For Quick Alerts
  ALLOW NOTIFICATIONS  
  For Daily Alerts

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಗೆ 2 ವರ್ಷದ ಸಂಭ್ರಮ: ಸೀಕ್ವೆಲ್ ಮಾಡ್ತಾರಾ ರಿಷಬ್ ಶೆಟ್ಟಿ?

  |

  ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರು. ರಿಷಬ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ವಿಭಿನ್ನ ಸಿನಿಮಾಗಳ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದಾರೆ. 'ಕಿರಿಕ್ ಪಾರ್ಟಿ' ಅಂತ ಸೂಪರ್ ಹಿಟ್ ಸಿನಿಮಾ ನಿರ್ದೇಶನದ ಬಳಿಕ ರಿಷಬ್ ಸಾರಥ್ಯದಲ್ಲಿ ಬಂದ ಸಿನಿಮಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'.

  Brahma ಚಿತ್ರದ ಅಪಾಯಕಾರಿ ಕಾರು ಚೇಸಿಂಗ್ ದೃಶ್ಯ ತಯಾರಾಗಿದ್ದು ಹೀಗೆ | Car Crash Scenes | Filmibeat Kannada

  ಕನ್ನಡ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದಿರುವ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗೆ 2 ವರ್ಷದ ಸಂಭ್ರಮ. 2018 ಆಗಸ್ಟ್ 24ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ರಾಜ್ಯದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಮುಂದೆ ಓದಿ...

  ಥಟ್ ಅಂತ ನೋಡಿದ್ರೆ ಈ ನಟ ಯಾರು ಅಂತ ಗೊತ್ತೇ ಆಗಲ್ಲ!ಥಟ್ ಅಂತ ನೋಡಿದ್ರೆ ಈ ನಟ ಯಾರು ಅಂತ ಗೊತ್ತೇ ಆಗಲ್ಲ!

   ಗಡಿಭಾಗದ ಕನ್ನಡ ಶಾಲೆಗಳ ಪರಿಸ್ಥಿತಿಯ ಬಗ್ಗೆ ಇದ್ದ ಸಿನಿಮಾ

  ಗಡಿಭಾಗದ ಕನ್ನಡ ಶಾಲೆಗಳ ಪರಿಸ್ಥಿತಿಯ ಬಗ್ಗೆ ಇದ್ದ ಸಿನಿಮಾ

  ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿ ಮತ್ತು ಅಲ್ಲಿನ ಕನ್ನಡಿಗರಿಗೆ ಉಂಟಾಗುವ ಸಮಸ್ಯೆಗಳನ್ನು ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದರು. ಮಕ್ಕಳ ಸಿನಿಮಾವಾದರೂ ಮಕ್ಕಳಿಂದ ದೊಡ್ಡವರವರೆಗೂ ಎಲ್ಲಾ ವರ್ಗದ ಪ್ರೇಕ್ಷಕರನ್ನು ಈ ಚಿತ್ರ ಸೆಳೆದಿತ್ತು.

   ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿಮಾ

  ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿಮಾ

  ಪ್ರೇಕ್ಷಕರ ಮೆಚ್ಚುಗೆಯ ಜೊತೆಗೆ ಪ್ರಶಸ್ತಿ ಬಾಚಿ ಕೊಳ್ಳುವುದರಲ್ಲಿಯೂ ಸಿನಿಮಾ ಹಿಂದೆ ಬಿದ್ದಿಲ್ಲ. ರಿಷಬ್ ಶೆಟ್ಟಿಯ ವಿಭಿನ್ನ ಪ್ರಯತ್ನಕ್ಕೆ ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಸಿನಿಮಾ ವಿದೇಶದಲ್ಲಿಯೂ ಉತ್ತಮ ಪ್ರದರ್ಶನ ಕಂಡಿದೆ.

  ರಿಷಬ್ ಶೆಟ್ಟಿಗೆ ಮುದ್ದು ಮಗನ ಮುದ್ದಾದ ಬರ್ಥಡೇ ವಿಶ್ ಹೇಗಿದೆ ನೋಡಿ...ರಿಷಬ್ ಶೆಟ್ಟಿಗೆ ಮುದ್ದು ಮಗನ ಮುದ್ದಾದ ಬರ್ಥಡೇ ವಿಶ್ ಹೇಗಿದೆ ನೋಡಿ...

   ಪ್ರೇಕ್ಷಕ ಪ್ರಭುಗಳ ಮೆಚ್ಚುಗೆ

  ಪ್ರೇಕ್ಷಕ ಪ್ರಭುಗಳ ಮೆಚ್ಚುಗೆ

  ಈ ಸಿನಿಮಾಗೆ ಈಗ 2 ವರ್ಷದ ಸಂಭ್ರಮ. ಈ ಸಿನಿಮಾದ ಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಆದರೂ ಈಗಲೂ ಸಿನಿಮಾ ನೋಡುತ್ತಿರುತ್ತೇವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಸಿನಿಮಾ ವೀಕ್ಷಿಸಿದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

   ಸೀಕ್ವೆಲ್ ಮಾಡ್ತಾರಾ ರಿಷಬ್?

  ಸೀಕ್ವೆಲ್ ಮಾಡ್ತಾರಾ ರಿಷಬ್?

  ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾದ ಸೀಕ್ವೆಲ್ ಮಾಡಿ ಎಂದು ನೆಟ್ಟಿಗರು ರಿಷಬ್ ಶೆಟ್ಟಿ ಬಳಿ ಮನವಿ ಮಾಡುತ್ತಿದ್ದಾರೆ. ಮೊದಲ ಭಾಗ ಸೂಪರ್ ಹಿಟ್ ಆಗಿದೆ, ಹಾಗಾಗಿ ಎರಡನೇ ಭಾಗ ಮಾಡಿದರೆ ಖಂಡಿತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತೆ ಎಂದು ಪ್ರೇಕ್ಷಕರೇ ಸಲಹೆ ನೀಡುತ್ತಿದ್ದಾರೆ. ಆದರೆ ರಿಷಬ್ ಸೀಕ್ವೆಲ್ ಮಾಡ್ತಾರಾ?

  English summary
  Rishab Shetty's sarkari hiriya prathamika shaale kasaragod complete two years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X