For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಈ ರೀತಿ ಕಿತಾಪತಿಗಳು ಬಹಳ ಆಗ್ತಿವೆ- ರಿಷಭ್ ಬೇಸರ

  |

  ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿದ 'ಬೆಲ್ ಬಾಟಂ' ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ಇದೇ ಟೈಟಲ್ ನ ಮತ್ತೊಂದು ಸಿನಿಮಾ ಬಾಲಿವುಡ್ ನಲ್ಲಿ ಬರುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.

  ಸಿನಿಮಾದ ರಿಮೇಕ್ ರೈಟ್ಸ್ ಅನ್ನು ಸಾಹಸ ನಿರ್ದೇಶಕ ರವಿವರ್ಮ ಖರೀದಿ ಮಾಡಿದ್ದಾರೆ. ಆದರೆ, ಹಿಂದಿಯ ನಿರ್ಮಾಣ ಸಂಸ್ಥೆಯೊಂದು ಅದೇ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದೆ ಎನ್ನುವುದು ಅವರ ಆರೋಪವಾಗಿದೆ.

  'ಬೆಲ್ ಬಾಟಂ' ಚಿತ್ರತಂಡದ ವಿರುದ್ದ ಮುನಿಸು: ಕೇಸ್ ದಾಖಲಿಸಿದ ರವಿ ವರ್ಮ.!'ಬೆಲ್ ಬಾಟಂ' ಚಿತ್ರತಂಡದ ವಿರುದ್ದ ಮುನಿಸು: ಕೇಸ್ ದಾಖಲಿಸಿದ ರವಿ ವರ್ಮ.!

  ಈ ವಿವಾದದ ಬಗ್ಗೆ ಸದ್ಯ ರಿ‍ಷಭ್ ಶೆಟ್ಟಿ ಮಾತನಾಡಿದ್ದಾರೆ. ''ಯಾರು ಬೇಕಾದರೂ 80ರ ದಶಕದ ಕಥೆ ಇಟ್ಟುಕೊಂಡು ಸಿನಿಮಾ ಮಾಡಬಹುದು, ಡಿಟೆಕ್ಟಿವ್ ಸಿನಿಮಾ ಕೂಡ ಮಾಡಬಹುದು. ಆದರೆ, ನಮ್ಮ ಸ್ಟೋರಿ ಲೈನ್ ಇದ್ದರೆ, ರವಿಮರ್ಮ ಅವರಿಗೆ ಅನ್ಯಾಯ ಆಗುತ್ತದೆ. ಕಥೆ ಬೇರೆ ಇದೆ ಎಂದು ಅವರು ಸಾಬೀತು ಮಾಡಬೇಕಾಗಿದೆ.'' ಎಂದರು.

  ''ಈ ಹಿಂದೆ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಹಿಂದಿಗೆ ರಿಮೇಕ್ ಆಗುವಾಗ ಅದೇ ಕಾನ್ಸೆಪ್ಟ್ ಸಿನಿಮಾ 'ಬಾಲಾ' ಬಿಡುಗಡೆ ಆಯ್ತು. ಬಾಲಿವುಡ್ ನಲ್ಲಿ ಈ ರೀತಿಯ ಕಿತಾಪತಿಗಳು ನಡೆಯುತ್ತಲೇ ಇರುತ್ತದೆ'' ಎಂದು ರಿ‍ಷಭ್ ಬೇಸರ ಹಂಚಿಕೊಂಡಿದ್ದಾರೆ.

  ಬಾಲಿವುಡ್ ಗೆ ಕಾಲಿಟ್ಟ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿಬಾಲಿವುಡ್ ಗೆ ಕಾಲಿಟ್ಟ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ

  ಹಿಂದಿಯ ಫಿಲ್ಮ್ ಚೆಂಬರ್, ರೈಟರ್ ಅಸೋಸಿಯೇಶನ್ ನಲ್ಲಿ ರವಿಮರ್ಮ ದೂರು ದಾಖಲು ಮಾಡಿದ್ದು, ಇನ್ನ 15 ದಿನಗಳಲ್ಲಿ ಈ ವಿವಾದ ಇತ್ಯಾರ್ಥ ಆಗಬಹುದು.

  English summary
  Rishab Shetty spoke about 'Bell Bottom' remake controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X