ವೈರಲ್ ಆಯ್ತು ರಿಷಬ್ ಪುತ್ರ ರಣ್ವಿತ್ ಶೆಟ್ಟಿಯ 'ಹ್ಯಾಂಡ್ಸ್ ಅಪ್' ಡ್ಯಾನ್ಸ್.!
ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅವನೇ ಶ್ರೀಮನ್ನಾರಾಯಣ' ರಾಜ್ಯಾದ್ಯಂತ ಬಿಗ್ ಓಪನ್ನಿಂಗ್ ಪಡೆದುಕೊಂಡಿದೆ. ಎಲ್ಲೆಡೆ 'ಅವನೇ ಶ್ರೀಮನ್ನಾರಾಯಣ' ಉತ್ತಮ ಪ್ರದರ್ಶನ ಕಾಣುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಂತೂ 'ಅವನೇ ಶ್ರೀಮನ್ನಾರಾಯಣ' ಚಿತ್ರದ 'ಹ್ಯಾಂಡ್ಸ್ ಅಪ್' ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿದೆ. 'ಹ್ಯಾಂಡ್ಸ್ ಅಪ್ ಸಾಂಗ್' ರಿಲೀಸ್ ಆದಾಗ, ಪ್ರಚಾರದ ಸಲುವಾಗಿ ರಕ್ಷಿತ್ ಶೆಟ್ಟಿ 'ಹ್ಯಾಂಡ್ಸ್ ಅಪ್ ಚಾಲೆಂಜ್' ಹಾಕಿದ್ದು ನಿಮಗೆ ನೆನಪಿರಬಹುದು.
ಇದೀಗ ಆ ಚಾಲೆಂಜ್ ನ ಸ್ವೀಕರಿಸಿ 'ಹ್ಯಾಂಡ್ಸ್ ಅಪ್' ಅಂತ ಹೆಜ್ಜೆ ಹಾಕಿರುವುದು ಬೇರೆ ಯಾರೂ ಅಲ್ಲ. ರಿಷಬ್ ಶೆಟ್ಟಿ ಪುತ್ರ ರಣ್ವಿತ್ ಶೆಟ್ಟಿ.! ಒಂಬತ್ತು ತಿಂಗಳ ಮುದ್ದು ಕಂದಮ್ಮ ರಣ್ವಿತ್ ಶೆಟ್ಟಿ ಕೈಯಲ್ಲಿ 'ಹ್ಯಾಂಡ್ಸ್ ಅಪ್' ಅಂತ ಆಕ್ಷನ್ ಮಾಡಿಸಿ, ರಕ್ಷಿತ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ ರಿಷಬ್ ಶೆಟ್ಟಿ.

ರಣ್ವಿತ್ ಶೆಟ್ಟಿಯ ಹ್ಯಾಂಡ್ಸ್ ಅಪ್ ಡ್ಯಾನ್ಸ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಒಂದು ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications











