For Quick Alerts
  ALLOW NOTIFICATIONS  
  For Daily Alerts

  'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ

  |
  AvaneSrimanNarayana : Rishab Shetty says its his right to be in Rakshit movies | FILMIBEAT KANNADA

  ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಟ್ರೈಲರ್ ನಲ್ಲಿ ರಿಷಬ್ ಪಾತ್ರ ಬಯಲಾಗಿದೆ. ರಕ್ಷಿತ್ ಮತ್ತು ರಿಷಬ್ ಇಬ್ಬರು ಉತ್ತಮ ಸ್ನೇಹಿತರು. ಒಟ್ಟಿಗೆ ಚಿತ್ರರಂಗಕ್ಕೆ ಬಂದವರು.

  ಜೊತೆಜೊತೆಯಲ್ಲಿ ಸಿನಿಮಾ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ ಬುಹುನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ರಿಷಬ್ "ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ" ಎಂದು ಹೇಳಿದ್ದಾರೆ.

  ಬಾಲಿವುಡ್ ನಲ್ಲಿ ಈ ರೀತಿ ಕಿತಾಪತಿಗಳು ಬಹಳ ಆಗ್ತಿವೆ- ರಿಷಭ್ ಬೇಸರಬಾಲಿವುಡ್ ನಲ್ಲಿ ಈ ರೀತಿ ಕಿತಾಪತಿಗಳು ಬಹಳ ಆಗ್ತಿವೆ- ರಿಷಭ್ ಬೇಸರ

  ಅಂದ್ಹಾಗೆ ರಿಷಬ್ ಇಲ್ಲಿ ಕೌವ್ ಬಾಯ್ ಕೃಷ್ಣ ಪಾತ್ರದಲ್ಲಿ ರಿಷಬ್ ಮಿಂಚಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರ ಪ್ಯಾನ್ ಇಂಡಿಯ ಸಿನಿಮಾವಲ್ಲ ಇದು ಯೂನಿವರ್ಸಲ್ ಸಿನಿಮಾ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಅಭಿನಯಸಬೇಕು ಎಂದು ರಿಷಬ್ ರಕ್ಷಿತ್ ಹಿಂದೆ ಬಿದ್ದಿದಂತೆ.

  ಮಚ್ಚಾ ನನಗೂ ಒಂದು ಪಾತ್ರ ಕೊಡು ಅಂತ ಹಿಂದೆ ಬಿದ್ದದ್ದೆ ಎಂದು ರಿಷಬ್ ಹೇಳಿದ್ದಾರೆ. ಇನ್ನು ರಕ್ಷಿತ್ ಮುಂದಿನ ಸಿನಿಮಾ 'ಪುಣ್ಯಕೋಟಿ'ಯಲ್ಲೂ ಒಂದು ಪಾತ್ರ ಕೊಡುವಂತೆ ಕೇಳಿಕೊಂಡಿದ್ದಾರೆ. ಯಾವುದೆ ಸಮಯದಲ್ಲಾದರು ಬಂದು ಚಿತ್ರೀಕರಣ ಮಾಡುತ್ತೇನೆ ಎಂದು ಹೇಳಿ ತಮಾಷೆ ಮಾಡಿದರು.

  English summary
  Kannada director come actor Rishab Shetty speak about Rakshith starrer Avane Srimannarayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X