'ಕಾಂತಾರ' ಎಫೆಕ್ಟ್‌ ಮಲಯಾಳಂ ಚಿತ್ರರಂಗದೆಡೆಗೆ ರಿಷಬ್! ಸ್ಟಾರ್ ನಟನೊಟ್ಟಿಗೆ ಜುಗಲ್‌ ಬಂಧಿ

By ಫಿಲ್ಮಿಬೀಟ್ ಡೆಸ್ಕ್

'ಕಾಂತಾರ' ಸಿನಿಮಾ ಭರ್ಜರಿ ಹಿಟ್ ಆದ ಬೆನ್ನಲ್ಲೆ ಸಿನಿಮಾದ ನಟ, ನಟಿಯರಿಗೆ ದೊಡ್ಡ ದೊಡ್ಡ ಆಫರ್‌ಗಳು ಬರಲು ಪ್ರಾರಂಭವಾಗಿವೆ.

ಸಿನಿಮಾದ ನಾಯಕಿ ಸಪ್ತಮಿ ಗೌಡ ಈಗಾಗಲೇ ಬಾಲಿವುಡ್ ಸಿನಿಮಾ ಅವಕಾಶ ಗಿಟ್ಟಿಸಿಕೊಂಡು ನಟಿಸಲು ಸಹ ಆರಂಭಿಸಿದ್ದಾರೆ. ಮತ್ತೊಂದೆಡೆ ಸಿನಿಮಾದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಸಹ ಹಲವು ಚಿತ್ರರಂಗದಿಂದ ಅವಕಾಶಗಳು ಅರಸಿ ಬರುತ್ತಿವೆ.

ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಬಾಲಿವುಡ್ ಸೇರಿದಂತೆ ಬೇರೆ ಚಿತ್ರರಂಗ ಹಾಗೂ ಸ್ಯಾಂಡಲ್‌ವುಡ್‌ನ ಕೆಲವು ನಿರ್ಮಾಪಕರಿಂದಲೂ ರಿಷಬ್ ಶೆಟ್ಟಿಗೆ ಅವಕಾಶಗಳು ಬರುತ್ತಿವೆಯಂತೆ ಆದರೆ ರಿಷಬ್ ಅಳೆದು ತೂಗಿ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಮೋಹನ್‌ಲಾಲ್ ಜೊತೆ ರಿಷಬ್ ಶೆಟ್ಟಿ!

ಮೋಹನ್‌ಲಾಲ್ ಜೊತೆ ರಿಷಬ್ ಶೆಟ್ಟಿ!

ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ರಿಷಬ್ ಶೆಟ್ಟಿ, ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದೂ ಆ ಚಿತ್ರರಂಗದ ಸ್ಟಾರ್ ನಟರೊಬ್ಬರೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಮಲಯಾಳಂ ಸ್ಟಾರ್ ನಟ ಮೊಹನ್‌ಲಾಲ್ 'ಮಲೈಕೊಟ್ಟೈ ವಾಲಿಬನ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಪ್ರತಿಭಾವಂತ ನಿರ್ದೇಶಕ ಲಿಜು ಜೋಸೆಫ್ ಆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಭಾರಿ ಬಜೆಟ್ ಸಿನಿಮಾ 'ಮಲೈಕೊಟ್ಟೈ ವಾಲಿಬನ್'

ಭಾರಿ ಬಜೆಟ್ ಸಿನಿಮಾ 'ಮಲೈಕೊಟ್ಟೈ ವಾಲಿಬನ್'

ಲಿಜು ಜೋಸೆಫ್ ನಿರ್ದೇಶಿಸುತ್ತಿರುವ 'ಮಲೈಕೊಟ್ಟೈ ವಾಲಿಬನ್' ಸಿನಿಮಾದಲ್ಲಿ ಭಾರತದ ಹಲವು ಚಿತ್ರರಂಗದ ಖ್ಯಾತನಾಮ ನಟರು ನಟಿಸಲಿದ್ದಾರೆ. ಸಿನಿಮಾದಲ್ಲಿ ತಮಿಳಿನ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ನಟಿಸಲಿದ್ದಾರೆ. ಜೊತೆಗೆ ತಮಿಳಿನ ಜೀವಾ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮರಾಠಿ ಚಿತ್ರರಂಗದ ಜನಪ್ರಿಯ ನಟಿ ಸೊನಾಲಿ ಕುಲಕರ್ನಿ ಈ ಸಿನಿಮಾದ ನಾಯಕಿಯಾಗಿ ನಟಿಸಲಿದ್ದಾರೆ. ಬೆಂಗಾಲಿ ನಟಿ ಕತಾ ನಂದಿ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ.

ದಾನಿಶ್ ಸೇಠ್ ಸಹ ನಟನೆ?

ದಾನಿಶ್ ಸೇಠ್ ಸಹ ನಟನೆ?

'ಮಲೈಕೊಟ್ಟೈ ವಾಲಿಬನ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮಾತ್ರವೇ ಅಲ್ಲದೆ ಕನ್ನಡದ ಮತ್ತೊಂದು ಪ್ರತಿಭೆ ದಾನಿಶ್ ಸೇಠ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಭಾರಿ ಬಜೆಟ್‌ನ ಈ ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದ ಸ್ಕೇಲ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಸಿನಿಮಾ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುವುದು ಖಾತ್ರಿಯಾಗಿದೆ.

'ಕಾಂತಾರ 2' ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ

'ಕಾಂತಾರ 2' ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ

ಇನ್ನು ರಿಷಬ್ ಶೆಟ್ಟಿ ಮುಂದೆ ಹಲವು ಆಯ್ಕೆಗಳಿವೆ. ಆದರೆ ಎಲ್ಲ ಆಯ್ಕೆಗಳನ್ನು ಬದಿಗೆ ತಳ್ಳಿ 'ಕಾಂತಾರ 2' ಸಿನಿಮಾದ ಮೇಲೆ ರಿಷಬ್ ಗಮನ ವಹಿಸಿದ್ದಾರೆ. 'ಕಾಂತಾರ' ಸಿನಿಮಾ ದೊಡ್ಡ ಹಿಟ್ ಆಗಿರುವ 'ಕಾಂತಾರ 2' ಸಿನಿಮಾವನ್ನು ಸಹ ಅದೇ ಮಾದರಿಯಲ್ಲಿ ನಿರ್ಮಿಸಲು ಸಿದ್ಧತೆ ಆರಂಭಿಸಿದ್ದಾರೆ. ಸಿನಿಮಾದ ಕತೆ ಬರವಣಿಗೆ ಚಾಲ್ತಿಯಲ್ಲಿದ್ದು, ಮುಂದಿನ ಮಳೆಗಾಲದಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಕಾಂತಾರ 2' ಸಿನಿಮಾವು 'ಕಾಂತಾರ' ಸಿನಿಮಾದಲ್ಲಿ ನಡೆದ ಕತೆಗಿಂತಲೂ ಹಿಂದೆ ನಡೆದ ಕತೆಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

More from Filmibeat

English summary
Actor, Director Rishab Shetty sharing screen with star actor Mohanlal in his next movie Malaikottai Vaaliban.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X