'ಸೀರಿಯಸ್ ವಿಷಯವನ್ನು ಸಿಲ್ಲಿ ಮಾಡಿದ್ದಾರೆ' ಎಂದವರಿಗೆ ರಿಷಬ್ ಉತ್ತರ
ಸಿನಿಮಾ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ. ಎಷ್ಟೇ ಯೋಚನೆ ಮಾಡಿ ಸಿನಿಮಾ ಮಾಡಿದರು ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಕೂಡ ಅದಕ್ಕೆ ಹೊರತಾಗಿಲ್ಲ.
ಈ ಸಿನಿಮಾ ಈಗ ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಹುತೇಕ ಮಂದಿ ಸಿನಿಮಾವನ್ನು ಹೊಗಳುತ್ತಿದ್ದಾರೆ. 150 ಚಿತ್ರಮಂದಿರಗಳಲ್ಲಿ ಸದ್ಯ ಸಿನಿಮಾ ಓಡುತ್ತಿದೆ. ಊರ್ವಶಿ ಚಿತ್ರಮಂದಿರದಂತಹ ಪರಭಾಷೆಯ ಸೆಂಟರ್ ಗಳಲ್ಲಿಯೂ ಈ ಸಿನಿಮಾಗೆ ನಾಲ್ಕು ಶೋ ನೀಡಿದ್ದಾರೆ.
ಈ ರೀತಿಯ ಬೆಂಬಲಗಳ ಜೊತೆಗೆ ಇನ್ನೊಂದು ಕಡೆ ಕೆಲವರು ಚಿತ್ರದ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಕಾಸರಗೋಡು ಎನ್ನುವುದು ಗಂಬೀರ ವಿಚಾರ, ಸಿನಿಮಾದಲ್ಲಿ ಸೀರಿಯಸ್ ವಿಷಯವನ್ನು ಸಿಲ್ಲಿಯಾಗಿ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಂತಹವರಿಗೆ ನಿರ್ದೇಶಕ ರಿಷಬ್ ಶೆಟ್ಟಿ ಉತ್ತರ ನೀಡಿದ್ದಾರೆ.
ಇತ್ತೀಚಿಗಷ್ಟೆ ಮೈಸೂರಿನಲ್ಲಿ ನಡೆದ ಸಿನಿಮಾದ ಪ್ರೆಸ್ ಮಿಟ್ ನಲ್ಲಿ ಈ ಬಗ್ಗೆ ರಿಷಬ್ ಶೆಟ್ಟಿ ನೇರವಾಗಿ ಮಾತನಾಡಿದ್ದಾರೆ. ಮುಂದೆ ಓದಿ...

ಮೈಸೂರಿನಲ್ಲಿ ಮೊದಲ ಸಕ್ಸಸ್ ಮೀಟ್
''ಮೂರನೇ ವಾರಕ್ಕೆ ಸಿನಿಮಾ ಕಾಲಿಟ್ಟಿದೆ. ಮೊದಲ ಸಕ್ಸಸ್ ಮೀಟ್ ಅನ್ನು ಮೈಸೂರಿನಿಂದ ಶುರು ಮಾಡಿದ್ದೇವೆ. ಸಿನಿಮಾಗೆ ಅದ್ಬುತ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ 18 ರಿಂದ 19 ಶೋಗಳನ್ನು ನೀಡಿದ್ದಾರೆ. ಗಾಯತ್ರಿ, ಸರಸ್ವತಿ ರೀತಿಯ ಸಿಂಗಲ್ ಸ್ಕ್ರೀನ್ ಗಳಲ್ಲಿಯೂ ಸಿನಿಮಾ ಚೆನ್ನಾಗಿ ಓಡುತ್ತಿದೆ.'' - ರಿಷಬ್ ಶೆಟ್ಟಿ, ನಿರ್ದೇಶಕ

ಮಾತೃ ಭಾಷೆ ಉಳಿಯಬೇಕು
''ಈ ರೀತಿಯ ಒಂದು ಸಿನಿಮಾಗೆ ಇಂತಹ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಖುಷಿ ನೀಡಿದೆ. ನಮ್ಮ ಮಾತೃ ಭಾಷೆ ಉಳಿಯಬೇಕು, ಕನ್ನಡ ಶಾಲೆಗಳನ್ನು ಯಾವುದೇ ಕಾರಣ ಕೊಟ್ಟು ಮುಚ್ಚಬಾರದು ಹಾಗೂ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಆಗಬೇಕು ಎನ್ನುವ ಉದ್ದೇಶದಿಂದ ಸಿನಿಮಾ ಶುರು ಮಾಡಿದೆ.'' - ರಿಷಬ್ ಶೆಟ್ಟಿ, ನಿರ್ದೇಶಕ

