ಡ್ರೀಮ್ ಕಾರಿನಲ್ಲಿ ದರ್ಶನ್ ಜೊತೆ ರೌಂಡ್ಸ್ ಹಾಕಿದ ರಿಷಬ್ ಶೆಟ್ಟಿ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇರುವ ಕಾರ್ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಡಿ ಬಾಸ್ ಬಳಿ ತರಹೇವಾರಿ ಕಾರುಗಳಿವೆ. ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿಗೆ ಇಷ್ಟವಾದ ಕಾರಿನಲ್ಲಿ ದರ್ಶನ್ ಮೈಸೂರು ರೌಂಡ್ಸ್ ಹಾಕಿಸಿದ್ದಾರೆ. ದರ್ಶನ್ ಜೊತೆ ರೌಂಡ್ಸ್ ಹಾಕಿದ ಸಂತಸವನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ರಿಷಬ್ ಶೆಟ್ಟಿ ಡ್ರೀಮ್ ಕಾರು ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನಲ್ಲಿ ದರ್ಶನ್ ಜೊತೆ ಕುಳಿತು ಮೈಸೂರು ಓಡಾಡಿದ್ದಾರೆ. ದರ್ಶನ್ ಜೊತೆ ಕಾರಿನಲ್ಲಿ ಕುಳಿತಿರುವ ಫೋಟೋವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಇಬ್ಬರ ಕಾರ್ ಡ್ರೈವಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ..

 ಡ್ರೀಮ್ ಕಾರಿನಲ್ಲಿ ದರ್ಶನ್ ಜೊತೆ ರಿಷಬ್ ಶೆಟ್ಟಿ ರೌಂಡ್ಸ್

ಡ್ರೀಮ್ ಕಾರಿನಲ್ಲಿ ದರ್ಶನ್ ಜೊತೆ ರಿಷಬ್ ಶೆಟ್ಟಿ ರೌಂಡ್ಸ್

ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಖುಷಿ ಪಟ್ಟಿದ್ದಾರೆ. 'ನನ್ನ ಡ್ರೀಮ್ ಕಾರ್ FordMustang. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ MustangGT ನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ದರ್ಶನ್ ಸರ್. ಅದ್ಭುತವಾದ ಸಮಯ' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಅಭಿಮಾನಿಗಳ ಮೆಚ್ಚುಗೆ

ರಿಷಬ್ ಶೆಟ್ಟಿಯನ್ನು ಭೇಟಿಯಾಗುತ್ತಿದ್ದಂತೆ ಇಬ್ಬರು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಲ್ಲದೆ ಅಭಿಮಾನಿಗಳು ಇಬ್ಬರು ಒಟ್ಟಿಗೆ ಚಿತ್ರ ಮಾಡಿ ಎಂದು ಹೇಳುತ್ತಿದ್ದಾರೆ. ರಿಷಬ್ ಪೋಸ್ಟ್ ಗೆ ಇಬ್ಬರು ಒಂದು ಸಿನಿಮಾ ಮಾಡಿ, ಇಬ್ಬರ ಕಾಂಬಿನೇಷನ್ ಅದ್ಭುತವಾಗಿದೆ. ಹೊಸ ಸಿನಿಮಾದ ಬಗ್ಗೆ ಮಾತನಾಡಿರುವ ಹಾಗಿದೆ ಎನ್ನುವ ಕಾಮೆಂಟ್ಸ್ ಹರಿದು ಬರುತ್ತಿದೆ.

ಮೈಸೂರಿನಲ್ಲಿ ಚಿತ್ರೀಕರಣ

ಮೈಸೂರಿನಲ್ಲಿ ಚಿತ್ರೀಕರಣ

ಅಂದ್ಹಾಗೆ ರಿಷಬ್ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಇದೇ ಸಿನಿಮಾದ ಚಿತ್ರೀಕರಣ ವೇಳೆ ದರ್ಶನ್, ರಿಷಬ್ ಮತ್ತು ತಂಡವನ್ನು ಭೇಟಿಯಾಗಿದ್ದಾರೆ.

Recommended Video

ಪ್ಯಾನ್ ಇಂಡಿಯಾ ವಿವಾದ, ಯಶ್ ವಿಡಿಯೋ ಹಂಚಿಕೊಂಡ ಜಗ್ಗೇಶ್ | Filmibeat Kannada
ಬದಲಾದ ನಿರ್ದೇಶಕರು

ಬದಲಾದ ನಿರ್ದೇಶಕರು

ಇತ್ತೀಚಿಗಷ್ಟೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ದೊಡ್ಡ ಬದಲಾವಣೆ ಆಗಿದ್ದು, ಚಿತ್ರದಿಂದ ನಿರ್ದೇಶಕ ಗಿರಿಕೃಷ್ಣ ಹೊರನಡಿದಿದ್ದಾರೆ. ಅನಾರೋಗ್ಯದ ಕಾರಣ ನಿರ್ದೇಶಕ ಗಿರಿಕೃಷ್ಣ ಸಿನಿಮಾದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಚಿತ್ರಕ್ಕೆ ಹೊಸ ನಿರ್ದೇಶಕರು ಎಂಟ್ರಿ ಕೊಟ್ಟಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಇಬ್ಬರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಾಗುತ್ತಿದೆ.

More from Filmibeat

English summary
Director Rishab shetty rounds with Actor Darshan in his dream car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X