For Quick Alerts
  ALLOW NOTIFICATIONS  
  For Daily Alerts

  ಕೆಂಪಾದವೋ ಎಲ್ಲಾ ಕೆಂಪಾದವೋ.. ಬ್ಲಾಕ್‌ಬಸ್ಟರ್ 'ಕಾಂತಾರ' ಪರ ರಮ್ಯಾ ಭರ್ಜರಿ ಪ್ರಚಾರ!

  |

  ಕಾಂತಾರ.. ಕಾಂತಾರ.. ಕಾಂತಾರ.. ವಿಶ್ವದಾದ್ಯಂತ ಈಗ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರದ್ದೇ ಮಾತು. ಥಿಯೇಟರ್‌ಗಳೆಲ್ಲಾ ಹೌಸ್‌ಫುಲ್ಲಾಗ್ತಿದೆ. ಡಿಮ್ಯಾಂಡ್‌ಗೆ ತಕ್ಕಂತೆ ಶೋಗಳ ಸಂಖ್ಯೆ ಹೆಚ್ಚಾಗ್ತಿದ್ದು, ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ನೋಡಿದವರು ಮತ್ತಷ್ಟು ಜನರಿಗೆ ನೋಡುವಂತೆ ಹೇಳ್ತಿದ್ದಾರೆ. ನಟಿ ರಮ್ಯಾ ಕೂಡ 'ಕಾಂತಾರ' ಸಿನಿಮಾ ನೋಡುವಂತೆ ಮನವಿ ಮಾಡುತ್ತಿದ್ದಾರೆ.

  ರಿಷಬ್ ಶೆಟ್ಟಿ ನಿಜಕ್ಕೂ ತೆರೆಮೇಲೆ ಮ್ಯಾಜಿಕ್ ಮಾಡಿದ್ದಾರೆ. 'ಕಾಂತಾರ' ಅನ್ನುವ ದಂತಕಥೆಯನ್ನು ಹೇಳಿ ಕನ್ನಡ ಚಿತ್ರರಂಗದತ್ತ ಮತ್ತೊಮ್ಮೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿರುವುದಷ್ಟೇ ಅಲ್ಲ, ಅಷ್ಟೇ ಸೊಗಸಾಗಿ ಪ್ರೇಕ್ಷಕರ ಮುಂದೆ ಕೊಂಡೊಯ್ದಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಶುಕ್ರವಾರ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡ ಸಿನಿಮಾ ಶನಿವಾರವೂ ಆರ್ಭಟ ಮುಂದುವರೆಸಿದೆ.

  ರಿಷಬ್ ಶೆಟ್ಟಿ 'ಕಾಂತಾರ' 2ನೇ ದಿನದ ಕಲೆಕ್ಷನ್ ಎಷ್ಟು? ಮೂರು ದಿನ ಲೆಕ್ಕಾಚಾರವೇನು?ರಿಷಬ್ ಶೆಟ್ಟಿ 'ಕಾಂತಾರ' 2ನೇ ದಿನದ ಕಲೆಕ್ಷನ್ ಎಷ್ಟು? ಮೂರು ದಿನ ಲೆಕ್ಕಾಚಾರವೇನು?

  ಇವತ್ತು(ಅಕ್ಟೋಬರ್ 2) ಕೂಡ 'ಕಾಂತಾರ' ಚಿತ್ರದ ಬುಕ್ಕಿಂಗ್ ಚೆನ್ನಾಗಿದೆ. ತಮಿಳಿನ 'ಪೊನ್ನಿಯಿನ್ ಸೆಲ್ವನ್', ಹಿಂದಿಯ 'ವಿಕ್ರಂ ವೇದ' ಸಿನಿಮಾಗಳು ಕೂಡ ಕನ್ನಡ ಮಣ್ಣಿನ 'ಕಾಂತಾರ' ಸಿನಿಮಾ ಎದುರು ಮಂಕಾಗಿವೆ. ಬೇರೆ ಭಾಷೆಗೆ ಡಬ್ ಆಗದೇ ಕನ್ನಡದಲ್ಲೇ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಿ ಸದ್ದು ಮಾಡ್ತಿದೆ.

