'ಕಾಂತಾರ- 1' ಮತ್ತೊಂದು ಸಾಂಗ್ ರಿಲೀಸ್; ಆಹಾ.. ಆಹಾಹಾ.. ಆಹಾ.. ಆಹಾಹಾ

'ಕಾಂತಾರ'-1 ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿಯಿದೆ. ಚಿತ್ರದ ಪ್ರೀಮಿಯರ್ ಶೋಗಳ ಬಗ್ಗೆ ಗೊಂದಲ ಮುಂದುವರೆದಿದೆ. ಆದರೆ ನಾಳೆ(ಅಕ್ಟೋಬರ್ 2) ಬೆಳ್ಳಂಬೆಳಗ್ಗೆ 6 ಗಂಟೆಗೆ ಸಿನಿಮಾ ತೆರೆಗಪ್ಪಳಿಸುತ್ತಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಮತ್ತೊಂದು ಸಾಂಗ್ ಬಂದು ಸದ್ದು ಮಾಡ್ತಿದೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಇತ್ತೀಚೆಗೆ 'ಬ್ರಹ್ಮಕಲಶ' ಹಾಡು ಬಂದು ಸಿನಿರಸಿಕರ ಮನ ಗೆದ್ದಿತ್ತು. ಇದೀಗ ರೆಬಲ್ ಸಾಂಗ್ ಬಂದಿದೆ. ಥೇಟ್ 'ವಹಾರ ರೂಪಂ' ಹಾಡನ್ನು ಇದು ನೆನಪಿಸುತ್ತಿದೆ. 5 ಭಾಷೆಗಳಲ್ಲಿ ಸಾಂಗ್ ರಿಲೀಸ್ ಆಗಿದ್ದು ಕನ್ನಡದಲ್ಲಿ ರಾಮ್‌ದಾಸ್ ಕನ್ನಡದಲ್ಲಿ ಹಾಡಿದ್ದು ಹಿಂದಿ ಸೇರಿ ಇನ್ನುಳಿದ ನಾಲ್ಕು 4 ಭಾಷೆಗಳಲ್ಲಿ ದಿಲ್ಜಿತ್ ದೋಸಾಂಜ್ ದನಿಯಾಗಿದ್ದಾರೆ.

Rishab Shetty s Kantara-1 Rebel Song Launched Ramdas and Diljit Dosanjh Add Energy to Ajaneesh s Music

ಅಜನೀಶ್ ಹಂಟಿಂಗ್ ಟ್ಯೂನ್, ರಾಮ್‌ದಾಸ್ ಖಡಕ್ ವಾಯ್ಸ್‌ನಲ್ಲಿ ಹಾಡು ಪದೇ ಪದೆ ಕೇಳಬೇಕು ಎನಿಸುವಂತಿದೆ. ನಿನ್ನೆ ವಿಜಯವಾಡದಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ತೆಲುಗು ಸಾಂಗ್ ಪ್ರದರ್ಶನ ಮಾಡಲಾಗಿತ್ತು. ಬಳಿಕ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಯೂಟ್ಯೂಬ್‌ನಲ್ಲಿ ಎಲ್ಲಾ ಭಾಷೆಯ ಹಾಡು ಅಪ್ಲೋಡ್ ಆಗಿತ್ತು. ಚಿತ್ರದ ಒಂದಷ್ಟು ವಿಷ್ಯುವಲ್ಸ್ ಮಿಕ್ಸ್ ಮಾಡಿ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದ್ದಾರೆ.

ಹಾಡು ಪದೇ ಪದೇ ಕೇಳುವಂತಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಲಕ್ಷ ಲಕ್ಷ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಂಡು ರೆಬಲ್ ಸಾಂಗ್ ಸದ್ದು ಮಾಡ್ತಿದೆ. ತ್ರಿಲೋಕ್ ವಿಕ್ರಮ್ ಸಾಹಿತ್ಯ ಬರೆದಿದ್ದಾರೆ. "ಕಾಡ ಬೆಂಕಿಯು ಊರ ನೋಡ ಬಂದಿದೆ, ತಡೆ ಯಾರದೋ...? ಕಾಲು ತೊಳೆದು ಸ್ವಾಗತ ಮಾಡುವಾಗ ಸಾಗರ" ಎನ್ನುವ ಸಾಲುಗಳು ಗಮನ ಸೆಳೆಯುತ್ತಿದೆ.

ಪದೇ ಪದೇ ಬರುವ ಆಹಾ.. ಆಹಾಹಾ..ಆಹಾ..ಆಹಾಹಾ.. ಎನ್ನುವ ಉದ್ಘಾರ ಹೊಸ ಅನುಭವ ನೀಡುತ್ತದೆ. ಬೆರ್ಮೆ(ರಿಷಬ್ ಶೆಟ್ಟಿ) ತನ್ನವರ ಜೊತೆ ಕುಣಿದು ಕುಪ್ಪಳಿಸಿರುವುದನ್ನು ಹಾಡಿನಲ್ಲಿ ನೋಡಬಹುದು. ಇನ್ನು ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. 5 ದಿನಕ್ಕೆ 4 ಲಕ್ಷದ 43 ಸಾವಿರ ಟಿಕೆಟ್ ಬುಕ್ ಆಗಿದೆ. ಹಾಗಾಗಿ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆಯಿದೆ.

ಆಂಧ್ರದಲ್ಲಿ ಕೂಡ 'ಕಾಂತಾರ- 1' ಟಿಕೆಟ್ ದರ ಹೆಚ್ಚಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಸಖತ್ತಾಗಿದೆ. 30 ದೇಶಗಳಲ್ಲಿ ನಾಳೆ ಸಿನಿಮಾ ತೆರೆಗಪ್ಪಳಿಸುತ್ತಿದೆ. ಭಾರತದಲ್ಲಿ 7000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಾಂತಾರ- 1' ದರ್ಶನ ಆಗಲಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಹಿಟ್ ಆಗಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಇಲ್ಲೂ ಕಾಣಿಸಿಕೊಂಡಿದ್ದಾರೆ. 3- 4ನೇ ಶತಮಾನದ ಕಾಲದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅವತ್ತಿನ ಕಾಲಘಟ್ಟ ತೆರೆಗೆ ತರಲು ಚಿತ್ರತಂಡ ಬಹಳ ಶ್ರಮಿಸಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು ಇನ್ನುಳಿದಂತೆ ಪ್ರಮೋದ್ ಶೆಟ್ಟಿ, ಗುಲ್ಶನ್ ದೇವಯ್ಯ, ಜಯರಾಂ ತಾರಾಗಣದಲ್ಲಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ 'ಕಾಂತಾರ- 1' ಸಿನಿಮಾ ನಿರ್ಮಾಣವಾಗಿದೆ. ಓಟಿಟಿ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. 'ಕೆಜಿಎಫ್'-2 ಬಳಿಕ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಇದು. ಸಿನಿಮಾ ಕಲೆಕ್ಷನ್ ಕೂಡ ದಾಖಲೆ ಮಟ್ಟದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಸಿನಿಪ್ರೇಮಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

More from Filmibeat

English summary
Rishab Shetty’s ‘Kantara-1’ Rebel Song Launched; Ramdas and Diljit Dosanjh Add Energy to Ajaneesh’s Music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X