'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದಲ್ಲಿ ನಗುವೇ ಹೈಲೈಟ್!

ನಟ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾಗಳು ಅಂದ್ರೆನೇ ಹಾಗೆ ಏನೋ ಒಂದು ವಿಶೇಷತೆ ಜೊತೆಗೆ, ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕುತ್ತವೆ. ಸದ್ಯ ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಮೂಲಕ ಮೋಡಿ ಮಾಡಲು ಈ ಗ್ಯಾಂಗ್ ಸಿದ್ಧವಾಗಿದೆ.

ಇದೇ ಜೂ.23ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ರಚನಾ ಇಂದರ್, ತೇಜಸ್ವಿನಿ ಪೂಣಚ್ಚ ನಾಯಕಿಯರಾಗಿ ನಟಿಸಿದ್ದಾರೆ.

'ಹರಿಕಥೆ ಅಲ್ಲ ಗಿರಿಕಥೆ' ಟ್ರೈಲರ್‌ನಲ್ಲಿ ಹೇಳುವ ಕಥೆಗಳು ವಿಭಿನ್ನವಾಗಿದೆ. ಹಾಗಾಗಿ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನು ಟ್ರೈಲರ್ ನೋಡಿದವರೆಲ್ಲಾ ಬಿದ್ದು, ಬಿದ್ದು ನಗುತ್ತಿದ್ದಾರೆ.

Rishab Shetty Starrer Harikathe Alla Girikathe Trailar goes Viral.

'ಹರಿಕಥೆ ಅಲ್ಲ ಗಿರಿಕಥೆ' ಚಿತ್ರ ಹೇಗಿರಲಿದೆ ಎನ್ನುವುದು ಟ್ರೈಲರ್‌ನಲ್ಲಿ ವ್ಯಕ್ತವಾಗಿದೆ. ಚಿತ್ರದಲ್ಲಿ ನಗು ಬಿಟ್ಟರೆ ಮತ್ತೇನು ಇರುದಿಲ್ಲ ಎನ್ನುವುದನ್ನು ಈ ಟ್ರೈಲರ್ ಹೇಳಿದೆ. ಸಿನಿಮಾ ಮಾಡಲು ಓಡಾಡುವ ನಿರ್ದೇಶಕನ ವ್ಯಥೆಯನ್ನು ಕತೆಯ ಮೂಲಕ ಹೇಳಲಾಗಿದೆ. ಈ ನಡುವೆ ಪೋಲಿಸರ ಕೈಗೆ ಸಿಕ್ಕಿ ಏನೆಲ್ಲಾ ಅವಾಂತರ ಆಗುತ್ತದೆ ಎನ್ನುವುದನ್ನು ಸಣ್ಣದಾಗಿ ಟ್ರೈಲರ್‌ನಲ್ಲಿ ರಿವೀಲ್ ಮಾಡಲಾಗಿದೆ.

ಇಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ರಿಷಬ್ ಶೆಟ್ಟಿ ಜೊತೆಗೆ, ರಚನಾ ಇಂದರ್, ಪ್ರಮೋದ್ ಶೆಟ್ಟಿ, ತೇಜಸ್ವಿನಿ, ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ತಾರೆಯರಿಂದಲೂ ಕೂಡ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.

Rishab Shetty Starrer Harikathe Alla Girikathe Trailar goes Viral

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲಿಯೂ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 'ಕಾಂತಾರ' ಚಿತ್ರದ ಶೂಟಿಂಗ್​ ನಲ್ಲಿ ಬ್ಯುಸಿ ಆಗಿರುವ ರಿಷಭ್, ಇದೀಗ 'ಕಾಂತಾರ' ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ನಡುವೆ ರಿಷಭ್ ಅವರ ಇನ್ನೊಂದು ನಿರೀಕ್ಷಿತ ಸಿನಿಮಾ ಸಂದೇಶ್​ ನಾಗರಾಜ್​ ಅವರ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

More from Filmibeat

English summary
Rishab Shetty Starrer Harikathe Alla Girikathe Trailar Viral, Many Like The Trailar, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X