'ಹೀರೋ' ಆಗಿ ಬರ್ತಿದ್ದಾರೆ ರಿಷಬ್ ಶೆಟ್ಟಿ, ಫಸ್ಟ್ ಲುಕ್ ಇಲ್ಲಿದೆ

ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಸದ್ದಿಲ್ಲದೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ಎಂದು ತಿಳಿದಿತ್ತು. ಇದೀಗ, ಆ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ರಿಷಬ್ ಶೆಟ್ಟಿ ನಟಿಸಿರುವ ಹೊಸ ಚಿತ್ರದ ಹೆಸರು ಹೀರೋ. ಶೆಟ್ರು ಈ ಚಿತ್ರದಲ್ಲಿ ನಟನೆ ಮಾತ್ರ. ನಿರ್ದೇಶನದ ಜವಾಬ್ದಾರಿ ನವ ಪ್ರತಿಭೆ ಭರತ್ ರಾಜ್ ಅವರದ್ದು. ಇದು ಇವರ ಮೊದಲ ಸಿನಿಮಾ. ಇನ್ನು ಚಿತ್ರವನ್ನು ನಿರ್ಮಾಣ ಮಾಡಿರುವುದು ರಿಷಬ್ ಶೆಟ್ಟಿ ಫಿಲಂಸ್ ಎನ್ನುವುದು ಗಮನಾರ್ಹ.

ರಿಷಬ್ ಶೆಟ್ಟಿ ಜೊತೆ ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಮುಖ್ಯ ತಾರಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದ್ದು, ಅರವಿಂದ್ ಎಸ್ ಕಷ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರತೀಕ್ ಶೆಟ್ಟಿ ಅವರ ಸಂಕಲನ ಇದೆ.

Rishab Shettys Hero Movie First Look Poster Released

ಸದ್ಯಕ್ಕೆ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದೆ ಸಿನಿಮಾವೊಂದು ಮಾಡಿ ಮುಗಿಸಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರ.

ರಿಷಬ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ:

ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿಣಿ ಕಥೆ, ಬೆಲ್‌ ಬಾಟಂ 2 ಹಾಗೂ ಇನ್ನು ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Recommended Video

Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada

More from Filmibeat

English summary
Kannada actor-director Rishab Shetty's Hero Movie First Look Poster Released. the movie directed by Bharath Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X