ಅಬ್ಬಾ..! ಆ ಘಟನೆ ಮರೆಯೋಕಾಗಲ್ಲ: ರೋಮಾಂಚನಕಾರಿ ವಿಷಯ ಬಿಚ್ಚಿಟ್ಟ ಕಾಂತಾರ ಚಿತ್ರತಂಡ

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಸಪ್ಟೆಂಬರ್ 30 ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಟಿಕೆಟ್‌ ಬುಕ್ಕಿಂಗ್‌ ಕೂಡ ಆರಂಭವಾಗಿದೆ.

ಟ್ರೈಲರ್‌ನಿಂದಲೇ ಕುತೂಹಲ ಕೆರಳಿಸಿರುವ 'ಕಾಂತಾರ' ಚಿತ್ರದದ ಬಗ್ಗೆ ಪ್ರೇಕ್ಷಕರಿಗೆ ಬಹು ನಿರೀಕ್ಷೆಯಿದೆ. 'ಕಾಂತಾರ 'ಇದೊಂದು ದಂಥಕತೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದ್ದು, ನೋಡುಗರ ಕುತೂಹಲವನ್ನು ಹೆಚ್ಚಿಸಿದೆ. 'ಕಾಂತಾರ' ಚಿತ್ರದ ಮೇಕಿಂಗ್‌ ವಿಡಿಯೋಗಳನ್ನು ಈಗಾಗಲೇ ಹೊಂಬಾಳೆ ಫಿಲ್ಮ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡಲಾಗಿದ್ದು, ನೋಡುಗರ ಮೈನವಿರೇಳಿಸುವಂತಿದೆ.

ಅರವಿಂದ್​ ಕಶ್ಯಪ್​ ಛಾಯಾಗ್ರಹಣ ಹಾಗೂ ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ ಚಿತ್ರದ ಅದ್ಧೂರಿತನವನ್ನು ದುಪ್ಪಟ್ಟು ಮಾಡಿದೆ. 'ಕಾಂತಾರ' ಚಿತ್ರದ ಚಿತ್ರೀಕರಣ ವೇಳೆ ನಡೆದ ಘಟನೆಯನ್ನು ಚಿತ್ರತಂಡ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ.

ಫಿಲ್ಮಿಬೀಟ್‌ ಕನ್ನಡದ ಜೊತೆ ಪ್ರಕಾಶ್ ತುಮಿನಾಡ್ ಮಾತು

ಫಿಲ್ಮಿಬೀಟ್‌ ಕನ್ನಡದ ಜೊತೆ ಪ್ರಕಾಶ್ ತುಮಿನಾಡ್ ಮಾತು

'ಕಾಂತಾರ' ಚಿತ್ರದ ಬಗ್ಗೆ ನಟ ಹಾಗೂ ಚಿತ್ರಕಥೆಗಾರ ಪ್ರಕಾಶ್ ತುಮಿನಾಡ್ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ. 'ಕಾಂತಾರ'ದಲ್ಲಿ ನಿಜವಾದ ಭೂತ ಕೋಲ ಹೇಗೆ ಶಿಸ್ತಿನಿಂದ ನಡೆಯುತ್ತದೆ ಹಾಗೆ ನಡೆಸಲಾಗಿದೆ. ಮುಖಕ್ಕೆ ಬಣ್ಣ ಹಾಕುವುದಕ್ಕೂ ಒಂದು ವಿಚಾರಗಳಿರುತ್ತದೆ. ಸುಮ್ಮನೆ ಬಣ್ಣ ಹಾಕಲು ಆಗುವುದಿಲ್ಲ. ಅದರ ಹಿಂದಿನ ಅರ್ಥ ತಿಳಿದುಕೊಂಡು ಅದನ್ನು ರಿಷಬ್‌ ಅನುಸರಿಸಿ ಬಣ್ಣ ಹಚ್ಚಿದ್ದಾರೆ. ಅದರ ಬಗ್ಗೆ ರಿಷಬ್‌ ಅವರು ಆಳವಾಗಿ ತಿಳಿದುಕೊಂಡು ಬಳಿಕ ಅದನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದಿದ್ದಾರೆ.

ಅಂದುಕೊಂಡಿರುವುದನ್ನು ರೀಚ್‌ ಆಗಿದ್ದೇವೆ

ಅಂದುಕೊಂಡಿರುವುದನ್ನು ರೀಚ್‌ ಆಗಿದ್ದೇವೆ

ಇನ್ನು ಕಂಬಳ ಆಗಿರಬಹುದು, ಭೂತ ಕೋಲ ಆಗಿರಬಹುದು ಅದರ ಬಗ್ಗೆ ತಿಳಿದವರ ಜೊತೆ ಕೇಳಿಕೊಂಡು ಮಾಡಲಾಗಿದೆ. ನಾವು ಕಥೆ ಬರೆಯುವಾಗ ಊಹಿಸಿದ ರೀತಿಗಿಂತ ಬೇರೆ ಲೆವೆಲ್‌ನಲ್ಲಿ 'ಕಾಂತಾರ'ವನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದ ಮೂಲಕ ದೈವ ಎನ್ನುವ ಶಕ್ತಿ ದಕ್ಷಿಣ ಕನ್ನಡದವರಿಗೆ ಮಾತ್ರವಲ್ಲ ಎಲ್ಲರಿಗೂ ಅನುಭವವಾಗುತ್ತದೆ. ಈ ಚಿತ್ರವನ್ನು ಮಾಡುವಾಗ ನಾವು ಏನು ಕೇಳಿದ್ದೇವು ಅದರ ದುಪ್ಪಟ್ಟು ನಮಗೆ ಸಿಗುತ್ತಾ ಹೋಗಿದೆ. ಒಟ್ಟಾರೆ ನಾವು ಸಿನಿಮಾ ಮಾಡುವಾಗ ಏನು ಅಂದುಕೊಂಡಿದ್ದೇವು, ಅದನ್ನು ರೀಚ್‌ ಆಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಕೊನೆಯ 10-15 ನಿಮಿಷದ ಎಲ್ಲರನ್ನೂ ಕಾಡುತ್ತದೆ

