For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಡಿದು ನಿಲ್ಲಿಸೋರು ಯಾರು? 8ನೇ ದಿನದ ಲೆಕ್ಕಾಚಾರವೇನು?

  |

  ಯಾರ ಬಾಯಲ್ಲಿ ನೋಡಿದ್ರೂ 'ಕಾಂತಾರ' ಬಗ್ಗೆನೇ ಟಾಕ್. ಕನ್ನಡ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಎಲ್ಲರ ಕಣ್ಣು 'ಕಾಂತಾರ' ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ನಿಂತಿದೆ.

  'ಕಾಂತಾರ' ಹವಾ ಎಲ್ಲಾ ಕಡೆಗೂ ಹಬ್ಬಿದೆ. ಬಾಲಿವುಡ್‌ನಲ್ಲೂ 'ಕಾಂತಾರ' ಸಿನಿಮಾ ಬಗ್ಗೆನೇ ಕ್ರೇಜ್ ಹೆಚ್ಚಾಗಿದೆ. ಈ ಕಾರಣಕ್ಕೇ ಹಿಂದಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಅದಕ್ಕೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆಗಳನ್ನು ಮಾಡಿಕೊಂಡಿದೆ.

  'ಪೊನ್ನಿಯಿನ್ ಸೆಲ್ವನ್', 'ವಿಕ್ರಂ ವೇದ'ಕ್ಕಿಂತ 'ಕಾಂತಾರ'ಗೆ ಬಹುಪರಾಕ್: 7ನೇ ದಿನದ ಕಲೆಕ್ಷನ್ ಇಷ್ಟು?'ಪೊನ್ನಿಯಿನ್ ಸೆಲ್ವನ್', 'ವಿಕ್ರಂ ವೇದ'ಕ್ಕಿಂತ 'ಕಾಂತಾರ'ಗೆ ಬಹುಪರಾಕ್: 7ನೇ ದಿನದ ಕಲೆಕ್ಷನ್ ಇಷ್ಟು?

  ದಸರಾ ರಜೆಗಳನ್ನು ಮುಗಿದ ಬಳಿಕವೂ 'ಕಾಂತಾರ' ಅಬ್ಬರವೇನು ಕಮ್ಮಿಯಾಗಿಲ್ಲ. ಬಿಡುಗಡೆಯಾದ ಏಳನೇ ದಿನ ಹಾಗೂ ಎಂಟನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. 'ಕಾಂತಾರ' ಬಿಡುಗಡೆಯಾಗಿ ಇಂದಿಗೆ (ಅಕ್ಟೋಬರ್ 07) 8ನೇ ದಿನ. ಈ ದಿನ ಕೂಡ ಟಿಕೆಟ್ ಬುಕಿಂಗ್ ಸಖತ್ತಾಗೇ ಇದೆ ಅನ್ನೋ ಮಾತು ವಿತರಕರ ವಲಯದಲ್ಲಿ ಓಡಾಡುತ್ತಿದೆ.

  7ನೇ ದಿನದ 'ಕಾಂತಾರ' ಕಲೆಕ್ಷನ್ ಹೇಗಿದೆ?

  7ನೇ ದಿನದ 'ಕಾಂತಾರ' ಕಲೆಕ್ಷನ್ ಹೇಗಿದೆ?

  ಪ್ರಕೃತಿ ಹಾಗೂ ಮನುಷ್ಯ ನಡುವಿನ ಸಂಘರ್ಷವನ್ನು ರಿಷಬ್ ಶೆಟ್ಟಿ ತೆರೆಮೇಲೆ ತಂದಿರೋದಕ್ಕೆ ಪ್ರೇಕ್ಷಕರ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೂ ಕರಾವಳಿ ಭಾಗ ದೈವಗಳನ್ನು ಪ್ರಭಾವ ಬೀರುವಂತೆ ಚಿತ್ರೀಸಿರೋದು ಸಿನಿಮಾ ಹೈಲೈಟ್. ಇದೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಕಲೆಕ್ಷನ್ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ. ಅದರಲ್ಲೂ ಏಳನೇ ದಿನವೂ 'ಕಾಂತಾರ' ಸಿನಿಮಾ ಗಳಿಕೆ ಅದ್ಬುತವಾಗಿದ್ದು, ಸುಮಾರು 5.50 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ.

  'ಕಾಂತಾರ' 8ನೇ ದಿನದ ಕಲೆಕ್ಷನ್ ಲೆಕ್ಕಾಚಾರವೇನು?

  'ಕಾಂತಾರ' 8ನೇ ದಿನದ ಕಲೆಕ್ಷನ್ ಲೆಕ್ಕಾಚಾರವೇನು?

