ರಣ್ವಿತ್ ಶೆಟ್ಟಿ ಈಗ ಗುಂಡಣ್ಣ; ರಿಷಬ್ ಶೆಟ್ಟಿ ಪುತ್ರನ ಹೊಸ ಲುಕ್ ಹೇಗಿದೆ ನೋಡಿ?

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ದಂಪತಿಯ ಪ್ರೀತಿಯ ಪುತ್ರನ ಕೇಶ ಮುಂಡನ ಮಾಡಿಸಿದ್ದಾರೆ. ಮಗನ ಮುಡಿಕೊಟ್ಟ ಬಳಿಕ ರಿಷಬ್ ಶೆಟ್ಟಿ ಕ್ಯೂಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪನ ಸೆಲ್ಫಿ ಕ್ಯಾಮರಾಗೆ ಪೋಸ್ ನೀಡಿರುವ ಪುಟಾಣಿ ರಣ್ವಿತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಪುತ್ರನ ಕೇಶಮುಂಡನವನ್ನು ಪವಿತ್ರ ಕುಕ್ಕೆ ಕ್ಷೇತ್ರದಲ್ಲಿ ಮಾಡಿಸಿದ್ದಾರೆ. ರಿಷಬ್ ಶೆಟ್ಟಿ ಪುತ್ರನ ಜೊತೆಗಿರುವ ಫೋಟೋ ಶೇರ್ ಮಾಡಿ, 'ನನ್ನ ಗುಂಡಣ್ಣನ ಜೊತೆಗೆ. ಕುಕ್ಕೆಯಲ್ಲಿ ಕೇಶ ಮುಂಡನ ಮಾಡಿಸಿದ ಕ್ಷಣ' ಎಂದು ಬರೆದುಕೊಂಡಿದ್ದಾರೆ. ಮುಂದೆ ಓದಿ..

ರಣ್ವಿತ್ ಶೆಟ್ಟಿಗೆ 2 ವರ್ಷ

ರಣ್ವಿತ್ ಶೆಟ್ಟಿಗೆ 2 ವರ್ಷ

ರಿಷಬ್ ಶೆಟ್ಟಿ ಪುತ್ರ ರಣ್ವಿತ್ ಶೆಟ್ಟಿಗೆ ಎರಡು ವರ್ಷ. ಏಪ್ರಿಲ್ 7ಕ್ಕೆ ಎರಡು ವರ್ಷ ತುಂಬಿದ್ದು, ಪುತ್ರನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಟ್ಟುಹಬ್ಬದ ದಿನ ಮಗನ ಮುದ್ದಾದ ವಿಡಿಯೋವನ್ನು ರಿಷಬ್ ಹಂಚಿಕೊಂಡಿದ್ದರು. ಹೀರೋ ಆಗಿ ಎಂಟ್ರಿ ಕೊಟ್ಟಿದ್ದ ರಣ್ವಿತ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಗನ ಬಗ್ಗೆ ರಿಷಬ್ ಮಾತು

ಮಗನ ಬಗ್ಗೆ ರಿಷಬ್ ಮಾತು

'ಮಕ್ಕಳು ಗೊಂಬೆಗೆ ಬಟ್ಟೆ ತೊಡಿಸಿ ಆಟ ಆಡಿದ್ರೆ, ಗೊಂಬೆಯಂತೆ ಮುದ್ದಾದ ಮಗುವಿಗೆ ಚಂದದ ಬಟ್ಟೆ ತೊಡಿಸಿ ಆಡಿ ಆನಂದಿಸೋದು ʼದೊಡ್ಡವರ ಮಕ್ಕಳಾಟʼ. ಇವತ್ತು ನಮ್ಮ ಬಂಗಾರಿಗೆ ಎರಡು ತುಂಬಿದೆ. ಈ ಸಂಭ್ರಮದಲ್ಲಿ ನಾನು ಪ್ರಗತಿ ಆಡಿದ ಮಕ್ಕಳಾಟವನ್ನ ನಿಮ್ಮೊಡನೆ ಹಂಚಿಕೊಳ್ತಿದ್ದೇವೆ. ನಮ್ಮನೆಯ ಹೀರೋಗೆ ನಿಮ್ಮ ಹಾರೈಕೆಗಳಿರಲಿ' ಎಂದು ಬರೆದುಕೊಂಡಿದ್ದರು. ಮಗನ ಲುಕ್, ಸ್ಟೈಲ್ ನೋಡಿ ಎಲ್ಲರೂ ಅಪ್ಪನಂತೆ ಮಗ ಕೂಡ ಹೀರೋ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ.

2017ರಲ್ಲಿ ಪ್ರಗತಿ ಜೊತೆ ಮದುವೆ

2017ರಲ್ಲಿ ಪ್ರಗತಿ ಜೊತೆ ಮದುವೆ

ಅಂದಹಾಗೆ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಸಕ್ಸಸ್ ಆದ ಬಳಿಕ ಪ್ರಗತಿ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಗತಿ ಶೆಟ್ಟಿ ಮತ್ತು ರಿಷಬ್ ಅವರದ್ದು ಅರೆಂಜ್ ಮ್ಯಾರೆಜ್. 2017 ಫೆಬ್ರವರಿ 9ರಂದು ರಿಷಬ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ರಿಷಬ್ ಹುಟ್ಟುರಾದ ಕುಂದಾಪುರದಲ್ಲಿ ನಡದೆ ಸರಳ ಮದುವೆ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಕೆಲವು ಗಣ್ಯರು ಭಾಗಿಯಾಗಿದ್ದರು.

Recommended Video

ಕಿರಿಕ್ ಪಾರ್ಟಿ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ | Filmibeat Kannada
ರಿಷಬ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಿಷಬ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಿಷಬ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಹೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಹರಿಕಥೆ ಅಲ್ಲ ಗಿರಿಕಥೆ, ಅಂಟಗೋನಿ ಶೆಟ್ಟಿ, ಬೆಲ್ ಬಾಟಂ-2, ಗರುಡ ಗಮನ ವೃಷಭ ವಾಹನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಜೊತೆಗೆ ರುದ್ರಪ್ರಯಾಗ ಸಿನಿಮಾದ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ.

More from Filmibeat

English summary
Director, Actor Rishab Shetty shares pictures of mundan ceremony of his son Ranvit Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X