ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ

ರಕ್ಷಿತ್ ಶೆಟ್ಟಿ, ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ರಿಕ್ಕಿ ಸಿನಿಮಾ ಬಿಡುಗಡೆಯಾಗಿ ಐದು ವರ್ಷ ಆಗಿದೆ. ಈ ಚಿತ್ರಕ್ಕೆ ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಇದು ರಿಷಭ್ ನಿರ್ದೇಶನದ ಮೊದಲ ಸಿನಿಮಾ. ಚೊಚ್ಚಲ ಕೂಸು ಐದು ವರ್ಷ ಪೂರೈಸಿದ ಹಿನ್ನೆಲೆ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿರುವ ರಿಷಭ್ ಶೆಟ್ಟಿ ಮೊದಲ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ''ಬಹುವರ್ಷದ ಕನಸು, ಚೊಚ್ಚಲ ಕೂಸು, ರಿಕ್ಕಿ ಬಿಡುಗಡೆಯಾಗಿ ಇಂದಿಗೆ 5 ವರ್ಷ. ಮೊದಲ ಸಿನಿಮಾ ಕಲಿಸಿದ ಪಾಠ, ಕೊಟ್ಟ ಅನುಭವ ಅಪಾರ. ರಕ್ಷಿತ್, ಹರಿಪ್ರಿಯ, ಪ್ರಮೋದ್, ಅಚ್ಯುತಣ್ಣ ರಂತಹ ಅದ್ಭುತ ನಟರ ಜೊತೆ ಕೆಲಸ ಮಾಡಿದ್ದು ಅದೃಷ್ಟ. ಅವರೆಲ್ಲ ಇಂದಿಗೂ ಜೀವದ ಗೆಳೆಯರು. ನಿರ್ಮಾಪಕರಾದ ಎಸ್‌ವಿ ಬಾಬು ಅವರಿಗೆ ಸದಾ ಋಣಿ. ಎಲ್ಲಕ್ಕಿಂತ ಮಿಗಿಲಾಗಿ ಚಿತ್ರವನ್ನು ಮೆಚ್ಚಿ, ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದಗಳು'' ಎಂದು ರಿಷಭ್ ಟ್ವೀಟ್ ಮಾಡಿದ್ದಾರೆ.

ರಿಕ್ಕಿ ಸಿನಿಮಾ ಐದು ವರ್ಷ ಪೂರೈಸಿದ ಹಿನ್ನೆಲೆ ನಟಿ ಹರಿಪ್ರಿಯ ಸಹ ಸಂತಸ ಹಂಚಿಕೊಂಡಿದ್ದಾರೆ.

Rishab Shetty shares a heartfelt note for Rakshit Shettys Ricky Movie Completes 5 Years

ಅಂದ್ಹಾಗೆ, ರಿಕ್ಕಿ ಸಿನಿಮಾ 2016, ಜನವರಿ 22 ರಂದು ಬಿಡುಗಡೆಯಾಗಿತ್ತು. ಎಸ್‌ವಿ ಬಾಬು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಹರಿಪ್ರಿಉ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ರವಿ ಕಾಳೆ, ವೀಣಾ ಸುಂದರ್, ಸಾಧು ಕೋಕಿಲಾ ಸೇರಿದಂತೆ ಹಲವು ನಟಿಸಿದ್ದರು.

ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಚಿತ್ರಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದರು. ಕಥೆ-ಚಿತ್ರಕಥೆ ಬರೆದು ರಿಷಭ್ ಶೆಟ್ಟಿ ನಿರ್ದೇಶಿಸಿದ್ದರು. ಸಿನಿಮಾ ಸಕ್ಸಸ್ ಸಹ ಕಂಡಿತ್ತು. ಈ ಚಿತ್ರದ ಬಳಿಕವೇ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ನಿರ್ದೇಶಿಸಿದ್ದರು ರಿಷಭ್ ಶೆಟ್ಟಿ.

More from Filmibeat

English summary
Kannada actor-Director Rishab Shetty shares a heartfelt note for Rakshit Shetty's Ricky Movie Completes 5 Years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X