   ಕೆಂಪಾದವೋ ಎಲ್ಲಾ ಕೆಂಪಾದವೋ

  ಕೆಂಪಾದವೋ ಎಲ್ಲಾ ಕೆಂಪಾದವೋ

  ಪ್ರೇಕ್ಷಕರು 'ಕಾಂತಾರ' ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರ್ತಿದ್ದಾರೆ. ಪರಿಣಾಮ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಕರಾವಳಿ ಭಾಗದಲ್ಲಂತೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫಾಸ್ಟ್ ಫಿಲ್ಲಿಂಗ್ ಅಲ್ಲ, ಒಂದು ದಿನ ಮೊದಲೇ ಬಹುತೇಕ ಶೋಗಳ ಟಿಕೆಟ್ಸ್‌ ಸೋಲ್ಡ್‌ಔಟ್ ಆಗಿ ಬುಕ್‌ಮೈ ಶೋನಲ್ಲಿ ಕೆಂಪು ಬಣ್ಣ ರಾರಾಜಿಸ್ತಿದೆ. ಒಳ್ಳೆ ಸಿನಿಮಾ ಬಂದರೆ ಜನ ಥಿಯೇಟರ್‌ಗೆ ಬಂದೇ ಬರ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗ್ತಿದೆ.

   'ಕಾಂತಾರ' ನೋಡುವಂತೆ ರಮ್ಯಾ ಮನವಿ

  'ಕಾಂತಾರ' ನೋಡುವಂತೆ ರಮ್ಯಾ ಮನವಿ

  ಒಂದು ದಿನ ಮೊದಲೇ ಮೋಹಕ ತಾರೆ ರಮ್ಯಾ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ನೀಡಿದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಇನ್ನು ನೆಟ್ಟಿಗರೊಬ್ಬರು ಭಾನುವಾರ ನಾನು 'ಪೊನ್ನಿಯಿನ್ ಸೆಲ್ವನ್' ಅಥವಾ 'ವಿಕ್ರಂ ವೇದ' ಎರಡರಲ್ಲಿ ಯಾವ ಸಿನಿಮಾ ನೋಡಲಿ ಎಂದು ಕೇಳಿದ್ದಾರೆ. ಇದಕ್ಕೆ ರಿಪ್ಲೇ ಮಾಡಿರುವ ರಮ್ಯಾ ಕನ್ನಡದ 'ಕಾಂತಾರ' ಸಿನಿಮಾ ನೋಡಿ ಎಂದು ಸಲಹೆ ನೀಡಿದ್ದಾರೆ.

   ದೇಶಾದ್ಯಂತ 100 ಶೋಗಳು ಹೆಚ್ಚಳ

  ದೇಶಾದ್ಯಂತ 100 ಶೋಗಳು ಹೆಚ್ಚಳ

  ಸಿನಿಮಾ ನೋಡಿದ ಪ್ರತಿಯೊಬ್ಬರು ಪ್ರತಿ ದೃಶ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕ್ಲೈಮ್ಯಾಕ್ಸ್‌ನ ಕೊಂಡಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅಭಿನಯ ನೋಡಿ ಈ ವರ್ಷ ರಾಷ್ಟ್ರಪ್ರಶಸ್ತಿ ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ. ಇನ್ನು ಮೊದಲಿಗೆ 'ಕಾಂತಾರ' ಚಿತ್ರಕ್ಕೆ ಸಿಕ್ಕಿರುವ ಶೋಗಳ ಸಂಖ್ಯೆ ಕಮ್ಮಿ ಆಯಿತು ಎಂದು ಕೆಲವರು ಹೇಳಿದ್ದರು. ಆದರೆ ಈಗ ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಾಗ್ತಿದೆ. ಎರಡನೇ ದಿನಕ್ಕೆ 100 ಶೋಗಳನ್ನು ಹೆಚ್ಚಿಸಿದೆ ಹೊಂಬಾಳೆ ಸಂಸ್ಥೆ.

   'ಕಾಂತಾರ' 2 ದಿನದ ಕಲೆಕ್ಷನ್ ಎಷ್ಟು?

  'ಕಾಂತಾರ' 2 ದಿನದ ಕಲೆಕ್ಷನ್ ಎಷ್ಟು?

  ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಸಿನಿಮಾ ಧೂಳೆಬ್ಬಿಸಿದೆ. 2 ದಿನಕ್ಕೆ ಸಿನಿಮಾ ಕಲೆಕ್ಷನ್ 10 ಕೋಟಿ ದಾಟಿದ್ದು, ಇವತ್ತು ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷಿಸಲಾಗಿದೆ. 3 ದಿನಕ್ಕೆ ಸಿನಿಮಾ 15 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ. ಈಗಾಗಲೇ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಸಂತಸ ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಮಾಸ್ ಹೀರೊ ಆಗಿ ಹೊರಹೊಮ್ಮಿದ್ದಾರೆ. ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೂಪರ್ ಸಕ್ಸಸ್ ಕಂಡಿದ್ದಾರೆ.

  English summary
  Rishab shetty Starrer Kantara got a stupendous response on the opening Weekend. know more.
  Sunday, October 2, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X