Kantara Teaser : ಕಾಂತಾರ, ದೆವ್ವದ ಕಥೆ ಹೇಳುತ್ತಿದ್ದಾರಾ ರಿಷಬ್ ಶೆಟ್ಟಿ?

ಈಗ ಸಿನಿಮಾ ಸೀಸನ್ ಶುರುವಾಗಿದೆ ಅಂತ ಹೇಳಬಹುದು. ಸಾಲು, ಸಾಲಾಗಿ ಎಲ್ಲಾ ಚಿತ್ರರಂಗದಲ್ಲೂ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲೂ ಕನ್ನಡದಲ್ಲಿ ಪ್ರಾಮಿಸಿಂಗ್ ಚಿತ್ರಗಳು ರಿಲೀಸ್ ಆಗಲು ರೆಡಿಯಾಗುತ್ತಿವೆ. ಇದೇ ವೇಳೆ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹೊತ್ತು ಬಂದಿದೆ 'ಕಾಂತಾರ' ಟೀಸರ್.

Recommended Video

Rishab Shetty | ಬೇಸರದಲ್ಲು ಖುಷಿ ವಿಚಾರ ಹಂಚಿಕೊಂಡ ರಿಷಬ್ ಶೆಟ್ಟಿ

'ಕಾಂತಾರ' ಇದು ಕನ್ನಡದ ಹೊಸ ಚಿತ್ರ. ನಿರ್ದೇಶಕ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಚಿತ್ರ. ಚಿತ್ರ ಟೈಟಲ್ ಮತ್ತು ಫಸ್ಟ್ ಮೂಲಕ ಚಿತ್ರತಂಡ ಗೊಂದಲದ ಜೊತೆಗೆ ಕುತೂಹಲ ಉಂಟು ಮಾಡಿತ್ತು‌.‌‌‌‌‌ ಈಗ‌ ಚಿತ್ರದ ಟೀಸರ್ ಎಲ್ಲದಕ್ಕೂ ಉತ್ತರ ಸಿಕ್ಕಂತಾಗಿದೆ. ವಿಶೇಷ ಅಂದ್ರೆ, ಈ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

ಸದ್ಯ ಟೀಸರ್ ಮೂಲಕ ಕಾಂತಾರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದಲ್ಲಿರುವ ಪಾತ್ರಗಳನ್ನು ಅಚ್ಚುಕಟ್ಟಾಗಿ ಟೀಸರ್‌ನಲ್ಲಿ ರಿವೀಲ್ ಮಾಡಿದ್ದಾರೆ. ಅಚ್ಚುತ್ ಕುಮಾರ್, ಕಿಶೋರ್ ಸೇರಿದಂತೆ ಹಲವು ಪಾತ್ರಗಳನ್ನು ಪರಿಚಯ ಮಾಡಲಾಗಿದೆ. ಇನ್ನು ನಟ ರಿಷಬ್ ಶೆಟ್ಟಿ ಭಿನ್ನವಾಗಿ ಕಾಣಿಸಿಕೊಂಡಿದ್ದು, ಗಮನ ಸೆಳೆದಿದ್ದಾರೆ.

ಪ್ರಾಂತೀಯ ಸೊಗಡು ಸಾರುವ 'ಕಾಂತಾರ'!

'ಕಾಂತಾರ' ಟ್ರೈಲರ್ ನೋಡಿದರೆ,‌‌ ಒಂದು ಸಂಸ್ಕ್ರತಿಯನ್ನು ಬಿಂಬಿಸುತ್ತದೆ. ಒಂದು ಪ್ರಾಂತ್ಯದ ಜನರ ಜೀವನ, ಕಟ್ಟು ಪಾಡುಗಳನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಟೀಸರ್ ರಿವೀಲ್ ಮಾಡಿದೆ. ಇದರೊಂದಿಗೆ ಒಂದಷ್ಟು, ದ್ವೇಷ, ಜಗಳ, ಪ್ರೀತಿ, ಹೀರೊಯಿಸಂ ಕೂಡ ಜಾಗ ಪಡೆದುಕೊಂಡಿದೆ. ರಿಷಬ್ ಶೆಟ್ಟಿಯ ಸಿಂಪಲ್ ಎಂಟ್ರಿ, ಮ್ಯಾನರಿಸಂ ಗಮನ ಸೆಳೆಯುತ್ತಿದೆ.

ಹೋರಾಟದ ಕಥೆ ಇರುವ ಸೂಚನೆ!

ಹೋರಾಟದ ಕಥೆ ಇರುವ ಸೂಚನೆ!

ಟೀಸರ್‌ನಲ್ಲಿ ರಿವೀಲ್ ಆಗಿರುವ ಮತ್ತೊಂದು ವಿಚಾರ ಅಂದರೆ, ತಮ್ಮ ಉಳಿವಿಗಾಗಿ ವ್ಯವಸ್ಥೆ ವಿರುದ್ಧ ಹೊರಡುವ ಕಥೆ ಎನ್ನುವುದು. ಪೋಲಿಸ್ ‌ಪಾತ್ರಧಾರಿ ಕಿಶೋರ್, ಕಾಡು ಮಕ್ಕಳ ಅವಲಂಬನೆಗೆ ಅಡ್ಡಿ ಆಗುತ್ತಾರೆ. ಆದರೆ ಅದನ್ನು ಎದುರಿಸಿ, ಹೋರಾಡುವ ಪಾತ್ರದಲ್ಲಿ ಹೀರೊ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಅಂಶಗಳು ಇತ್ತೀಚೆಗೆ ಬಂದ ಕನ್ನಡ ಚಿತ್ರಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಹೊಸದು ಎನಿಸುತ್ತದೆ.

'ಕಾಂತಾರ' ದೆವ್ವದ ಕಥೆನಾ?

'ಕಾಂತಾರ' ದೆವ್ವದ ಕಥೆನಾ?

ಇನ್ನು 'ಕಾಂತಾರ' ನೇರವಾಗಿ ಚಿತ್ರದ ಬಗ್ಗೆ ಸುಳಿವು ಕೊಟ್ಟಿರೋದು ಮಾತ್ರ ಅಲ್ಲ. ಕೊನೆಯಲ್ಲಿ ಸಸ್ಪೆನ್ಸ್ ಕೂಡ ಇಡಲಾಗಿದೆ. ಟೀಸರ್ ಒಂದು ಫೀಲ್‌ನಲ್ಲಿ ಕರೆದುಕೊಂಡು ಹೋಗುತ್ತಾ ಇರುತ್ತದೆ. ಆದರೆ ಕೊನೆಯಲ್ಲಿ ಇಟ್ಟಿರುವ ಟ್ವಿಸ್ಟ್ ಇದು ದೆವ್ವದ ಸಿನಿಮಾ ಇರ ಬಹುದಾ? ಅಥವಾ ಇಲ್ಲೂ ಏನಾದರೂ ಟ್ವಿಸ್ಟ್ ಇದೆಯಾ? ಎನ್ನುವ ಸಂದೇಹ ಮೂಡುತ್ತದೆ.

ಇದೇ ವರ್ಷ 'ಕಾಂತಾರ' ರಿಲೀಸ್!

ಇದೇ ವರ್ಷ 'ಕಾಂತಾರ' ರಿಲೀಸ್!

'ಕಾಂತಾರ'ದ ಮೂಲಕ ನಿರ್ದೇಶಕ ‌ರಿಷಬ್ ಶೆಟ್ಟಿ ಹೊಸ ಕಥೆಯನ್ನು ದೊಡ್ಡ ಪರದೆ ಮೇಲೆ ತರಲು ಹೊರಟಿದ್ದಾರೆ. ಟೀಸರ್‌ನಲ್ಲೇ ಜಾದು ಮಾಡಿರುವ ರಿಷಬ್ ಶೆಟ್ಟಿ ಇನ್ನು ಚಿತ್ರದಲ್ಲಿ ಏನೆಲ್ಲಾ ಇಟ್ಟಿರಬಹುದು ಎನ್ನುವ ಕುತೂಹಲ ಮೂಡಿದೆ‌. ಸದ್ಯ ಟೀಸರ್ ರಿಲೀಸ್ ಆಗಿದ್ದು,ಇದು ಕನ್ನಡದ ಒಂದು ಯಶಸ್ವಿ ಚಿತ್ರ ಆಗುತ್ತದೆ ಎನ್ನುವ ಸೂಚನೆ ಕೊಟ್ಟಿದೆ.

More from Filmibeat

English summary
Rishab Shetty Starrer And Directional Kantara Movie Teaser Gives Surprise, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X