'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
ರಿಷಭ್ ಶೆಟ್ಟಿ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಬೆಲ್ ಬಾಟಂ' ಮುಂದುವರಿದ ಭಾಗ ಬರ್ತಿದೆ. ಬೆಲ್ ಬಾಟಂ 2 ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದು, ಇಂದು ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಡಿಟೆಕ್ಟಿವ್ ದಿವಾಕರ್ ಹೊಸ ಥ್ರಿಲ್ಲಿಂಗ್ ಕಥೆಯೊಂದಿಗೆ ಮತ್ತೊಮ್ಮೆ ಬರ್ತಿದ್ದಾರೆ.
2019ರಲ್ಲಿ ತೆರೆಕಂಡಿದ್ದ ಬೆಲ್ ಬಾಟಂ ಚಿತ್ರದ ರಿಷಭ್ ಶೆಟ್ಟಿ ಮತ್ತು ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಜಯತೀರ್ಥ ಅವರೇ ಮುಂದುವರಿದ ಭಾಗಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚೆಂಡು ಹೂವಿನ ಪ್ರಕರಣದೊಂದಿಗೆಬೆಲ್ ಬಾಟಂ 2 ಚಿತ್ರದಲ್ಲಿ ರಿಷಭ್ ಶೆಟ್ಟಿ ನಾಯಕನಾಗಿ ಮುಂದುವರಿಯಲಿದ್ದಾರೆ. ಹರಿಪ್ರಿಯಾ ಸೇರಿದಂತೆ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಭಾಗ 2 ರಲ್ಲೂ ಇರಲಿದ್ದಾರೆ.

ಹೊಸ ಸುದ್ದಿ ಏನಪ್ಪಾ ಅಂದ್ರೆ 'ಬೆಲ್ ಬಾಟಂ-2' ಚಿತ್ರದಲ್ಲಿ ತಾನ್ಯ ಹೋಪ್ ಇರಲಿದ್ದಾರೆ. 'ಯಜಮಾನ' ಚಿತ್ರದಲ್ಲಿ ಡಿ ಬಾಸ್ ಜೊತೆ ಬಸಣ್ಣಿ ಬಾ ಎಂದು ಕುಣಿದಿದ್ದ ತಾನ್ಯ ಡಿಟೆಕ್ಟಿವ್ ದಿವಾಕರ್‌ಗೆ ಸಾಥ್ ನೀಡಲಿದ್ದಾರೆ.
ಜಯತೀರ್ಥ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪುತ್ರ ನಟನೆಯ 'ಬನಾರಸ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಬಿಡುಗಡೆಗೆ ತಯಾರಾಗಿದ್ದಾರೆ. ಈ ಕಡೆ ರಿಷಭ್ ಶೆಟ್ಟಿ ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್ ಕೈಯಲ್ಲಿಟ್ಟುಕೊಂಡಿದ್ದಾರೆ.


Click it and Unblock the Notifications











