For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು, ಮುಂಬೈ, ಚೆನ್ನೈನಲ್ಲಿ 'ಕಾಂತಾರ' ಹೌಸ್‌ಫುಲ್: ಇನ್ನೊಂದು ವಾರ ಸಿನಿಮಾ ಆರ್ಭಟಕ್ಕೆ ಬ್ರೇಕ್ ಹಾಕುವವರಿಲ್ಲ!

  |

  ಎಲ್ಲೆಲ್ಲೂ 'ಕಾಂತಾರ' ಜಪ ಶುರುವಾಗಿದೆ. ಎರಡನೇ ವಾರವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇವತ್ತು ಕೂಡ ಎಲ್ಲೆಡೆ ಹೌಸ್‌ಫುಲ್ ಬೋರ್ಡ್ ಬೀಳುವ ಸುಳಿವು ಸಿಕ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. 'KGF' ಸರಣಿ ಸಿನಿಮಾಗಳನ್ನು ಬಿಟ್ಟರೆ ಈ ಪಾಟಿ ಕ್ರೇಜ್ ಹುಟ್ಟಾಕ್ಕಿರೊ ಸಿನಿಮಾ ಮತ್ತೊಂದಿಲ್ಲ ಎನ್ನಲಾಗ್ತಿದೆ.

  ಕನ್ನಡ ಸಿನಿಮಾಗಳಿಗೆ ಹೊರರಾಜ್ಯಗಳಲ್ಲಿ ಸ್ಕ್ರೀನ್‌ ಸಿಕ್ಕರೆ ಅದೃಷ್ಟ ಅನ್ನುವ ಕಾಲವೊಂದಿತ್ತು. ಆದರೆ ಈಗ ಹೊರ ರಾಜ್ಯಗಳಲ್ಲೂ ನಮ್ಮ ಸಿನಿಮಾಗಳು ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಡಿಮ್ಯಾಂಡ್‌ಗೆ ತಕ್ಕಂತೆ ಶೋಗಳ ಸಂಖ್ಯೆ ಹೆಚ್ಚಾಗ್ತಿದೆ. ಕನ್ನಡ ಮಣ್ಣಿನ ಕಥೆಗೆ ಎಲ್ಲರೂ ಬಹುಪರಾಕ್ ಹೇಳ್ತಿದ್ದಾರೆ. ಮುಂಬೈ, ಚೆನ್ನೈನಲ್ಲಿ 'ಕಾಂತಾರ' ಕ್ರೇಜ್ ಬಹಳ ಜೋರಾಗಿದೆ. ಕಂಟೆಂಟ್‌ ಚೆನ್ನಾಗಿದ್ದರೆ ಯಾರು ಯಾವುದೇ ಭಾಷೆಯ ಸಿನಿಮಾ ನೋಡಬಹುದು, ಅದಕ್ಕೆ ಭಾಷೆ ತೊಡಕಾಗುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

  ಕನ್ನಡದಲ್ಲಿ ಅಬ್ಬರಿಸುತ್ತಿರುವ ನಡುವೆಯೇ ಹಿಂದಿಗೂ 'ಕಾಂತಾರ' ಡಬ್; ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಕನ್ನಡದಲ್ಲಿ ಅಬ್ಬರಿಸುತ್ತಿರುವ ನಡುವೆಯೇ ಹಿಂದಿಗೂ 'ಕಾಂತಾರ' ಡಬ್; ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ

  'ಕಾಂತಾರ' ನಾನ್ 'KGF' ರೆಕಾರ್ಡ್ಸ್ ಸ್ವಂತ ಮಾಡಿಕೊಳ್ಳುವುದು ಗ್ಯಾರೆಂಟಿ ಎನ್ನುವ ಚರ್ಚೆ ಶುರುವಾಗಿದೆ. ಇದು ಜಸ್ಟ್ ಸ್ಯಾಂಪಲ್. ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡುವ ಕೆಲಸ ಶುರುವಾಗಿದ್ದು, ಮುಂದಿನ ದಿನಗಳಲ್ಲಿ 'ಕಾಂತಾರ' ಖದರ್ ಮತ್ತಷ್ಟು ಹೆಚ್ಚಾಗುವ ಸುಳಿವು ಸಿಕ್ತಿದೆ.

  ಚೆನ್ನೈನಲ್ಲಿ 'ಕಾಂತಾರ' ಕಾಡ್ಗಿಚ್ಚು

  ಚೆನ್ನೈನಲ್ಲಿ 'ಕಾಂತಾರ' ಕಾಡ್ಗಿಚ್ಚು

  ಕನ್ನಡ ಸಿನಿಮಾಗಳು ಇತ್ತೀಚೆಗೆ ತಮಿಳುನಾಡಿನಲ್ಲೂ ಸದ್ದು ಮಾಡ್ತಿದೆ. ಚೆನ್ನೈನಲ್ಲಿ 'ಕಾಂತಾರ' ಸಿನಿಮಾ ಕಳೆದೊಂದು ವಾರದಿಂದ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಬರೀ ಮಲ್ಟಿಪ್ಲೆಕ್ಸ್ ಅಷ್ಟೇ ಅಲ್ಲ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲೂ ಸಿನಿಮಾ ಜೋರಾಗಿ ಸದ್ದು ಮಾಡ್ತಿದೆ. ತಮಿಳಿಗೆ ಡಬ್ ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರುವ ಲೆಕ್ಕಾಚಾರ ನಡೀತಿದೆ.

