ಸೋಲ್ಡೌಟ್ ಸೋಲ್ಡೌಟ್.. ಗಂಟೆಗೆ 50,000 ಟಿಕೆಟ್ ಸೇಲ್; 'ಕಾಂತಾರ'- 1 ದಾಖಲೆ ದರ್ಶನ

ಕಾಂತಾರ.. ಕಾಂತಾರ.. ಕಾಂತಾರ. ಎಲ್ಲೆಲ್ಲೂ ಕಾಂತಾರ ಫೀವರ್ ಶುರುವಾಗಿದೆ. ಪ್ರೀಮಿಯರ್ ಶೋಗಳಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು ಮೊದಲ ಸಿನಿಮಾ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಎಲ್ಲಾ ಕಡೆ ಚಿತ್ರದ ಕಲೆಕ್ಷನ್ ಜೋರಾಗಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ, ತೆಲಂಗಾಂಣದಲ್ಲಿ ಕೂಡ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಮೌತ್ ಟಾಕ್‌ ಮೂಲಕ 'ಕಾಂತಾರ'-1 ಕ್ರೇಜ್ ಹೆಚ್ಚುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಕಲೆಕ್ಷನ್ ಗ್ಯಾರಂಟಿ ಎನ್ನುವ ಚರ್ಚೆ ಶುರುವಾಗಿದೆ. ನೋಡಿದವರೆಲ್ಲಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ರೈಲರ್‌ನಲ್ಲಿ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಡದ ರಿಷಬ್ ಶೆಟ್ಟಿ ಎಲ್ಲವನ್ನು ತೆರೆಮೇಲೆ ತಂದು ಸರ್‌ಪ್ರೈಸ್ ಮಾಡಿದ್ದಾರೆ. ಕೊನೆ ಅರ್ಧ ಗಂಟೆ ಪ್ರೇಕ್ಷಕರನ್ನು ಭಕ್ತಿಪರವಶರನ್ನಾಗಿ ಮಾಡಿ ಕಮಾಲ್ ಮಾಡಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳಾ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಹಾಗಾಗಿ ದಸರಾ ಹಬ್ಬದ ರಜೆ ಚಿತ್ರದ ಗಳಿಕೆಗೆ ವರವಾಗಲಿದೆ.

Rishab Shetty s Kantara-1 Opens to Record-Breaking Premieres Rs 1000 Crore Buzz Follows

ಪ್ರೀಮಿಯರ್ ಶೋಗಳು ಹಿಟ್ ಆಗುತ್ತಿದ್ದಂತೆ ಒಮ್ಮೆಲೆ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದಾರೆ. ಪರಿಣಾಮ ಗಂಟೆಗೆ 50 ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಕನ್ನಡ ಚಿತ್ರವೊಂದಕ್ಕೆ ಇಂತಹ ರೆಸ್ಪಾನ್ಸ್' ಇದೇ ಮೊದಲು. ಯಶ್ ನಟನೆಯ 'ಕೆಜಿಎಫ್'- 2 ಚಿತ್ರದ ದಾಖಲೆಯನ್ನು ಕೆಲವು ಕಡೆ 'ಕಾಂತಾರ- 1' ಹಿಂದಿಕ್ಕಿದೆ. ಬೆಂಗಳೂರಿನಲ್ಲಿ ರೆಸ್ಪಾನ್ಸ್ ಅಬ್ಬಬ್ಬಾ ಎನ್ನುವಂತಿದೆ. ಪ್ರೀಮಿಯರ್ ಶೋಗಳ ಬಳಿಕ ಕೂಡ ಬೆಂಗಳೂರಿನಲ್ಲಿ ಸಾವಿರಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿದೆ.

ಬೆಳಗ್ಗೆ 9 ಗಂಟೆಗೆ ಮುನ್ನ(Early Morning Shows) ಬೆಂಗಳೂರಿನಲ್ಲಿ 232 ಶೋಗಳಲ್ಲಿ 'ಕಾಂತಾರ- 1' ಸಿನಿಮಾ ಪ್ರದರ್ಶನ ಕಂಡಿದೆ. ಇದಕ್ಕೂ ಮುನ್ನ 'ಕೆಜಿಎಫ್- 2' ಸಿನಿಮಾ 202 ಶೋಗಳಲ್ಲಿ ಪ್ರದರ್ಶನ ಕಂಡಿದ್ದು ದಾಖಲೆ ಆಗಿತ್ತು. 'ಕೆಜಿಎಫ್- 2' ಸಿನಿಮಾ ಮಧ್ಯರಾತ್ರಿ ಕೆಲವೆಡೆ ಪ್ರೀಮಿಯರ್ ಶೋ ಆಗಿತ್ತು. ಹಾಗಾಗಿ ರಿಷಬ್ ಶೆಟ್ಟಿ ಸಿನಿಮಾ ಬಹಳ ಮುಂದೆ ಇದೆ.

