ಹೊಸ ಪ್ರಯೋಗಕ್ಕೆ ಮುಂದಾದ ಕನ್ನಡದ ಈ ನಟನನ್ನು ಗುರುತಿಸಿ

By Naveen

Recommended Video

ರಿಷಬ್ ಶೆಟ್ಟಿಯವರು 'ಕಥಾ ಸಂಗಮ'ಕ್ಕಾಗಿ ಪಡೆದಿರುವ ಈ ಹೊಸ ಲುಕ್ ನಲ್ಲಿ ನೀವು ಅವರನ್ನು ಗುರುತಿಸಲು ಅಸಾಧ್ಯ !

ಯಾವುದೇ ಒಂದು ಸಿನಿಮಾ ಆಗಲಿ ಅದಕ್ಕೆ ಪೋಸ್ಟರ್ ಬಹಳ ಮುಖ್ಯ. ಚಿತ್ರದ ಫಸ್ಟ್ ಲುಕ್ ಮೂಲಕವೇ ಪ್ರೇಕ್ಷಕರಿಗೆ ಆ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುತ್ತದೆ. ಅದೇ ರೀತಿ ಈಗ ಕನ್ನಡದಲ್ಲಿ ರಿಲೀಸ್ ಆಗಿರುವ ಒಂದು ಚಿತ್ರದ ಲುಕ್ ಸಖತ್ ಸುದ್ದಿ ಮಾಡುತ್ತಿದೆ.

ಅಂದಹಾಗೆ, ಇದು 'ಕಥಾ ಸಂಗಮ' ಚಿತ್ರದ ಫಸ್ಟ್ ಲುಕ್. ಈ ಚಿತ್ರದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಒಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸದ್ಯ ಅವರ ಲುಕ್ ಬಿಡುಗಡೆಯಾಗಿದ್ದು, ಇದು ರಿಷಬ್ ಶೆಟ್ಟಿ ಅವರ ಅಂತ ನಂಬುವುದಕ್ಕೆ ಆಗದಿರುವ ಮಟ್ಟಿಗೆ ವಿಭಿನ್ನವಾಗಿ ಅವರನ್ನು ಇಲ್ಲಿ ತೋರಿಸಲಾಗಿದೆ. 'ಕಥಾ ಸಂಗಮ' 7 ಕಥೆಗಳ ಸಿನಿಮಾವಾಗಿದ್ದು, ಇದು ಅವುಗಳ ಪೈಕಿ ಮೊದಲ ಭಾಗವಾಗಿದೆ. ಮುಂದೆ ಓದಿ...

ಬಿಕ್ಷುಕನ ಪಾತ್ರ

ಬಿಕ್ಷುಕನ ಪಾತ್ರ

'ಕಿರಿಕ್ ಪಾರ್ಟಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಈಗ ನಟನೆಗೆ ಮರಳಿದ್ದಾರೆ. ರಿಷಬ್ 'ಕಥಾ ಸಂಗಮ' ಚಿತ್ರದಲ್ಲಿ ಬಿಕ್ಷುಕನ ಪಾತ್ರ ಮಾಡುತ್ತಿದ್ದು, ಅವರ ಲುಕ್ ಈಗ ಎಲ್ಲರ ಗಮನ ಸೆಳೆದಿದೆ.

ಬಾಂಬೆಯ ಮೇಕಪ್ ಕಲಾವಿದ

ಬಾಂಬೆಯ ಮೇಕಪ್ ಕಲಾವಿದ

ಜಿಭಾ ಶರೀಭ್ ಎಂಬ ಬಾಂಬೆಯ ಮೇಕಪ್ ಕಲಾವಿದರೊಬ್ಬರು ಸತತ ಒಂದು ದಿನ ಪೂರ್ತಿ ಸಮಯ ತೆಗೆದುಕೊಂಡು ರಿಷಬ್ ಶೆಟ್ಟಿ ಅವರಿಗೆ ಈ ಮೇಕಪ್ ಮಾಡಿದ್ದಾರಂತೆ.

ಹರಿಪ್ರಿಯಾ ನಾಯಕಿ

ಹರಿಪ್ರಿಯಾ ನಾಯಕಿ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಈ ಹಿಂದೆ ಹರಿಪ್ರಿಯಾ ಅವರಿಗೆ 'ರಿಕ್ಕಿ' ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿದ್ದರು.

ಒಂದೇ ಲೊಕೇಷನ್

ಒಂದೇ ಲೊಕೇಷನ್

'ಕಥಾ ಸಂಗಮ' ಸಿನಿಮಾದ ಈ ಭಾಗ ಒಂದೇ ಲೊಕೇಷನ್ ನಲ್ಲಿ ನಡೆಯಲಿದೆ. ವಿಶೇಷ ಅಂದರೆ ಇದೊಂದು ಸೈಲೆಂಟ್ ಸಿನಿಮಾವಾಗಿದೆ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಜೊತೆಗೆ ರುಮಿ ಎಂಬ ಬೀದಿ ನಾಯಿ ಚಿತ್ರದ ಪ್ರಮುಖ ಪಾತ್ರದಲ್ಲಿ ಇದೆ.

ಕಿರಣ್ ರಾಜ್ ನಿರ್ದೇಶಕ

ಕಿರಣ್ ರಾಜ್ ನಿರ್ದೇಶಕ

'ಕಥಾ ಸಂಗಮ' ಚಿತ್ರವನ್ನು ಕಿರಣ್ ರಾಜ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಪ್ರಕಾಶ್, ಪ್ರದೀಪ್ ಮತ್ತು ರಿಷಬ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Kannada director Rishab Shetty starring 'Katha Sangama' kannada movie first look released. He has portrayed a rather unique character in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X