ಜಪಾನ್ ಕಡೆ ಹೊರಟ ಕನ್ನಡದ ಡಿಟೆಕ್ಟಿವ್ ದಿವಾಕರ
ಕನ್ನಡ ಚಿತ್ರಪ್ರೇಕ್ಷಕರನ್ನು ರಂಜಿಸುತ್ತಿರುವ ಡಿಟೆಕ್ಟಿವ್ ದಿವಾಕರ ಈಗ ಜಪಾನ್ ಕಡೆ ಹೊರಟು ನಿಂತಿದ್ದಾನೆ. ಈಗಾಗಲೆ ಬಹುತೇಕ ದೇಶಗಳನ್ನು ಸುತ್ತಿರುವ ದಿವಾಕರ ಈಗ ಜಪಾನ್ ಗೆ ಹೊರಟಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಅಂದ್ಹಾಗೆ ಏನಿದು ವಿಚಾರ ಅಂತೀರಾ, ಕನ್ನಡದ ಸೂಪರ್ ಹಿಟ್ 'ಬೆಲ್ ಬಾಟಂ' ಸಿನಿಮಾ ನೂರು ದಿನಗಳನ್ನೂ ಯಶಸ್ವಿಯಾಗಿ ಪೂರೈಸಿ ಈಗ 125 ದಿನಗಳನ್ನು ದಾಡಿಕೊಂಡು ಮುನ್ನುತ್ತಿದೆ.
ಈ ಸಂದರ್ಭದಲ್ಲಿ 'ಬೆಲ್ ಬಾಟಂ' ಸಿನಿಮಾ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. 'ಬೆಲ್ ಬಾಟಂ' ಸಿನಿಮಾ ಈಗ ಜಪಾನ್ ನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಹೌದು, ಸೆಪ್ಟಂಬರ್ ನಲ್ಲಿ 'ಬೆಲ್ ಬಾಟಂ' ಸಿನಿಮಾ ಜಪಾನ್ ಕನ್ನಡಿಗರನ್ನು ರಂಜಿಸಲಿದೆ. ಈ ಮೂಲಕ ಡಿಟೆಕ್ಟಿವ್ ದಿವಾಕರ ಮತ್ತು ಕುಸುಮ ಹವಾ ಜಪಾನ್ ಕನ್ನಡಿಗರಿಗು ಗೊತ್ತಾಗಲಿದೆ.
ಈಗಾಗಲೆ 'ಬೆಲ್ ಬಾಟಂ' ಸಿನಿಮಾ ಯು ಎಸ್ ಎ, ಯುಕೆ, ಸಿಂಗಾಪೂರ್ ನಲ್ಲಿರುವ ಕನ್ನಡಿಗರಿಗೆ ಮಸ್ತ್ ಮಜಾ ಕೊಟ್ಟಿದೆ. ಈಗ ಜಪಾನ್ ಗೆ ಲಗ್ಗೆ ಇಡುವುದು ಚಿತ್ರತಂಡಕ್ಕೆ ಸಂತಸದ ವಿಚಾರವಾಗಿದೆ. ಚಿತ್ರ ಈಗಾಗಲೆ ಕಿರುತೆರೆಯಲ್ಲಿ ಪ್ರಸಾರವಾದರು ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ.

ಈ ವರ್ಷದ ಬ್ಲಕ್ ಬಾಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿರುವ 'ಬೆಲ್ ಬಾಟಂ' ಜಯತೀರ್ಥ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ ಎನ್ನುವುದು ವಿಶೇಷ. ಡಿಟೆಕ್ಟಿವ್ ದಿವಾಕರನಾಗಿ ನಿರ್ದೇಶಕ ರಿಷಭ್ ಶೆಟ್ಟಿ ಕಾಣಿಸಿಕೊಂಡರೆ, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಮಿಂಚಿದ್ದಾರೆ. ಚಿತ್ರದ ಕಥೆ, ಸಂಭಾಷಣೆ, ಸಂಗೀತ, ನಟನೆ, ನಿರ್ದೇಶಕ ಈ ಚಿತ್ರ ಈ ಮಟ್ಟಕ್ಕೆ ಯಶಸ್ವಿಯಾಗಲು ಕಾರಣವಾಗಿದೆ.


Click it and Unblock the Notifications











