For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಮೊದಲ ದಿನದ ಗಳಿಕೆ ಲೆಕ್ಕಾಚಾರವೇನು? ಬಾಕ್ಸಾಫೀಸ್‌ನಲ್ಲಿ ಆದ ಕಲೆಕ್ಷನ್ ಎಷ್ಟು?

  |

  'ಕೆಜಿಎಫ್ 2' ಸಿನಿಮಾ ಬಳಿಕ ಹೊಂಬಾಳೆ ಫಿಲ್ಸ್ ನಿರ್ಮಾಣದ ಸಿನಿಮಾ 'ಕಾಂತಾರ' ರಿಲೀಸ್ ಆಗಿದೆ. ಅಂದ್ಕೊಂಡಿದ್ದಕ್ಕಿಂತ ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೊಂದು ಕಡೆ ಸಿನಿಪ್ರಿಯರಿಗೂ ಸಿನಿಮಾ ಇಷ್ಟ ಆಗಿದೆ.

  ಮೊದಲ ದಿನವೇ ರಿಷಬ್ ಶೆಟ್ಟಿ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ನಿರೀಕ್ಷೆ ಮಾಡಿದಂತೆ ಸಿನಿಮಾ ನೋಡಿದವರು 'ಕಾಂತಾರ' ಕಥೆ, ಚಿತ್ರಕಥೆಗೆ ಮನ ಸೋತಿದ್ದಾರೆ. ಕರಾವಳಿ ಭಾಗದ ಕಥೆಯನ್ನು ತೆರೆಮೇಲೆ ತರಲಾಗಿದೆ. ಮೊದಲೇ ಹೇಳಿದಂತೆ ಇದು ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋದು ನಿರೀಕ್ಷೆಯಿದೆ.

  'ಕಾಂತಾರ' ಮಾಡೋಕೆ ಹೋಗಿ 'ಕೆರಾಡಿ ಫಿಲ್ಮ್ ಸಿಟಿ' ಕಟ್ಟಿದ ರಿಷಬ್: ಮೀನು ಮಾರೋಳಿಗೆ ಚಮಕ್!'ಕಾಂತಾರ' ಮಾಡೋಕೆ ಹೋಗಿ 'ಕೆರಾಡಿ ಫಿಲ್ಮ್ ಸಿಟಿ' ಕಟ್ಟಿದ ರಿಷಬ್: ಮೀನು ಮಾರೋಳಿಗೆ ಚಮಕ್!

  'ಕಾಂತಾರ'ಗೆ ಮೊದಲ ದಿನ ಸಿಕ್ಕಿರೋ ರೆಸ್ಪಾನ್ಸ್‌ ನೋಡಿ ಚಿತ್ರರಂಗ ಈಗಾಗಲೇ ಲೆಕ್ಕಾಚಾರ ಹಾಕುವುದಕ್ಕೆ ಶುರುಮಾಡಿದೆ. ಟ್ರೇಡ್‌ ಅನಲಿಸ್ಟ್‌ಗಳು ಈಗಾಗಲೇ ಮೊದಲ ದಿನದ ಕಲೆಕ್ಷನ್ ಬಗ್ಗೆ ಅಂದಾಜು ಲೆಕ್ಕ ಹಾಕಿ ಇಟ್ಟಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.

   ರಿಷಬ್ 'ಕಾಂತಾರ'ಗೆ ಸಖತ್ ರೆಸ್ಪಾನ್ಸ್

  ರಿಷಬ್ 'ಕಾಂತಾರ'ಗೆ ಸಖತ್ ರೆಸ್ಪಾನ್ಸ್

  ದಸರಾ ಹಬ್ಬದ ಸಂಭ್ರಮದಲ್ಲಿ 'ಕಾಂತಾರ' ಸಿನಿಮಾ ರಿಲೀಸ್ ಆಗಿದೆ. ಹಬ್ಬದ ಮೂಡಿನಲ್ಲಿರೋ ಪ್ರೇಕ್ಷಕರಿಗೆ ವಿಶಿಷ್ಠವಾದ ಸಿನಿಮಾವನ್ನು ತೋರಿಸಬೇಕು ಅನ್ನೋ ಸಿನಿಮಾ ತಂಡದ ಆಸೆ ಈಡೇರಿದೆ. ಒಂದ್ಕಡೆ ಸೆಲೆಬ್ರೆಟಿಗಳು 'ಕಾಂತಾರ' ನೋಡಿ ಹೊಗಳಿಕೊಂಡಾಡಿದ್ದಾರೆ. ಇನ್ನೊಂದ್ಕಡೆ ಬಿಡುಗಡೆಯಾದ ಥಿಯೇಟರ್‌ಗಳಲ್ಲೆಲ್ಲಾ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ 'ಕಾಂತಾರ' ರಿಷಬ್ ಶೆಟ್ಟಿ ಅಭಿನಯದ ಸಿನಿಮಾಗಳ ದಾಖಲೆಯನ್ನು ಮುರಿದಿರಬಹುದು ಎಂದು ಅಂದಾಜಿಸಲಾಗಿದೆ.

  'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

  ಮೊದಲ ದಿನ ಕಲೆಕ್ಷನ್ ಪ್ರಿಡಿಕ್ಷನ್ ಏನು?

  ಮೊದಲ ದಿನ ಕಲೆಕ್ಷನ್ ಪ್ರಿಡಿಕ್ಷನ್ ಏನು?

  ಪ್ಯಾನ್ ಇಂಡಿಯಾ ಕ್ರೇಜ್ ಇರುವಾಗ 'ಕಾಂತಾರ' ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಹೀಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಅನ್ನೋ ಮಾತು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಿಡಿಕ್ಷನ್ ಪ್ರಕಾರ, 'ಕಾಂತಾರ' ಸಿನಿಮಾ ಮೊದಲ ದಿನ ಬರೊಬ್ಬರಿ 6 ರಿಂದ 7 ಕೋಟಿ ರೂಪಾಯಿ ಕರ್ನಾಟಕ ಒಂದರಲ್ಲೇ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಈ ಮೂಲಕ ರಿಷಬ್ ಶೆಟ್ಟಿಯ ಎಲ್ಲಾ ಸಿನಿಮಾಗಳಿಗಿಂತ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

  ರಿಷಬ್ ಶೆಟ್ಟಿಯ ಬೆಸ್ಟ್ ಸಿನಿಮಾ

  ರಿಷಬ್ ಶೆಟ್ಟಿಯ ಬೆಸ್ಟ್ ಸಿನಿಮಾ

  'ಕಾಂತಾರ'ಯ ರಿಷಬ್ ಶೆಟ್ಟಿ ಆಕ್ಟಿಂಗ್ ಕರಿಯರ್‌ನ ಬೆಸ್ಟ್ ಸಿನಿಮಾ. ಈ ಹಿಂದೆ ರಿಷಬ್ ಶೆಟ್ಟಿ ಹೀರೊ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬೆಲ್ ಬಾಟಂ', 'ಕಥಾಸಂಗಮ', 'ಹೀರೊ', 'ಗರುಡ ಗಮನ ವೃಷಭ ವಾಹನ' ಹಾಗೂ ಇತ್ತೀಚೆಗೆ ತೆರೆಕಂಡ 'ಹರಿಕಥೆ ಅಲ್ಲ ಗಿರಿ ಕಥೆ' ಸಿನಿಮಾಗಳಿಗಿಂತ 'ಕಾಂತಾರ' ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮೂಲಕ ರಿಷಬ್ ಶೆಟ್ಟಿ ಹೀರೊ ಆಗಿ ಮತ್ತೊಂದು ಎತ್ತರಕ್ಕೆ ಏರಿದ್ದಾರೆ. ಹಾಗೇ ನಿರ್ದೇಶಕನಾಗಿ ಮತ್ತೊಂದು ವಿಭಿನ್ನ ಜಾರ್ ಸಿನಿಮಾ ಎನ್ನಬಹುದು.

  'ಕಾಂತಾರ' ಬಜೆಟ್ ಎಷ್ಟು?

  'ಕಾಂತಾರ' ಬಜೆಟ್ ಎಷ್ಟು?

  ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದೆ ಅನ್ನೋದು ಇಂಡಸ್ಟ್ರಿ ಟಾಕ್. ಇದು ಸ್ಟಾರ್ ಕಾಸ್ಟ್, ಸ್ಟೋರಿ ಎಲ್ಲದನ್ನೂ ಗಮನದಲ್ಲಿಟ್ಟುಕೊಂಡು ನೋಡಿದರೆ ದೊಡ್ಡ ಮೊತ್ತದ ಸಿನಿಮಾವೇ. ಹೀಗಾಗಿ ಬ್ಯಾಕ್ ಟು ಬ್ಯಾಕ್ ರಜೆ ಇರುವ ದಸರಾ ಸಂಭ್ರಮದಲ್ಲಿ 'ಕಾಂತಾರ' 50 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದರೆ, ಸಿನಿಮಾ ದೊಡ್ಡ ಸಾಧನೆ ಮಾಡಿದಂತೆ.

  English summary
  Rishab Shetty Starrer Kantara Kannada Movie Box Office Day 1 Prediction, Know More.
  Saturday, October 1, 2022, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X