twitter
    For Quick Alerts
    ALLOW NOTIFICATIONS  
    For Daily Alerts

    ಈ ಫೋಟೋದಲ್ಲಿ ರಿಷಬ್ ಶೆಟ್ಟಿ ಎಲ್ಲಿದ್ದಾರೆ ಗುರುತಿಸಲು ಸಾಧ್ಯವೇ? : ಇದು 18 ವರ್ಷದಷ್ಟು ಹಳೆ ಫೋಟೊ

    |

    ರಿಷಬ್ ಶೆಟ್ಟಿ ಈ ಮಟ್ಟಕ್ಕೆ ಬೆಳೆಯಲು ಸ್ಯಾಂಡಲ್‌ವುಡ್‌ನಲ್ಲಿ ಸವೆಸಿದ ಹಾದಿ ದೊಡ್ಡದಿದೆ. ಕನ್ನಡ ಸಿನಿಮಾಗಳಲ್ಲಿ ಸಹಾಯಕನಾಗಿ ಕೆಲಸ ಆರಂಭಿಸಿದವರು ಈಗ ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಾಯಕ ನಟನಾಗಿ ಬೆಳೆಯುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಯಾರೂ ಗಾಡ್‌ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆಯುವುದು ಅಂದರೆ, ಅದು ಎಲ್ಲಕ್ಕಿಂತ ದೊಡ್ಡ ಸಾಧನೆ. ವ್ಯಕ್ತಿ ಎಷ್ಟೇ ದೊಡ್ಡವನಾಗಿ ಬೆಳೆದರೂ, ಅವನು ಬೆಳೆದು ಬಂದ ಹಾದಿಯನ್ನು ಮಾತ್ರ ಮರೆಯುವುದಿಲ್ಲ ಎನ್ನುವುದಕ್ಕೆ ರಿಷಬ್ ಶೆಟ್ಟಿ ಶೇರ್ ಮಾಡಿದ ಈ ಫೋಟೊನೇ ಸಾಕ್ಷಿ.

    ರಿಷಬ್ ಶೆಟ್ಟಿ ಒಂದು ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅದು ಇತ್ತೀಚೆಗೆ ತೆಗೆದ ಫೋಟೊ ಅಲ್ಲವೇ ಅಲ್ಲ. ಬರೋಬ್ಬರಿ 18 ವರ್ಷಗಳ ಹಿಂದಿನ ಫೋಟೊ. ಆಗತಾನೇ ಸಿನಿಮಾ ಕೋರ್ಸ್ ಮುಗಿಸಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕಾಲ ಅದು. ಆದರೆ, ಆ ಫೋಟೊದಲ್ಲಿ ರಿಷಬ್ ಎಲ್ಲಿದ್ದಾರೆ ಎಂದು ಗುರುತಿಸುವುದೇ ಒಂದು ದೊಡ್ಡ ಸವಾಲು.

    ಪ್ರಶಾಂತ್ ಶೆಟ್ಟಿ ಆಗಿನ್ನೂ ರಿಷಬ್ ಆಗಿರಲಿಲ್ಲ

    ರಿಷಬ್ ಶೆಟ್ಟಿ ಮೊದಲ ಹೆಸರು ಪ್ರಶಾಂತ್ ಶೆಟ್ಟಿ. ಸಿನಿಮಾಗೆ ಬಂದ ಮೇಲೆ ತಮ್ಮ ಹೆಸರನ್ನು ಪ್ರಶಾಂತ್ ಶೆಟ್ಟಿ ಅಂತ ಇದ್ದಿದ್ದನ್ನು ರಿಷಬ್ ಶೆಟ್ಟಿ ಅಂತ ಬದಲಾಯಿಸಿಕೊಂಡಿದ್ದಾರೆ. 2004ರಲ್ಲಿ ರಿಷಬ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಿಂದ ಕೋರ್ಸ್ ಮುಗಿಸಿ ಚಿತ್ರರಂಗಕ್ಕೆ ಬಂದಿದ್ದರು. ಆ ವೇಳೆ ಅವರಿಗೆ ಎಎಂಆರ್ ರಮೇಶ್ ನಿರ್ದೇಶನದ 'ಸೈನೈಡ್' ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿದ್ದ ಸಹಾಯಕ ನಿರ್ದೇಶಕರ ಪೈಕಿ ಇವರೂ ಒಬ್ಬರಾಗಿದ್ದರು. ಆ ದಿನದ ಫೋಟೊವನ್ನೇ ರಿಷಬ್ ಶೇರ್ ಮಾಡಿಕೊಂಡಿದ್ದಾರೆ.

    ರಿಷಬ್ ಶೆಟ್ಟಿಯನ್ನು ಹುಡುಕಲು ಸಾಧ್ಯವೇ?

    ರಿಷಬ್ ಶೆಟ್ಟಿಯನ್ನು ಹುಡುಕಲು ಸಾಧ್ಯವೇ?