  ರಜೆಯಲ್ಲಿ ಯಶಸ್ವಿಯಾಗಿ ಗಳಿಕೆ ಕಂಡ ಸಿನಿಮಾಗೆ ಮತ್ತೊಂದು ವೀಕೆಂಡ್ ಸಿಕ್ಕಿದೆ. ಇಂದಿನಿಂದ (8ನೇ ದಿನ) 'ಕಾಂತಾರ' ಎರಡನೇ ವೀಕೆಂಡ್ ಆರಂಭ ಆಗಿದೆ. ಈ ದಿನ ಕೂಡ ಅಡ್ವಾನ್ಸ್ ಬುಕಿಂಗ್‌ ಜೋರಾಗಿಯೇ ಇದೆ ಅನ್ನೋ ಟಾಕ್ ಇದೆ. ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, 'ಕಾಂತಾರ' 8ನೇ ದಿನ ಸುಮಾರು 5 ರಿಂದ 5.50 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ.

  ಒಂದು ವಾರದ 'ಕಾಂತಾರ' ಕಲೆಕ್ಷನ್ ಎಷ್ಟು?

  ಒಂದು ವಾರದ 'ಕಾಂತಾರ' ಕಲೆಕ್ಷನ್ ಎಷ್ಟು?

  ಈ ಒಂದು ವಾರದಲ್ಲಿ 'ಕಾಂತಾರ' ಸಿನಿಮಾ 50 ಕೋಟಿ ರೂಪಾಯಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ವಿಶ್ವದಾದ್ಯಂತ ಸಿನಿಮಾದ ಕಲೆಕ್ಷನ್ 55 ಕೋಟಿ ರೂ. ಗಳಿಸಿದ್ದು, ಭಾರತದಲ್ಲಿ ಸುಮಾರು 44 ಕೋಟಿ ರೂ. ಗಳಿಸಿರಬಹುದೆಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ. ಈ ಏಳು ದಿನಗಳ ಒಟ್ಟು ಗಳಿಕೆಯ ಅಂದಾಜು ಲೆಕ್ಕಾಚಾರ ಹೀಗಿದೆ.

  'ಕಾಂತಾರ' ಏಳು ದಿನಗಳ ಕಲೆಕ್ಷನ್ ಹೀಗಿದೆ

  ಮೊದಲ ದಿನ ₹4.00 ಕೋಟಿ (ಅಂದಾಜು)
  2ನೇ ದಿನ ₹6.50 ಕೋಟಿ (ಅಂದಾಜು)
  3ನೇ ದಿನ ₹8.00 ಕೋಟಿ (ಅಂದಾಜು)
  4ನೇ ದಿನ ₹4.50 ಕೋಟಿ (ಅಂದಾಜು)
  5ನೇ ದಿನ ₹6.30 ಕೋಟಿ (ಅಂದಾಜು)
  6ನೇ ದಿನ ₹8.00 ಕೋಟಿ (ಅಂದಾಜು)
  7ನೇ ದಿನ ₹5.50 ಕೋಟಿ (ಅಂದಾಜು)

  ಒಟ್ಟು ₹42.80 ಕೋಟಿ (ಅಂದಾಜು)

  2ನೇ ವೀಕೆಂಡ್ ಕಲೆಕ್ಷನ್ ಲೆಕ್ಕಾಚಾರವೇನು?

  2ನೇ ವೀಕೆಂಡ್ ಕಲೆಕ್ಷನ್ ಲೆಕ್ಕಾಚಾರವೇನು?

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ 'ಕಾಂತಾರ' ಓಟ ಮುಂದುವರೆಸಿದೆ. ಮೂಲಗಳ ಪ್ರಕಾರ, ವಿಶ್ವದಾದ್ಯಂತ ₹55 ಕೋಟಿ, ಭಾರತದಲ್ಲಿ ₹42.80 ಕೋಟಿ ರೂ. ಗಳಿಸಿದೆ. ಹಾಗೇ 2ನೇ ವೀಕೆಂಡ್ ಮುಗಿಯುವ ಹೊತ್ತಿಗೆ 'ಕಾಂತಾರ' ಸಿನಿಮಾದ ಕಲೆಕ್ಷನ್ ₹60 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಂದ್ಹಾಗೆ ಇದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ. ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಕಲೆಕ್ಷನ್ ಲೆಕ್ಕಾಚಾರವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

  2 ದಿನಗಳಲ್ಲಿ 'ಕಾಂತಾರ' ತಂಡದಿಂದ ಮತ್ತೊಂದು ಸಿಹಿ ಸುದ್ದಿ: ಪ್ಯಾನ್ ಇಂಡಿಯಾ ರಿಲೀಸ್‌ಗೆ ಸ್ಕೆಚ್! 2 ದಿನಗಳಲ್ಲಿ 'ಕಾಂತಾರ' ತಂಡದಿಂದ ಮತ್ತೊಂದು ಸಿಹಿ ಸುದ್ದಿ: ಪ್ಯಾನ್ ಇಂಡಿಯಾ ರಿಲೀಸ್‌ಗೆ ಸ್ಕೆಚ್!

  English summary
  Rishab Shetty Starrer Kantara Movie Box Office Day 7 Collection And Day 8 Prediction, Know More.
  Friday, October 7, 2022, 14:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X