For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಹೆಸರಿಗೆ ನಾನ್ KGF - 2 ಬಾಕ್ಸಾಫೀಸ್ ದಾಖಲೆ: ರಾಜ್ಯೋತ್ಸವ ದಿನವೇ ₹300 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು!

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ₹300 ಕೋಟಿ ಕ್ಲಬ್ ಸೇರಿದೆ. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿ ಹೊಸ ದಾಖಲೆ ಬರೆದಿದೆ. KGF ಚಾಪ್ಟರ್ -1 ದಾಖಲೆಯನ್ನು ಮುರಿದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 5ನೇ ವಾರವೂ ಹಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

  ಮರಕ್ಕಿಂತ ಮರ ದೊಡ್ಡದು ಎನ್ನುವಂತೆ ಒಂದಕ್ಕಿಂತ ಒಂದು ಸಿನಿಮಾ ದಾಖಲೆ ಬರೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ 'ಕಾಂತಾರ' ಡಾರ್ಕ್‌ ಹಾರ್ಸ್ ಆಗಿ ಹೊರ ಹೊಮ್ಮಿದೆ. ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನಿನ್ನೆ(ನವೆಂಬರ್ 1) ರಾಜ್ಯೋತ್ಸವದ ಸಂಭ್ರಮದಲ್ಲೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ. ಗಡಿ ದಾಟಿದೆ. ಕರಾವಳಿ ಸಂಸ್ಕೃತಿ ಆಚರಣೆಯನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. 15 ದಿನಗಳ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ಸಿನಿಮಾ ಸೂಪರ್ ಹಿಟ್ ಆಗಿದೆ.

  ವಿದೇಶಗಳ ಗಳಿಕೆಯಲ್ಲೇ ಬಜೆಟ್ ಮೇಲೆ ಲಾಭ: 'ಕಾಂತಾರ' ಓವರ್‌ಸೀಸ್‌ ಕಲೆಕ್ಷನ್‌ನ ಪೈಸಾ ಪೈಸಾ ಲೆಕ್ಕ ಇಲ್ಲಿದೆ!ವಿದೇಶಗಳ ಗಳಿಕೆಯಲ್ಲೇ ಬಜೆಟ್ ಮೇಲೆ ಲಾಭ: 'ಕಾಂತಾರ' ಓವರ್‌ಸೀಸ್‌ ಕಲೆಕ್ಷನ್‌ನ ಪೈಸಾ ಪೈಸಾ ಲೆಕ್ಕ ಇಲ್ಲಿದೆ!

  ವಿದೇಶದಲ್ಲೂ ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬರೀ ಬಾಕ್ಸಾಫೀಸ್ ಸಕ್ಸಸ್ ಅಷ್ಟೇ ಅಲ್ಲ ಸಿನಿಮಾ ನೋಡಿ ಪ್ರತಿಯೊಬ್ಬರು ಮೆಚ್ಚಿಕೊಂಡಾಡಿದ್ದಾರೆ. 'ಕಾಂತಾರ' ಇಡೀ ಭಾರತೀಯ ಚಿತ್ರರಂಗವೇ ಮತ್ತೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ.

  32 ದಿನಕ್ಕೆ ₹300 ಕೋಟಿ ಕಲೆಕ್ಷನ್

  32 ದಿನಕ್ಕೆ ₹300 ಕೋಟಿ ಕಲೆಕ್ಷನ್

  ಸೆಪ್ಟೆಂಬರ್ 30ಕ್ಕೆ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ 'ಕಾಂತಾರ' ಸಿನಿಮಾ ತೆರೆಗೆ ಬಂದಿತ್ತು. ಕನ್ನಡದಲ್ಲೇ ಸಿನಿಮಾ ನೋಡಿ ಪರಭಾಷಿಕರು ಮೆಚ್ಚಿಕೊಂಡಿದ್ದರು. ನಿಧಾನವಾಗಿ ಪರಭಾಷಾ ಪ್ರೇಕ್ಷಕರಿಂದ ವಿತರಕರು, ಪ್ರದರ್ಶಕರಿಂದ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಶುರುವಾಗಿತ್ತು. ಹಾಗಾಗಿ ಅಕ್ಟೋಬರ್ 14ರ ನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಿತ್ತು. ಎಲ್ಲಾ ಕಡೆಯೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 32 ದಿನಕ್ಕೆ ಸಿನಿಮಾ ₹300 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