    ಈ ಫೋಟೊ 'ಸೈನೈಡ್' ಸಿನಿಮಾ ಶೂಟಿಂಗ್ ವೇಳೆ ತೆಗೆದ ಫೋಟೊ. ಈ ಫೋಟೊದಲ್ಲಿ ನಿರ್ದೇಶಕ ಎಎಂಆರ್ ರಮೇಶ್ ಬ್ಲ್ಯಾಕ್ ಶರ್ಟ್‌ ಹಾಕೊಂಡು ಮಿಲಿಟರಿ ಕ್ಯಾಪ್ ಧರಿಸಿಕೊಂಡು ಸಂಭಾಷಣೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಚಿತ್ರತಂಡ ಕೂಡ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ವೇಳೆ ಯಾರೋ ಫೋಟೊ ಕ್ಲಿಕ್ ಮಾಡಿದ್ದಾರೆ. ಇದರಲ್ಲಿ ರಿಷಬ್ ಶೆಟ್ಟಿ ಕೂಡ ಇದ್ದಾರೆ. ಆದರೆ, ಅವರನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಅಂದಹಾಗೇ, ಅಂದು ಪ್ರಶಾಂತ್ ಶೆಟ್ಟಿಯಾಗಿದ್ದ ರಿಷಬ್ ಶೆಟ್ಟಿ ಬ್ಲಾಕ್ ಶರ್ಟ್ ತೊಟ್ಟು. ಗ್ಯಾಪ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇವರೇ ರಿಷಬ್ ಶೆಟ್ಟಿ.

    ರಿಷಬ್ ಶೆಟ್ಟಿ ಚಿತ್ರರಂಗದ ಎಂಟ್ರಿ ಹೇಗೆ?

    ರಿಷಬ್ ಶೆಟ್ಟಿ ಚಿತ್ರರಂಗದ ಎಂಟ್ರಿ ಹೇಗೆ?

    ರಿಷಬ್ ಶೆಟ್ಟಿ ಸಿನಿಮಾರಂಗಕ್ಕೆ ಬಂದಿದ್ದು ಆಕಸ್ಮಿಕ. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅವರು ಚಿಕ್ಕದಾಗಿ ವಾಟರ್ ಕ್ಯಾನ್ ಸಪ್ಲೈ ಮಾಡುವ ವ್ಯಾಪಾರ ಹೊಂದಿದ್ದರು. ಕ್ಲಬ್ ಒಂದಕ್ಕೆ ನೀರಿನ ಕ್ಯಾನ್ ಸಪ್ಲೈ ಮಾಡುವ ಕ್ಲಬ್‌ಗೆ ನಿರ್ಮಾಪಕ ಎಂ ಡಿ ಪ್ರಕಾಶ್ ಕೂಡ ಬರುತ್ತಿದ್ದರು. ಆ ವೇಳೆ ಇಬ್ಬರ ಪರಿಚಯವಾಗಿ ಅವರು ಸಿನಿಮಾಗಳಿಗೆ ರೆಫರೆನ್ಸ್ ನೀಡಿದ್ದರು. ಅಲ್ಲಿಂದ ರಿಷಬ್ ಶೆಟ್ಟಿ ಹಾದಿ ಬದಲಾಗಿತ್ತು. ಪ್ರಶಾಂತ್ ಶೆಟ್ಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದರು.

    ಸೈನೈಡ್' ಸಿನಿಮಾದಲ್ಲಿ 27 ದಿನ ಕೆಲಸ

    ಸೈನೈಡ್' ಸಿನಿಮಾದಲ್ಲಿ 27 ದಿನ ಕೆಲಸ

    'ಸೈನೈಡ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎಲ್ಲಾ ಸಹಾಯಕ ನಿರ್ದೇಶಕರಿಗೆ ಸಹಾಯಕನಾಗಿ ಕೆಲಸ ಆರಂಭಿಸಿದ್ದರು. ಸಿನಿಮಾದ ಕಂಟಿನ್ಯೂಟಿ ನೋಡಿಕೊಳ್ಳುತ್ತಿದ್ದ ಸಹಾಯಕ ನಿರ್ದೇಶಕನನ್ನು ತೆಗೆದು ಹಾಕಲಾಗಿತ್ತು. ಆ ವೇಳೆ ಸಹಾಯಕ ನಿರ್ದೇಶಕರೊಬ್ಬರು ಆ ಕೆಲಸವನ್ನು ರಿಷಬ್‌ಗೆ ನೀಡಿದ್ದರು. ಸುಮಾರು 27 ದಿನಗಳ ಕಾಲ 'ಸೈನೈಡ್‌'ಗೆ ಕೆಲಸ ಮಾಡಿದ್ದರು. ಈ ಸಿನಿಮಾ ರಿಷಬ್ ಶೆಟ್ಟಿ ಬದುಕನ್ನೇ ಬದಲಿಸಿತ್ತು. ನಟನಿಂದ ನಿರ್ಮಾಪಕನಾಗುವವರೆಗೂ ಬೆಳೆಸಿ ನಿಲ್ಲಿಸಿದೆ.

    English summary
    Rishab Shetty shared old photo while working as an assistant to Kannada movie Cyanide. Rishab photo is 18 year old pic, after he finished his education he joined film team.
    Saturday, January 29, 2022, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X