Rishab Shetty s Kantara-1 Opens to Record-Breaking Premieres Rs 1000 Crore Buzz Follows

ಹಿಂದಿ ಬೆಲ್ಟ್‌ನಲ್ಲಿ ನಿಧಾನವಾಗಿ 'ಕಾಂತಾರ'-1 ಸಿನಿಮಾ ಟೇಕ್ ಆಫ್ ಆಗುತ್ತಿದೆ. ಒಮ್ಮೆ ಅಲ್ಲಿ ಸಿನಿಮಾ ಕಚ್ಚಿಕೊಂಡರೆ ಬಾಕ್ಸಾಫೀಸ್‌ ದಾಖಲೆಗಳು ಧೂಳಿಪಟವಾಗಿ ಅನಾಯಾಸವಾಗಿ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಲಿದೆ. ಐಮ್ಯಾಕ್ಸ್, 4DX ವರ್ಷನ್‌ಗಳಲ್ಲಿ ಕೂಡ ಸಿನಿಮಾ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಸಾಮಾನ್ಯ ಪ್ರೇಕ್ಷಕರಿಂದ ಮಾತ್ರವಲ್ಲ ವಿಮರ್ಶಕರಿಂದಲೂ ಚಿತ್ರಕ್ಕೆ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಒಂದು ದಿನ ಮುನ್ನ ಅಂದ್ರೆ ನಿನ್ನೆ(ಅಕ್ಟೋಬರ್ 1) ಬೆಂಗಳೂರಿನಲ್ಲೇ 198 ಶೋಗಳಲ್ಲಿ 'ಕಾಂತಾರ- 1' ಸಿನಿಮಾ ಪ್ರೀಮಿಯರ್ ಆಗಿತ್ತು. ಅದರ ಹೊರತಾಗಿಯೂ ಇವತ್ತು ಜನ ಸಿನಿಮಾ ನೋಡಲು ಮುಗಿಬಿದಿದ್ದಾರೆ. ಮುಂದೆ ಫ್ಯಾಮಿಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುವುದು ಖಚಿತವಾಗ್ತಿದೆ. ಫಸ್ಟ್ ವೀಕೆಂಡ್ ಬಳಿಕ ಟಿಕೆಟ್ ದರ ಕಮ್ಮಿಯಾಗಿ ಮತ್ತಷ್ಟು ಪ್ರೇಕ್ಷಕರನ್ನು ಸಿನಿಮಾ ಸೆಳೆಯಲಿದೆ. ಇನ್ನು ಮೊದಲ ದಿನವೇ 150 ಕೋಟಿ ರೂ. ಕಲೆಕ್ಷನ್ ಮಾಡುವ ಅಂದಾಜಿದೆ.

ಸಿನಿಮಾ ನೀಡುಗರಿಗೆ ಅದ್ಭುತ ಅನುಭವ ನೀಡುತ್ತಿದ್ದು ಮತ್ತೆ ಮತ್ತೆ ಬಂದು ನೋಡುವ ಸಾಧ್ಯತೆಯಿದೆ. 'ಪುಷ್ಪ- 2' ಬಳಿಕ ಯಾವುದೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಗಡಿ ದಾಟಲಿಲ್ಲ. 'ಕಾಂತಾರ- 1' ಆ ದಾಖಲೆ ಮಾಡುವ ಸುಳಿವು ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದರ ಮೇಲೆ ಸಿನಿಮಾ ಬಾಕ್ಸಾಫೀಸ್ ಗಳಿಕೆ ನಿರ್ಧಾರವಾಗಲಿದೆ. ಒಟ್ಟಾರೆ ಸಿನಿಮಾ ಗೆದ್ದಿದೆ. ಪ್ರೇಕ್ಷಕರು ಇದನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಾರೆ ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.

More from Filmibeat

English summary
Mass Craze for ‘Kantara-1’ Premiere; Box Office Predictions Touch Rs 1000 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X