ಸಿನಿಮಾದ ಕೊನೆಯ 10-15 ನಿಮಿಷದ ಎಲ್ಲರನ್ನೂ ಕಾಡುತ್ತದೆ

'ಕಾಂತಾರ' ಚಿತ್ರತಂಡ ಶನಿಲ್‌ ಗುರು ಕೂಡ ಚಿತ್ರದ ಬಗ್ಗೆ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ. 'ಕಾಂತಾರ' ಸಿನಿಮಾ ಒಂದು ಭಾಗದ ಸಂಸ್ಕೃತಿಯನ್ನು ಇಟ್ಟುಕೊಂಡು ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಎಲ್ಲ ರೀತಿಯ ವಿಚಾರಗಳನ್ನು ಈ ಚಿತ್ರದಲ್ಲಿ ಕವರ್‌ ಮಾಡಲಾಗಿದೆ. ಸಿನಿಮಾ ನೋಡಿ ಪ್ರೇಕ್ಷಕನು ಹೊರಬರುವಾಗ ಒಂದು ದೈವಿಕ ಅನುಭವ ಪ್ರೇಕ್ಷಕನನ್ನು ಕಾಡುತ್ತದೆ. ಚಿತ್ರ ನೋಡಿ ಹೊರಬಂದವರು ಭಾವುಕರಾಗುತ್ತಾರೆ. ಈ ಚಿತ್ರದ ಕೊನೆಯ ದೃಶ್ಯ ನೋಡಿ ನನಗಾದ ಅನುಭವನ್ನು ನಾನು ಹೇಳುತ್ತಿದ್ದೇನೆ. ಸಿನಿಮಾದ ಕೊನೆಯ 10-15 ನಿಮಿಷದ ಎಲ್ಲರನ್ನೂ ಕಾಡುತ್ತದೆ. ಯಾಕೆಂದರೆ ಅದು ಅಷ್ಟರ ಮಟ್ಟಿಗೆ ದೈವಿಕ ಅನುಭವ ನೀಡುತ್ತದೆ ಎಂದು ಶನಿಲ್‌ ಹೇಳಿದ್ದಾರೆ.

ಅದೃಷ್ಟವಶಾತ್‌ ಅವರ ಪಕ್ಕದಲ್ಲೇ ಕ್ಯಾಮರಾ ಬಿತ್ತು

ಅದೃಷ್ಟವಶಾತ್‌ ಅವರ ಪಕ್ಕದಲ್ಲೇ ಕ್ಯಾಮರಾ ಬಿತ್ತು

ಇನ್ನು ಚಿತ್ರೀಕಣದ ವೇಳೆ ಒಂದು ಕ್ಯಾಮರವನ್ನು ಹಿಂದಿನ ದಿನ ತರಲಾಗಿತ್ತು. ರೋಪ್‌ನಲ್ಲಿ ಕ್ಯಾಮರಾ ಹಾಕಿ ಕಂಬಳ ಶೂಟಿಂಗ್‌ ಮಾಡಲಾಗುತ್ತಿತ್ತು. ಈ ವೇಳೆ ರೋಪ್‌ ಜಾರಿ ಕ್ಯಾಮರಾ ಸ್ಟೀಡ್‌ ಆಗಿ ಬಂದು ಬೀಳುತಿತ್ತು. ಅಲ್ಲಿ ಒಬ್ಬರು ನಿಂತು ನೋಡುತ್ತಿದ್ದರು ಆ ದೃಶ್ಯ ನೋಡಿ ನಾವು ಕಿರುಚಿದೆವು, ಆ ಸದ್ದಿಗೆ ಆ ವ್ಯಕ್ತಿ ತಿರುಗಿ ನೋಡಿದ್ರು, ಅದೃಷ್ಟವಶಾತ್‌ ಅವರ ಪಕ್ಕದಲ್ಲೇ ಕ್ಯಾಮರಾ ಬಿತ್ತು ಇಲ್ಲ ಅಂದಿದ್ರೆ ಕ್ಯಾಮರಾ ಅವರ ತಲೆ ಮೇಲೆ ಬೀಳುತಿತ್ತು ಎಂದು ಕಾಂತಾರ ಶೂಟಿಂಗ್‌ ವೇಳೆ ನಡೆದ ಆ ಘಟನೆ ಮರೆಯಲು ಆಗಲ್ಲ ಎಂದಿದ್ದಾರೆ. 'ಕಾಂತಾರ' ಚಿತ್ರದಲ್ಲಿ ರಿಷಬ್‌ ಶೆಟ್ಟಿ ವಿವಿಧ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಂಬಳ, ಭೂತಕೋಲ ಸೇರಿದಂತೆ ಕರಾವಳಿಯ ಆಚರಣೆಗಳನ್ನು ಚಿತ್ರದ ಪ್ರಮುಖ ವಸ್ತುವಾಗಿಸಿಕೊಳ್ಳಲಾಗಿದ್ದು, ರಿಷಬ್‌ ಶೆಟ್ಟಿ ಈ ವಿಚಾರಗಳ ಬಗ್ಗೆ ಸತತ ಅಧ್ಯಾಯನ ಮಾಡಿ ಪಾತ್ರನಿರ್ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ನಟ ಕಿಶೋರ್‌, ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Sandalwood Actor Rishab Shetty starrer Kantara movie team share their shooting experience with filmibeat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X