ಎಲ್ಲಿಗೆ ಬಂತು 'ಕಾಂತಾರ-1' ಶೂಟಿಂಗ್? ಯಾವಾಗ ಸಿನಿಮಾ ರಿಲೀಸ್?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ತಮ್ಮ ಹುಟ್ಟೂರಲ್ಲಿ ಭಾರೀ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಡಿವೈನ್ ಸ್ಟಾರ್ ಮಾಡುತ್ತಿದ್ದಾರೆ.
ಮಳೆ ಕಾರಣ 'ಕಾಂತಾರ-1' ಚಿತ್ರೀಕರಣಕ್ಕೆ ಕೊಂಚ ಅಡೆತಡೆ ಆಗುತ್ತಿದೆ. ಆದರೂ ಒಳಾಂಗಣ ಚಿತ್ರೀಕರಣ ನಿಧಾನವಾಗಿ ಸಾಗುತ್ತಿದೆ. ಸದ್ದಿಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಎರಡು ವರ್ಷದ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಪ್ರೀಕ್ವೆಲ್ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹೊರಾಂಗಣ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಳಾಂಗಣದಲ್ಲಿ 20ರಿಂದ 30 ದಿನಗಳ ಶೆಡ್ಯೂಲ್ ಮಾತ್ರ ಬಾಕಿಯಿದೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಲಿದೆ. ಈ ಚಿತ್ರದಲ್ಲಿ ಗ್ರಾಫಿಕ್ಸ್ ವರ್ಕ್ ಜಾಸ್ತಿ ಇರಲಿದ್ದು ಪೋಸ್ಟ್ ಪ್ರೊಡಕ್ಷನ್‌ಗೆ ಹೆಚ್ಚು ಸಮಯ ಹಿಡಿಸಲಿದೆ.
ಕೆಲ ಮೂಲಗಳ ಪ್ರಕಾರ ಮುಂದಿನ ವರ್ಷ ಸಮ್ಮರ್ ವೇಳೆಗೆ 'ಕಾಂತಾರ-1' ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಕನ್ನಡದಲ್ಲಿ ಬಂದಿದ್ದ 'ಕಾಂತಾರ' ಸಿನಿಮಾ ನೋಡನೋಡುತ್ತಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಗಿತ್ತು. ಆದರೆ ಈ ಬಾರಿ ಮೊದಲಿನಿಂದಲೇ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಮೊದಲ ಭಾಗಕ್ಕಿಂತ 10 ಪಟ್ಟು ದೊಡ್ಡದಾಗಿ ಸಿನಿಮಾ ಮೂಡಿ ಬರಲಿದೆ.
ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ-1' ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಸ್ಟಾರ್‌ಕಾಸ್ಟ್ ಬಗ್ಗೆ ಕೂಡ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ರುಕ್ಮಿಣಿ ವಸಂತ್ ಚಿತ್ರದ ನಾಯಕಿ ಎನ್ನಲಾಗಿತ್ತು. ಆದರೆ ಖಚಿತ ಮಾಹಿತಿ ಸಿಗಲಿಲ್ಲ. ಇನ್ನು ಈಗಾಗಲೇ ಚಿತ್ರದ ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಂ ವೀಡಿಯೋಗೆ ಮಾರಾಟವಾಗಿದೆ. 150 ಕೋಟಿ ರೂ.ಗೆ ಡೀಲ್ ಕುದುರಿದೆ ಎನ್ನಲಾಗ್ತಿದೆ.
ಬೇರೆ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು ರಿಷಬ್ ಶೆಟ್ಟಿ 'ಕಾಂತಾರ' ಧ್ಯಾನ ಮಾಡುತ್ತಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಡಬಲ್ ಜವಾಬ್ದಾರಿ ಮತ್ತೆ ಹೊತ್ತಿದ್ದಾರೆ. ಈ ಹಿಂದೆ ಬಂದಿದ್ದ ಚಿತ್ರದ 'ಕಾಂತಾರ-1' ಟೀಸರ್ ಹಿಟ್ ಆಗಿತ್ತು. ಇನ್ನು ಕಥೆಯ ಬಗ್ಗೆ ಚಿತ್ರತಂಡ ಬಹಳ ಎಚ್ಚರಿಕೆ ವಹಿಸಿದೆ. ಒಂದು ವರ್ಷಗಳ ಕಾಲ ಕಥೆ, ಚಿತ್ರಕಥೆಗಾಗಿ ವ್ಯಯಿಸಲಾಗಿದೆ.
'ಕಾಂತಾರ'-1 ಚಿತ್ರವನ್ನು ಆಸ್ಕರ್ ರೇಸ್‌ಗೆ ಕೊಂಡೊಯ್ಯಲು ನಿರ್ಮಾಪಕ ವಿಜಯ್ ಕಿರಗಂದೂರ್ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಮೊದಲ ಭಾಗ ಹಿಟ್ ಆಗಿರುವುದರಿಂದ ಸಹಜವಾಗಿಯೇ ಸಿನಿಮಾ ಹೆಚ್ಚಾಗಿತ್ತು ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆಯೂ ಭಾರೀ ಕುತೂಹಲವಿದೆ.


Click it and Unblock the Notifications











