ್ತು. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು. ಇದು ಬರೀ ಸಸ್ಯಹಾರಿಗಳಿಗೆ ಮಾಡಿರುವ ಸಿನಿಮಾನಾ? ಮಾಂಸಾಹಾರಿಗಳು ಬಂದು ಸಿನಿಮಾ ನೋಡಬಾರದಾ? ಹಾಗಿದ್ರೆ ನಾವು ಸಿನಿಮಾ ನೋಡುವುದೇ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

ತಪ್ಪಿನ ಅರಿವಾಗುತ್ತಿದ್ದಂತೆ ಅದಕ್ಕೆ ಕ್ಷಮೆ ಕೇಳಿ ಅದೇ ಪೇಜ್‌ನಲ್ಲಿ ಸ್ಪಷ್ಟನೆ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕೇಳಲಾಯತು. ರಿಷಬ್ ಪ್ರತಿಕ್ರಿಯಿಸಿ "ಊಟೋಪಚಾರ ಹಾಗೂ ಅವರವರ ಅಭ್ಯಾಸಗಳನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ಅವರರವ ಸ್ವಂತಕ್ಕೆ ವಿವೇಚನೆಗೆ ಬಿಟ್ಟ ವಿಚಾರ. ಯಾರೋ ಫೇಕ್ ಪೋಸ್ಟ್ ಹಾಕಿರುವುದು ಅದು. ನಮ್ಮ ಗಮನಕ್ಕೂ ಬಂತು. ಆದರೆ ಅದನ್ನು ನಮ್ಮ ತಂಡಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ರಿಷಬ್ ಶೆಟ್ಟಿ "ಆ ಪೋಸ್ಟ್ ನೋಡಿ ನಮಗೆ ಶಾಕ್ ಆಯಿತು. ಆ ಪೋಸ್ಟ್ ಲಿಂಕ್ ಅನ್ನು ಯಾರೋ ನನಗೂ ಕಳುಹಿಸಿದ್ರು. ಯಾರೂ ಈ ರೀತಿ ಮಾಡಿದ್ದು ಎಂದು ನಾನು ಕೇಳ್ದೆ. ಪ್ರತಿಯೊಬ್ಬರಿಗೂ ಅವರವರ ಬದುಕಿನ ಶೈಲಿ, ಅವರವವರ ಹಕ್ಕು, ಅವರ ವಿವೇಚನೆಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಟ್ರೆಂಡ್ ಮಾಡುವುದಕ್ಕೆ ಹೀಗೆ ಮಾಡ್ತಾರೆ. ನಮ್ಮ ಸಿನಿಮಾ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಕೆಲವರು ಅದು ಫ್ಯಾನ್ ಪೇಜ್ ಅಷ್ಟೇ, ತಲೆಕೆಡಿಸಿಕೊಳ್ಳಬೇಡಿ ಎಂದು ಅದೇ ಪೋಸ್ಟ್ ಕೆಳಗೆ ಕಾಮೆಂಟ್ ಮಾಡಿದ್ದಾರೆ" ಎಂದು ರಿಷಬ್ ವಿವರಿಸಿದ್ದಾರೆ.

ಅಕ್ಟೋಬರ್ 2ರಂದು 'ಕಾಂತಾರ- 1' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಬರೋಬ್ಬರಿ 6000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಥ್ರಿಯೇಟ್ರಿಕಲ್ ರೈಟ್ಸ್, ನಾನ್ ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಶೀಘ್ರದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಪರಭಾಷಿಕರು ಕೂಡ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಅದ್ಧೂರಿ ಮೇಕಿಂಗ್, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿದೆ. ರುಕ್ಮಿಣಿ ವಸಂತ್, ಜಯರಾಂ, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಸಿನಿಮಾ ಸೆನ್ಸಾರ್ ಕಂಪ್ಲೀಟ್ ಮಾಡಿದ್ದು ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Rishab Shetty Clears Air on Kantara-1 Controversy: ‘Post Not From Our Team’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X