  ₹50 ಕೋಟಿ ಸನಿಹಕ್ಕೆ ಹಿಂದಿ ವರ್ಷನ್

  ₹50 ಕೋಟಿ ಸನಿಹಕ್ಕೆ ಹಿಂದಿ ವರ್ಷನ್

  ಅಚ್ಚರಿ ಎಂದರೆ ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಸಿನಿಮಾ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈಗಾಗಲೇ 40 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರಲಿದೆ. ಅಕ್ಷಯ್‌ ಕುಮಾರ್ ನಟನೆಯ 'ರಾಮ್‌ಸೇತು', ಅಜಯ್ ದೇವಗನ್ 'ಥ್ಯಾಂಕ್‌ಗಾಡ್' ಸಿನಿಮಾಗಳನ್ನು ಹಿಂದಿಕ್ಕಿ ರಿಷಬ್ ಶೆಟ್ಟಿ ಸಿನಿಮಾ ಸದ್ದು ಮಾಡುತ್ತಿರುವುದು ವಿಶೇಷ. ಕೆಲವೆಡೆ ಆ ಎರಡೂ ಸಿನಿಮಾಗಳ ಶೋಗಳನ್ನು ಕ್ಯಾನ್ಸಲ್ ಮಾಡಿ 'ಕಾಂತಾರ' ಪ್ರದರ್ಶನ ಮಾಡಲಾಗುತ್ತಿದೆ.

  ಮೂಢನಂಬಿಕೆ ಬಿತ್ತುತ್ತಿದೆ: 'ಕಾಂತಾರ' ವಿರುದ್ಧ ಟೀಕೆಗೆ ರಿಷಬ್ ಖಡಕ್ ಉತ್ತರಮೂಢನಂಬಿಕೆ ಬಿತ್ತುತ್ತಿದೆ: 'ಕಾಂತಾರ' ವಿರುದ್ಧ ಟೀಕೆಗೆ ರಿಷಬ್ ಖಡಕ್ ಉತ್ತರ

  ತಮಿಳುನಾಡಿನಲ್ಲೂ 'ಕಾಂತಾರ' ಹವಾ

  ತಮಿಳುನಾಡಿನಲ್ಲೂ 'ಕಾಂತಾರ' ಹವಾ

  KGF ಸರಣಿ ಸಿನಿಮಾಗಳನ್ನು ಬಿಟ್ಟರೆ ತಮಿಳುನಾಡಿನಲ್ಲಿ ಯಾವುದೇ ಕನ್ನಡ ಚಿತ್ರಕ್ಕೆ ಈ ಮಟ್ಟಿಗಿನ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಸದ್ಯ 100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣ್ತಿದೆ. 20 ಸ್ಕ್ರೀನ್‌ಗಳಲ್ಲಿ ಮೊದಲಿಗೆ ಸಿನಿಮಾ ರಿಲೀಸ್ ಮಾಡಲಾಗಿತ್ತು. ಬೇಡಿಕೆ ತಕ್ಕಂತೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿತ್ತು. ತಮಿಳು ವಿತರಕರು ಸಿನಿಮಾ ಕಲೆಕ್ಷನ್ ಬಗ್ಗೆ ಖುಷಿಯಾಗಿದ್ದಾರೆ.

  ತೆಲುಗು ವರ್ಷನ್ ₹45 ಕೋಟಿ ಕಲೆಕ್ಷನ್

  ತೆಲುಗು ವರ್ಷನ್ ₹45 ಕೋಟಿ ಕಲೆಕ್ಷನ್

  'ಕಾಂತಾರ' ತೆಲುಗು ವರ್ಷನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಈಗಾಗಲೇ ಸಿನಿಮಾ 45 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಒಳ್ಳೆ ಸಿನಿಮಾಗಳನ್ನು ತೆಲುಗು ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಕ್ಟೋಬರ್ 20ರಂದು ತೆರೆಗೆ ಬಂದ ಮಲಯಾಳಂ ವರ್ಷನ್ ಕೇರಳದಲ್ಲಿ ಸದ್ದು ಮಾಡ್ತಿದೆ. ಇನ್ನು ಕರ್ನಾಟಕ, ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ ವಿಧ್ವಂಸ ಸೃಷ್ಟಿಸಿದೆ.

  English summary
  Rishab shetty Starrer Kantara Grosses Over Rs 300 Crore Worldwide. Kantara will become 7th Indian film of 2022 to cross 300 crores globally. know more.
  Wednesday, November 2, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X