ಕನ್ನಡಿಗರಿಗೆ ಕಾಸರಗೋಡು ಭಾವನಾತ್ಮಕ ಸಂಬಂಧ
''ಕನ್ನಡ ಶಾಲೆ ಮುಚ್ಚುವುದು ತುಂಬ ಸೀರಿಯಸ್ ವಿಷಯ. ಗಡಿ ನಾಡು ಎನ್ನುವುದು ಸೂಕ್ಷ್ಮ ವಿಚಾರ ತಿಳಿಸಿದೆ. ಈ ಬಗ್ಗೆ ಪೇಸ್ ಬುಕ್ ನಲ್ಲಿ ಬಂದಿರುವ ಎಲ್ಲ ಕೆಮೆಂಟ್ಸ್ ಗಳನ್ನು ನೋಡಿದ್ದೇನೆ. ಕನ್ನಡಿಗರಿಗೆ ಕಾಸರಗೋಡು ಭಾವನಾತ್ಮಕ ಸಂಬಂಧ ಎಂದು ಈಗ ಹೇಳುತ್ತಾರೆ. ಆದರೆ, ಇಷ್ಟು ದಿನ ಯಾರು ಈ ಬಗ್ಗೆ ಮಾತನಾಡಿದ್ರು?'' - ರಿಷಬ್ ಶೆಟ್ಟಿ, ನಿರ್ದೇಶಕ

ಇಷ್ಟು ದಿನ ಬರೆಯದವರು ಈಗ ಮಾತನಾಡುತ್ತಿದ್ದಾರೆ
''ಇಷ್ಟು ದಿನ ಯಾರು ಫೇಸ್ ಬುಕ್ ನಲ್ಲಿ ಕಾಸರಗೋಡಿನ ಬಗ್ಗೆ ಬರೆಯದವರು ಈಗ ಬರೆಯುತ್ತಿದ್ದಾರೆ. ನನ್ನ ಉದ್ದೇಶ ಇದ್ದಿದ್ದು ಕನ್ನಡ ಶಾಲೆ ಮುಚ್ಚಬಾರದು ಹಾಗೂ ಮಕ್ಕಳಿಗೆ ಕನ್ನಡದಲ್ಲಿಯೇ ಶಿಕ್ಷಣ ಸಿಗಬೇಕು ಎಂಬುದು. ಸೋ, ಅದನ್ನು ಜನರಿಗೆ ಹೇಳಲು ಸಿನಿಮಾ ದೊಡ್ಡ ಶಕ್ತಿ. ನನಗೆ ಕಾಸರಗೋಡಿನ ವಿಷಯವನ್ನು ರೀಚ್ ಮಾಡಬೇಕಿತ್ತು. - ರಿಷಬ್ ಶೆಟ್ಟಿ, ನಿರ್ದೇಶಕ

ನಿಂದಕರು ಇರಬೇಕು
''ನಾಲ್ಕು ಜನ ಕಮೆಂಟ್ ಮಾಡುವವರು ಇರಬೇಕು. ಅವರು ಇಂಟರ್ ನ್ಯಾಷಿನಲ್ ಸ್ಕ್ರಿಪ್ಟ್ ರೈಟರ್ಸ್, ಅವರ ಬಳಿ ನಾವು ಕಲಿಯುತ್ತೇವೆ. ಅವರು ಕೆಮೆಂಟ್ ಮಾಡಿದರು ಎಂದು ನಿಜಕ್ಕೂ ಬೇಜಾರು ಇಲ್ಲ. ನಿಂದಕರು ಇರಬೇಕು ಆಗಲೇ ನಾವು ನೆಲದ ಮೇಲೆ ಇರುತ್ತೇವೆ. ಜನ ಕಾಸರಗೋಡಿನ ಬಗ್ಗೆ ಮಾತನಾಡಬೇಕಿತ್ತು ಅದು ಆಗಿದೆ. ಈ ಬಗ್ಗೆ ನನಗೆ ಖುಷಿ ಇದೆ.'' - ರಿಷಬ್ ಶೆಟ್ಟಿ, ನಿರ್ದೇಶಕ


Click it and Unblock the Notifications











