twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ'ಕ್ಕಾಗಿ 12 ಸಿನಿಮಾಗಳನ್ನು ಬಿಟ್ಟಿದ್ದೇನೆ: ನಟ ಪ್ರಕಾಶ್ ತುಮಿನಾಡ್

    |

    ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ ತೆರೆ ನಾಳೆ (ಸಪ್ಟೆಂಬರ್ 30) ವಿಶ್ವದಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಪ್ರೀಮಿಯರ್‌ ಶೋಗಳು ಆರಂಭವಾಗಿದ್ದು, ಪ್ರೇಕ್ಷಕರು ಕಾಂತಾರವನ್ನು ಕಣ್ತುಂಬಿಕೊಂಡಿದ್ದಾರೆ. ಕಾಂತಾರ ಇದೊಂದು ದಂಥಕತೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದ್ದು, ನೋಡುಗರ ಕುತೂಹಲವನ್ನು ಹೆಚ್ಚಿಸಿದೆ.

    'ಕಾಂತಾರ' ಚಿತ್ರದ ಬಗ್ಗೆ ನಟ ಹಾಗೂ ಚಿತ್ರಕಥೆಗಾರ ಪ್ರಕಾಶ್ ತುಮಿನಾಡ್ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ. 'ಕಾಂತಾರ' ಸಿನಿಮಾದಲ್ಲಿ ಬಳಸಿಕೊಂಡಿರುವ ಪ್ರತಿಯೊಂದು ವಿಚಾರದ ಬಗ್ಗೆ ತಿಳಿದುಕೊಂಡು ಮಾಡಿದ್ದೇವೆ. ಕಂಬಳ, ಭೂತಕೋಲ ಈ ಎಲ್ಲದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಬರೆದಿದ್ದೇವೆ. ಕತೆ ಬರೆಯುವಾಗ ನಮ್ಮ ತಲೆಯಲ್ಲಿ ಒಂದು ಚಿತ್ರಣ ಓಡುತ್ತಿತ್ತು. ಆದರೆ ಶೂಟಿಂಗ್‌ ಮುಗಿದ ಮೇಲೆ ಅದು ತಮ್ಮ ಊಹೆಯನ್ನು ಮೀರಿದ ರೀತಿಯಲ್ಲಿ ಮೂಡಿಬಂತು. ರಿಷಬ್‌ ಅವರಿಗೆ ಸಿನಿಮಾ ಇದೇ ರೀತಿ ಬರಬೇಕು ಎಂದು ಮೊದಲೇ ಐಡಿಯಾ ಇತ್ತು. ಅದನ್ನು ನಮ್ಮ ಛಾಯಗ್ರಾಹಕ ಅರವಿಂದ್‌ ಅವರು ನೆಕ್ಸ್ಟ್‌ ಲೆವೆಗ್‌ಗೆ ತೆಗೆದುಕೊಂಡು ಹೋದರು ಎಂದು ಖುಷಿ ವ್ಯಕ್ತಪಡಿಸಿದರು.

    "ನನಗಾದ ಅನುಭವ ನನಗಷ್ಟೇ ಇರಲಿ": ರಿಷಬ್‌ಗೆ 'ದೈವ ಆವಾಹನೆ' ಆಗಿದ್ದು ನಿಜನಾ..?

    ಇನ್ನು ನಾವಂತೂ 'ಕಾಂತಾರ'ಕ್ಕೆ ಫಿದಾ ಆಗಿದ್ದೇನೆ. ಕಾಂತಾರದಲ್ಲಿ ಸಂಪೂರ್ಣ ಕಂಬಳ ಇಲ್ಲ, ಅಥವಾ ಸಂಪೂರ್ಣ ಭೂತಾರಾಧನೆ ಇಲ್ಲ. ಇದು ಒಬ್ಬ ಕರಾವಳಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆ. ಹೀಗಾಗಿ ಅಲ್ಲಿನ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡಿದ್ದೇವೆ. ಚಿತ್ರದಲ್ಲಿ ಎಲ್ಲಿ ಪ್ರಾಮುಖ್ಯತೆ ಕೊಡಬೇಕು ಅಲ್ಲಿ ಖಂಡಿತವಾಗಿಯೂ ಪ್ರಾಮುಖ್ಯತೆ ಕೊಟ್ಟಿದ್ದೇವೆ ಎಂದರು.

