'ಕಾಂತಾರ- 1' ಎಕ್ಸ್‌ಕ್ಲೂಸಿವ್ ಮೇಕಿಂಗ್ ಫೋಟೊಗಳನ್ನು ಹಂಚಿಕೊಂಡ ಪ್ರಗತಿ ಶೆಟ್ಟಿ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಸೋಮವಾರದ ಪರೀಕ್ಷೆ ಗೆದ್ದು ಸಿನಿಮಾ ಸದ್ದು ಮಾಡ್ತಿದೆ. ನಿಧಾನವಾಗಿ ಉತ್ತರಭಾರತದಲ್ಲಿ ಕಾಂತಾರ ಕಿಚ್ಚು ಶುರುವಾಗಿದೆ. ಇನ್ನು ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ.

ಟ್ರೈಲರ್‌ನಲ್ಲಿ ಕೂಡ ಚಿತ್ರದ ಕಥೆ ಬಗ್ಗೆ ರಿಷಬ್ ಶೆಟ್ಟಿ ಹೆಚ್ಚು ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಚಿತ್ರಮಂದಿರದಲ್ಲೇ ಪ್ರೇಕ್ಷಕರನ್ನು ಸರ್‌ಪ್ರೈಸ್ ಮಾಡಿದ್ದಾರೆ. ಸಿನಿಮಾ ಶುರುವಾದ ದಿನದಿಂದಲೂ ಯಾವುದೇ ಸುದ್ದಿ ಲೀಕ್ ಆಗದಂತೆ ನೋಡಿಕೊಂಡಿದ್ದರು. ಕಲಾವಿದರು, ತಂತ್ರಜ್ಞರು ಸೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗುವಂತರಿಲಿಲ್ಲ. ಮೇಕಿಂಗ್ ಫೋಟೊ, ವೀಡಿಯೋ ಲೀಕ್ ಆಗದಂತೆ ಎಚ್ಚರವಹಿಸಿದ್ದರು. ಸಿನಿಮಾ ಬಿಡುಗಡೆ ಬಳಿಕ ಒಬ್ಬೊಬ್ಬರಾಗಿ ಚಿತ್ರದ ಮಾತನಾಡುತ್ತಿದ್ದಾರೆ.

Rishab Shetty s Wife Pragati Shares Exclusive Behind-the-Scenes Photos from Kantara-1

'ಕಾಂತಾರ-1' ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರಜ್ಞರು, ಕಲಾವಿದರು ಮೇಕಿಂಗ್ ವೇಳೆ ಕ್ಲಿಕ್ಕಿಸಿದ ಫೋಟೊ, ವೀಡಿಯೋಗಳನ್ನು ಈಗ ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇಂತಾದೊಂದು ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಪತ್ನಿಯ ಸಹಕಾರ, ಬೆಂಬಲದ ಬಗ್ಗೆ ರಿಷಬ್ ಶೆಟ್ಟಿ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಆಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ ಬಗ್ಗೆಯೂ ಮೆಚ್ಚಿಕೊಂಡಿದ್ದಾರೆ.

"ಕಾಂತಾರ-ಚಾಪ್ಟರ್-1 ಭಾಗವಾಗಿರುವುದು ನಿಜಕ್ಕೂ ಮರೆಯಲಾಗದ ಪ್ರಯಾಣ. ಬಹಳ ಬೇರೂರಿರುವ ಕಥೆಗೆ ಕಾಸ್ಟ್ಯೂಮ್ ಡಿಸೈನ್ ಮಾಡುವುದು, ದೈವಿಕವಾಗಿತ್ತು. ಅದೊಂದು ಎಮೋಷನ್ ಆಗಿತ್ತು. ಈ ದೊಡ್ಡ ವಿಷನ್‌ನ ಒಂದು ಸಣ್ಣ ಭಾಗವನ್ನು ಹೆಣೆದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ. ಶೂಟಿಂಗ್ ವೇಳೆ ಕಾಸ್ಟ್ಯೂಮ್ ಡಿಸೈನ್ ಕೆಲಸದಲ್ಲಿ ನಿರತರಾಗಿದ್ದಾಗ ಕ್ಲಿಕ್ಕಿಸಿದ ಒಂದಷ್ಟು ಕ್ಯಾಂಡಿಡ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಸೆಟ್‌ನಲ್ಲಿ ಸಹ ಕಲಾವಿದರ ಜೊತೆಗೂ ಪೋಸ್ ಕೊಟ್ಟಿದ್ದಾರೆ.

