For Quick Alerts
  ALLOW NOTIFICATIONS  
  For Daily Alerts

  ವಿದೇಶಗಳ ಗಳಿಕೆಯಲ್ಲೇ ಬಜೆಟ್ ಮೇಲೆ ಲಾಭ: 'ಕಾಂತಾರ' ಓವರ್‌ಸೀಸ್‌ ಕಲೆಕ್ಷನ್‌ನ ಪೈಸಾ ಪೈಸಾ ಲೆಕ್ಕ ಇಲ್ಲಿದೆ!

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲೂ ಸಖತ್ ಸದ್ದು ಮಾಡ್ತಿದೆ. ಈ ಹಿಂದೆ ಕನ್ನಡ ಮತ್ಯಾವುದೇ ಚಿತ್ರಕ್ಕೆ ಸಿಗದ ರೆಸ್ಪಾನ್ಸ್ ಕರಾವಳಿ ಮಣ್ಣಿನ ಈ ಚಿತ್ರಕ್ಕೆ ಸಿಕ್ಕಿದೆ. ಕೆಲವೆಡೆ ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದರು. ಓವರ್‌ಸೀಸ್‌ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ.

  ಮೀಡಿಯಂ ಬಜೆಟ್ ಕನ್ನಡ ಸಿನಿಮಾವೊಂದು ದೇಶ ವಿದೇಶಗಳಲ್ಲಿ ದರ್ಬಾರ್ ನಡೆಸುತ್ತಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ ಪ್ರದರ್ಶನ ಕಂಡಿವೆ. ಆದರೆ ಎಲ್ಲಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವುದು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿರುವುದು 'ಕಾಂತಾರ' ಸಿನಿಮಾ. ಆಸ್ಟ್ರೇಲಿಯಾ, ಅಮೇರಿಕಾ, ಯುಎಇ ದೇಶದ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ. 20 ವರ್ಷಗಳ ಹಿಂದೆ ಕನ್ನಡ ಸಿನಿಮಾವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಆದರೆ ಈಗ ಕನ್ನಡ ಸಿನಿಮಾಗಳು ಕೋಟಿ ಕೋಟಿ ಕೊಳ್ಳೆ ಹೊಡೀತಿವೆ.

  ಮೂಢನಂಬಿಕೆ ಬಿತ್ತುತ್ತಿದೆ: 'ಕಾಂತಾರ' ವಿರುದ್ಧ ಟೀಕೆಗೆ ರಿಷಬ್ ಖಡಕ್ ಉತ್ತರಮೂಢನಂಬಿಕೆ ಬಿತ್ತುತ್ತಿದೆ: 'ಕಾಂತಾರ' ವಿರುದ್ಧ ಟೀಕೆಗೆ ರಿಷಬ್ ಖಡಕ್ ಉತ್ತರ

  'ಕಾಂತಾರ' ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿದ್ದು, ದೊಡ್ಡಮಟ್ಟದಲ್ಲಿ ವಿದೇಶಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಹಕಾರಿ ಆಯಿತು. ವಿದೇಶಗಳಲ್ಲಿ ಇರುವ ಪರಭಾಷಿಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಸಹಜವಾಗಿಯೇ ಕಲೆಕ್ಷನ್ ಹೆಚ್ಚಾಗಿದೆ.

  30 ದಿನಕ್ಕೆ ₹27 ಕೋಟಿ ಕಲೆಕ್ಷನ್

  30 ದಿನಕ್ಕೆ ₹27 ಕೋಟಿ ಕಲೆಕ್ಷನ್

  ಸೆಪ್ಟೆಂಬರ್‌ 30ರಂದು ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ದೇಶ ವಿದೇಶಗಳಲ್ಲಿ 'ಕಾಂತಾರ' ಸಿನಿಮಾ ರಿಲೀಸ್ ಆಗಿತ್ತು. ಎಲ್ಲಾಕಡೆ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 15 ದಿನಗಳ ನಂತರ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ತೆರೆಗಪ್ಪಳಿಸಿತ್ತು. 30 ದಿನಗಳಲ್ಲಿ ಓವರ್‌ಸೀಸ್‌ ಮಾರ್ಕೆಟ್‌ನಲ್ಲಿ ಸಿನಿಮಾ 27 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

  ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!

  ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?

  ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?

  'ಕಾಂತಾರ' ಸಿನಿಮಾ ಯಾವ ದೇಶದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದನ್ನು ನೋಡುವುದಾದರೆ..

  ಉತ್ತರ ಅಮೇರಿಕಾ- 14.7 ಕೋಟಿ ರೂ.
  ಆಸ್ಟ್ರೇಲಿಯಾ- 1.92 ಕೋಟಿ ರೂ.
  ನ್ಯೂಜಿಲೆಂಡ್- 10.8 ಕೋಟಿ ರೂ.
  ಯುಕೆ- 1.19 ಕೋಟಿ ರೂ.
  ಯುಎಇ- 5 ಕೋಟಿ ರೂ.
  ಇತರೆ ದೇಶಗಳಲ್ಲಿ- 4 ಕೋಟಿ ರೂ.

  ಒಟ್ಟು- 26.92 ಕೋಟಿ ರೂ.

  ಶೀಘ್ರದಲ್ಲೇ ₹300 ಕೋಟಿ ಕ್ಲಬ್

  ಶೀಘ್ರದಲ್ಲೇ ₹300 ಕೋಟಿ ಕ್ಲಬ್

  ಈಗಾಗಲೇ ಸಿನಿಮಾ ವಿಶ್ವದಾದ್ಯಂತ 280 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ ₹300 ಕೋಟಿ ಕ್ಲಬ್ ಸೇರುವ ಸುಳಿವು ಸಿಗುತ್ತಿದೆ. ತಿಂಗಳು ಕಳೆದರೂ ವಿದೇಶಗಳಲ್ಲಿ ಕನ್ನಡ ಸಿನಿಮಾವೊಂದು ಈ ರೀತಿ ಸದ್ದು ಮಾಡುತ್ತಿರುವುದು ಇದೇ ಮೊದಲು. 'ಕಾಂತಾರ' ಸಿನಿಮಾ ನಿಜಕ್ಕೂ ತೆರೆಮೇಲೆ ಮ್ಯಾಜಿಕ್ ಮಾಡಿದೆ.

  ಹಿಂದಿ ಬೆಲ್ಟ್‌ನಲ್ಲೂ ಭರ್ಜರಿ ಕಲೆಕ್ಷನ್

  ಹಿಂದಿ ಬೆಲ್ಟ್‌ನಲ್ಲೂ ಭರ್ಜರಿ ಕಲೆಕ್ಷನ್

  ತೆಲುಗು, ಹಿಂದಿ ಹಾಗೂ ಮಲಯಾಳಂ ವರ್ಷನ್ 'ಕಾಂತಾರ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ರಿಲೀಸ್ ಆಗಿ 15 ದಿನ ಕಳೆದರೂ ಹೊರ ರಾಜ್ಯಗಳಲ್ಲಿ ಹೌಸ್‌ಫುಲ್ ಆಗುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಆಂಧ್ರ, ತೆಲಂಗಾಣದ ಕಲೆಕ್ಷನ್ ಕೂಡ ಕೂಡ 40 ಕೋಟಿ ದಾಟಿದೆ. ಕೇರಳದಲ್ಲಿ 10 ಕೋಟಿ ಸಮೀಪದಲ್ಲಿದೆ. ಒಟ್ಟಾರೆ ಎಲ್ಲೆಲ್ಲೂ 'ಕಾಂತಾರ' ಮೇನಿಯಾ ಜೋರಾಗಿದೆ.

  English summary
  Kantara Overseas Box Office Collection Report until 30th October. Kantara is having a phenomenal run in the theatres in all languages. Know More.
  Tuesday, November 1, 2022, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X