4 ದಿನಕ್ಕೆ 'ಕಾಂತಾರ- 1' ಚಿತ್ರಕ್ಕೆ ಎಷ್ಟು ಟಿಕೆಟ್ ಬುಕ್ ಆಗಿದೆ? ಪಿವಿಆರ್ ಕೊಟ್ಟ ಲೆಕ್ಕ ಎಷ್ಟು?

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಿಡುಗಡಗೆ ಕ್ಷಣಗಣನೆ ಶುರುವಾಗಿದೆ. ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದೆ. ನಾಲ್ಕು ದಿನಗಳ ಹಿಂದೆಯೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಪ್ರೇಕ್ಷಕರಿಗೆ ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ.

3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಪ್ರೀಕ್ವೆಲ್ ಬಗ್ಗೆ ನಿರೀಕ್ಷೆ ಎವರೆಸ್ಟ್ ಎತ್ತರಕ್ಕಿದೆ. ಚಿತ್ರದ ಟ್ರೈಲರ್ ಹಾಗೂ ಒಂದು ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಕರ್ನಾಟಕದ ಬಳಿಕ ಕೇರಳ, ತಮಿಳುನಾಡು, ಉತ್ತರ ಭಾರತದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಇವತ್ತು(ಸೆಪ್ಟೆಂಬರ್ 30) ಆಂಧ್ರ, ತೆಲಂಗಾಣದಲ್ಲಿ ಬುಕ್ಕಿಂಗ್ ಓಪನ್ ಆಗಲಿದೆ. 15 ದಿನಗಳ ಹಿಂದೆಯೇ ಓವರ್‌ಸೀಸ್‌ನಲ್ಲಿ ಬುಕ್ಕಿಂಗ್ ಶುರುವಾಗಿತ್ತು.

Rishab Shetty s Kantara-1 Crosses 3 Lakh Advance Bookings Ahead of October 1 Premiere

ಕಳೆದ 4 ದಿನಗಳಿಂದ 'ಕಾಂತಾರ- 1' ಚಿತ್ರಕ್ಕೆ 3 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿದೆ. ಅಂದರೆ ಮೊದಲ ದಿನವೇ 3 ಲಕ್ಕಕ್ಕೂ ಅಧಿಕ ಮಂದಿ ಸಿನಿಮಾ ವೀಕ್ಷಿಸುವುದು ಖಚಿತವಾಗಿದೆ. ಸಾಕಷ್ಟು ಜನ ನಾಳೆ(ಅಕ್ಟೋಬರ್ 1) ರಾತ್ರಿ ಪ್ರೀಮಿಯರ್‌ ಶೋಗೆ ಕಾಯುತ್ತಿದ್ದಾರೆ. ಅದೇ ಕಾರಣಕ್ಕೆ ಕೆಲವರು ಇನ್ನು ಟಿಕೆಟ್ ಬುಕ್ ಮಾಡಿಲ್ಲ. ಪ್ರೀಮಿಯರ್ ಶೋಗಳ ಟಿಕೆಟ್ ಬುಕ್ಕಿಂಗ್ ಶುರುವಾದರೆ ಮತ್ತಷ್ಟು ಜನ ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಾರೆ.

ಬುಕ್‌ಮೈ ಶೋ ಅಡ್ವಾನ್ಸ್ ಬುಕ್ಕಿಂಗ್

ಮೊದಲ ದಿನ(ಸೆಪ್ಟೆಂಬರ್ 26) - 75280 ಟಿಕೆಟ್

2ನೇ ದಿನ(ಸೆಪ್ಟೆಂಬರ್ 27) - 62240 ಟಿಕೆಟ್

3ನೇ ದಿನ (ಸೆಪ್ಟೆಂಬರ್ 28) - 92830 ಟಿಕೆಟ್

4ನೇ ದಿನ (ಸೆಪ್ಟೆಂಬರ್ 29) - 79250 ಟಿಕೆಟ್

ಒಟ್ಟು - 3,00,960 ಟಿಕೆಟ್

ಹೀಗೆ ಬುಕ್‌ ಮೈಶೋನಲ್ಲಿ 'ಕಾಂತಾರ-1' ಟಿಕೆಟ್ ಹಾಟ್ ಕೇಕ್ ರೀತಿ ಮಾರಾಟವಾಗುತ್ತಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಕೆಲ ಭಾಗಗಳಲ್ಲಿ ಇನ್ನು ಬುಕ್ಕಿಂಗ್ ಓಪನ್ ಆಗಬೇಕಿದೆ. ಎಲ್ಲಾ ಕಡೆ ಶುರುವಾದರೆ ಮತ್ತಷ್ಟು ಜನ ಟಿಕೆಟ್ ಬುಕ್ ಮಾಡಲು ಮುಗಿಬೀಳುತ್ತಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಅದಕ್ಕೆ ತಕ್ಕಂತೆ ರಿಲೀಸ್ ಪ್ಲ್ಯಾನ್ ನಡೀತಿದೆ.

ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ ಮಾತ್ರ 4 ದಿನಕ್ಕೆ 1.25 ಲಕ್ಷ ಟಿಕೆಟ್ ಬುಕ್ ಆಗಿರುವುದಾಗಿ ಪಿವಿಆರ್ ಸಿನಿಮಾಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಾಗಿದ್ದರೂ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಅಕ್ಟೋಬರ್ 2ರಂದು ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೂಡ ಟಿಕೆಟ್ ದರ ಹೆಚ್ಚಾಗಿದೆ.

ರಿಷಬ್ ಶೆಟ್ಟಿ ಮತ್ತವರ ತಂಡದ 3 ವರ್ಷಗಳ ಪರಿಶ್ರಮ ಈ ಚಿತ್ರದಲ್ಲಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ತಂಡ ಬ್ಯುಸಿಯಾಗಿದೆ. ಸಿನಿಮಾ ಬಿಡುಗಡೆಗೆ ಅಂತಿಮ ಸಿದ್ಧತೆ ಜೋರಾಗಿದೆ. ಉತ್ತರ ಭಾರತದಲ್ಲಿ ಎಎ ಫಿಲ್ಮ್ಸ್ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ. ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ರೈಟ್ಸ್ ಕೊಂಡುಕೊಂಡಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ದೊಡ್ಡ ದೊಡ್ಡ ಡಿಸ್ಟ್ರಿಬ್ಯೂಷನ್ ಸಂಸ್ಥೆಗಳು ಬೇರೆ ಬೇರೆ ಏರಿಯಾ ರೈಟ್ಸ್ ಧಕ್ಕಿಸಿಕೊಂಡಿವೆ.

30 ದೇಶಗಳಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗುತ್ತಿದೆ. ಸ್ಪ್ಯಾನಿಷ್ ಭಾಷೆಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಭಾರತದಿಂದ ಇದು ಮೊದಲ ಪ್ರಯತ್ನ ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.

More from Filmibeat

English summary
Kantara-1 Creates Buzz with 3 Lakh Advance Tickets; Premiere Kicks Off October 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X