    Rishab Shetty Starrer Kantara Movie actor Prakash Thuminad Explain Shooting Experience

    ಈ ಹಿಂದೆ ನಾನು ಹೆಚ್ಚಿನ ಸಿನಿಮಾಗಳಲ್ಲಿ ನಟನಾಗಿ ಆ್ಯಕ್ಟ್‌ ಮಾಡಿದ್ದೇನೆ. ಆದರೆ ಈ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಸುಮಾರು ೧೨ ಚಿತ್ರಗಳನ್ನು ಬಿಟ್ಟಿದ್ದೇನೆ. ಇದರಲ್ಲಿ ನನಗೆ ಎಲ್ಲಾ ಹೊಸ ರೀತಿಯ ಅನುಭವ. ಈ ಚಿತ್ರದಿಂದ ಒಂದು ಸಿನಿಮಾ ಮಾಡಲು ಬೇಕಾದ ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಂಡೆ. ಚಿತ್ರದ ಬರವಣಿಗೆಯಿಂದ ಕೊನೆಯ ಚಿತ್ರೀಕರಣದ ವರೆಗೆ ಜೊತೆಗಿದ್ದೆ. ರಿಷಬ್‌ ಶೆಟ್ಟಿ ಅವರಿಂದ ತುಂಬಾ ವಿಷಯ ಕಲಿತುಕೊಂಡೆ. 'ಕಾಂತಾರ'ದಿಂದ ಒಳ್ಳೆ ಅನುಭವ ಸಿಕ್ಕಿದೆ ಅದೇ ನನಗೆ ದೊಡ್ಡ ಗಿಫ್‌ ಎಂದು ಪ್ರಕಾಶ್ ತುಮಿನಾಡ್ ಹೇಳಿದ್ದಾರೆ.

    'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

    'ಕಾಂತರ' ಚಿತ್ರವನ್ನು ಯಾಕೆ ನೋಡಬೇಕು ಎಂದು ಹೇಳಿದ ಅವರು 'ಕಾಂತಾರ' ಚಿತ್ರ ಕರಾವಳಿಯ ಸಂಸ್ಕೃತಿಯ ಗುಚ್ಚದಂತಿದೆ. ಕೇವಲ ಕರಾವಳಿಯವರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಈ ಚಿತ್ರ ವಿಶೇಷ ಅನುಭವ ನೀಡುತ್ತದೆ. ಬೇರೆ ಭಾಗದವರು ಕರಾವಳಿಯಲ್ಲಿ ಈ ರೀತಿಯ ಆಚರಣೆಗಳಿದೆ ಎನ್ನುವುದುನ್ನು ಈ ಚಿತ್ರದ ಮೂಲಕ ತಿಳಿದುಕೊಳ್ಳಬಹುದು. ಇನ್ನು ಕರಾವಳಿ ಭಾಗದವರು 'ಕಾಂತಾರ' ಚಿತ್ರತಂಡ ಕರಾವಳಿ ಸಂಸ್ಕೃತಿಯನ್ನು ಹೇಗೆ ತೋರಿಸಿದೆ ಎಂದು ತಿಳಿಯಲು ಸಿನಿಮಾ ನೋಡಬೇಕು. ಒಟ್ಟಾರೆ ಪ್ರತಿಯೊಬ್ಬರಿಗೂ ಇದು ಮನಸ್ಸಿಗೆ ಹತ್ತಿರವಾಗುವ ಸಿನಿಮಾವಾಗುತ್ತದೆ ಎಂದರು.

    ಇನ್ನು ಈ ಚಿತ್ರದ ಮೂಲಕ ದೈವ ಎನ್ನುವ ಶಕ್ತಿ ದಕ್ಷಿಣ ಕನ್ನಡದವರಿಗೆ ಮಾತ್ರವಲ್ಲ ಎಲ್ಲರಿಗೂ ಅನುಭವವಾಗುತ್ತದೆ. ಈ ಚಿತ್ರವನ್ನು ಮಾಡುವಾಗ ನಾವು ಏನು ಕೇಳಿದ್ದೇವು ಅದರ ದುಪ್ಪಟ್ಟು ನಮಗೆ ಸಿಗುತ್ತಾ ಹೋಗಿದೆ. ಎಲ್ಲಿ ನಮಗೆ ತೊಂದರೆ ಆಗಿದೆ ಎಂದುಕೊಂಡಿಕದ್ದೇವು, ಅದು ಮತ್ತೊಂದು ರೀತಿಯಲ್ಲಿ ದುಪ್ಪಟ್ಟಾಗಿಯೇ ನಮಗೆ ಸಿಕ್ಕಿದೆ. ಈ ಚಿತ್ರಕ್ಕೆ ಖಂಡಿತ ದೇವರ ಪ್ರೇರಣೆ ಇದೆ. ಒಟ್ಟಾರೆ ನಾವು ಸಿನಿಮಾ ಮಾಡುವಾಗ ಏನು ಅಂದುಕೊಂಡಿದ್ದೇವು, ಅದನ್ನು ರೀಚ್‌ ಆಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

    English summary
    Rishab Shetty Starrer Kantara Movie actor Prakash Thuminad Explain Shooting Experience with filmibeat.
    Thursday, September 29, 2022, 20:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X