3 ವರ್ಷಗಳ ಹಿಂದೆ 'ಕಾಂತಾರ' ಚಿತ್ರಕ್ಕೂ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಪತ್ನಿಮ, ಮಕ್ಕಳ ಸಮೇತ ಕುಂದಾಪುರಕ್ಕೆ ರಿಷಬ್ ಶೆಟ್ಟಿ ಶಿಫ್ಟ್ ಆಗಿದ್ದರು. ಮಗನನ್ನು ಅಲ್ಲೇ ಶಾಲೆಗೆ ಸೇರಿಸಿದ್ದರು. ಹೊರಗಿನ ಪ್ರಪಂಚದ ಸಂಬಂಧವೇ ಇಲ್ಲದೇ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

'ಉಳಿದವರು ಕಂಡಂತೆ' ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು ಪ್ರಗತಿ ಶೆಟ್ಟಿ. ಬಳಿಕ ಸ್ನೇಹಿತೆಯರ ಜೊತೆ 'ರಿಕ್ಕಿ' ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿದ ಬಳಿಕ ಚಿತ್ರಮಂದಿರಕ್ಕೆ ಬಂದಿದ್ದ ತಂಡದ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಪ್ರೇಕ್ಷಕರ ಮುಗಿಬಿದ್ದಿದ್ದರು. ಎಲ್ಲರೂ ರಕ್ಷಿತ್ ಶೆಟ್ಟಿ ಜೊತೆ ಫೋಟೊಗೆ ಕಾಯುತ್ತಿದ್ದರು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ರಿಷಬ್ ಶೆಟ್ಟಿ ನೋಡಿ ಪ್ರಗತಿ ಸ್ನೇಹಿತೆಯರು ಇವ್ರೇ, ರಿಷಬ್ ಶೆಟ್ಟಿ, ಚಿತ್ರದ ನಿರ್ದೇಶಕರು ಅಂದಾಗ ಪ್ರಗತಿ ಅವರೊಟ್ಟಿಗೆ ಫೋಟೊ ತೆಗೆದುಕೊಂಡಿದ್ದರು.

ಅಲ್ಲೇ ಮೊದಲ ಬಾರಿಗೆ ರಿಷಬ್- ಪ್ರಗತಿ ಭೇಟಿ ಆಗಿತ್ತು. ಬಳಿಕ ಪ್ರಗತಿ ಶೆಟ್ಟಿ ಅವರನ್ನು ಫೇಸ್‌ಬುಕ್‌ನಲ್ಲಿ ಹುಡುಕಿ ರಿಷಬ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಮದುವೆ ಆಗಲು ನಿಶ್ಚಯಿಸಿದ್ದರು. ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ ಮದುವೆ ಕೂಡ ಆಗಿಬಿಟ್ಟರು. ದಂಪತಿಗೆ ಒಬ್ಬ ಮಗ, ಒಬ್ಬಳು ಮಗಳು ಇದ್ದಾರೆ.

'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿ ಬದುಕನ್ನು ಬದಲಿಸಿಬಿಟ್ಟಿದೆ. ಕೋವಿಡ್ ಸಂಕಷ್ಟದ ಬಳಿಕ ಸಣ್ಣದಾಗಿ ಶುರು ಮಾಡಿದ್ದ ಸಿನಿಮಾ ತೆರೆಕಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಅಂದಾಜು 15 ಕೋಟಿ ಬಜೆಟ್ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ಪ್ರೀಕ್ವೆಲ್ 4 ದಿನಕ್ಕೆ 300 ಕೋಟಿ ರೂ. ಕೊಳ್ಳೆ ಹೊಡೆದು ದಾಖಲೆ ಬರೆದಿದೆ.

More from Filmibeat

English summary
Inside ‘Kantara-1’: Pragati Shetty Opens Up About Designing Costumes for the Epic Film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X