  'ಕಾಂತಾರ' ಪೋಸ್ಟರ್‌ ಮೇಲೆ ಅಶ್ಲೀಲ ಬರೆಹ, ಪ್ರತಿಭಟನೆ'ಕಾಂತಾರ' ಪೋಸ್ಟರ್‌ ಮೇಲೆ ಅಶ್ಲೀಲ ಬರೆಹ, ಪ್ರತಿಭಟನೆ

  ಬೆಂಗಳೂರಿನಲ್ಲಿ 7ನೇ ದಿನ 300 ಶೋ

  ಬೆಂಗಳೂರಿನಲ್ಲಿ 7ನೇ ದಿನ 300 ಶೋ

  ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಕಮ್ಮಿ ಆಗುತ್ತದೆ. ಆದರೆ 'ಕಾಂತಾರ' ವಿಚಾರದಲ್ಲಿ ಇದು ಉಲ್ಟಾ ಆಗ್ತಿದೆ. ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ 7 ದಿನ 300 ಕ್ಕೂ ಶೋಗಳು ಸಿಕ್ಕಿದೆ. ಅದರಲ್ಲಿ 100ಕ್ಕೂ ಹೆಚ್ಚು ಶೋಗಳು ಈಗಾಗಲೇ ಹೌಸ್‌ಫುಲ್ ಹಾಗೂ ಫಾಸ್ಟ್ ಫಿಲ್ಲಿಂಗ್ ಆಗಿದೆ. ವಾರದ ದಿನದಲ್ಲೇ ಈ ಪಾಟಿ ಕ್ರೇಜ್‌ ಇದ್ದರೆ ವೀಕೆಂಡ್ ಇದು ಡಬಲ್ ಆಗುವ ಸುಳಿವು ಸಿಕ್ತಿದೆ.

  ಮುಂಬೈನಲ್ಲಿ 30ಕ್ಕೂ ಅಧಿಕ ಶೋಗಳು

  ಮುಂಬೈನಲ್ಲಿ 30ಕ್ಕೂ ಅಧಿಕ ಶೋಗಳು

  ದೇಶ ವಿದೇಶಗಳಲ್ಲೂ 'ಕಾಂತಾರ' ಹವಾ ನಡೀತಿದೆ. ಮುಂಬೈನಲ್ಲಿ 2ನೇ ವಾರ ಕನ್ನಡ ಚಿತ್ರಕ್ಕೆ 10 ಶೋ ಸಿಕ್ಕರೆ ಹೆಚ್ಚು ಎನ್ನುವ ಮಾತಿದೆ. ಅಂತಾದ್ರಲ್ಲಿ 'ಕಾಂತಾರ' ಚಿತ್ರಕ್ಕೆ 30ಕ್ಕೂ ಅಧಿಕ ಶೋಗಳು ಸಿಕ್ಕಿದ್ದು, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಈಗಾಗಲೇ ಚಿತ್ರವನ್ನು ಹಿಂದಿಗೆ ಡಬ್ ಮಾಡಲಾಗಿದ್ದು, ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

  50 ಕೋಟಿ ಕ್ಲಬ್‌ನತ್ತ 'ಕಾಂತಾರ'

  50 ಕೋಟಿ ಕ್ಲಬ್‌ನತ್ತ 'ಕಾಂತಾರ'

  ಈ ವಾರ ಯಾವುದೇ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿಲ್ಲ. ತೆಲುಗಿನ 'ಗಾಡ್‌ಫಾದರ್' ಹಾಗೂ 'ದಿ ಘೋಸ್ಟ್' ಸಿನಿಮಾಗಳ ಹವಾ ಕೂಡ ಕಮ್ಮಿ ಆಗಿದೆ. ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ, ಅಮಿತಾಬ್ ಬಚ್ಚನ್ ನಟನೆಯ 'ಗುಡ್‌ಬೈ' ಸಿನಿಮಾ ರಿಲೀಸ್ ಆಗಿದೆ. ಇದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿರುವುದರಿಂದ 'ಕಾಂತಾರ'ಗೆ ಪೈಪೋಟಿ ಕೊಡುವುದು ಕಷ್ಟ. ಹಾಗಾಗಿ ಇನ್ನು ಒಂದು ವಾರ 'ಕಾಂತಾರ' ಆರ್ಭಟಕ್ಕೆ ಯಾರಿಂದಲೂ ಬ್ರೇಕ್ ಹಾಕಲು ಸಾಧ್ಯವಿಲ್ಲ. ಶೀಘ್ರದಲ್ಲೇ ಸಿನಿಮಾ 50 ಕೋಟಿ ಕ್ಲಬ್‌ ಸೇರಲಿದೆ.

  English summary
  Rishab Shetty Starrer Kantara continues its glory run in theatres. know More.
  Friday, October 7, 2022, 11:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X