For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಫಿಲ್ಮ್ಸ್ ಬ್ರೇಕಿಂಗ್ ನ್ಯೂಸ್: ರಿಷಬ್ ಶೆಟ್ಟಿ 'ಕಾಂತಾರ' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್!

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಬಹುನಿರೀಕ್ಷಿತ ಚಿತ್ರದ ಅಫೀಷಿಯಲ್ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ. ಈ ಸುದ್ದಿ ಕೇಳಿ ಕನ್ನಡ ಸಿನಿರಸಿಕರು ಥ್ರಿಲ್ಲಾಗಿದ್ದಾರೆ.

  'KGF'- 2 ಸಿನಿಮಾ ರಿಲೀಸ್ ಸಂಭ್ರಮದಲ್ಲೇ ಹೊಂಬಾಳೆ ಸಂಸ್ಥೆಯ 'ಕಾಂತಾರ' ಹಾಗೂ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಟೀಸರ್‌ಗಳು ರಿಲೀಸ್ ಆಗಿತ್ತು. ಕರಾವಳಿಯ ಕಲರವ ಮೈಹೊತ್ತ 'ಕಾಂತಾರ' ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತುಳು ನಾಡಿನ ಜನರ ಬದುಕು, ಭಾಷೆ, ಸಂಸ್ಕೃತಿಯ ಸುತ್ತಾ 'ಕಾಂತಾರ' ಕಥೆಯನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಕಂಬಳ ಓಟವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಟ್ಟಿರುವಂತೆ ಕಾಣುತ್ತಿದೆ. ಇದೇ ಸೋಮವಾರ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದ್ದು, ಸೆಪ್ಟೆಂಬರ್ 30ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

  ಕಣ್ಮುಂದೆ 'ಪುಷ್ಪ' ಇದ್ದರೂ 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ?ಕಣ್ಮುಂದೆ 'ಪುಷ್ಪ' ಇದ್ದರೂ 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ?

  'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ 'ಕಾಂತಾರ ಚಿತ್ರಕ್ಕೆ ಅರವಿಂದ್. ಎಸ್‌. ಕಶ್ಯಪ್ ಛಾಯಾಗ್ರಹಣ ಇದೆ. ಅಜನೀಶ್ ಲೋಕನಾಥ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದು ಈಗಾಗಲೇ ಚಿತ್ರದ ಹಾಡೊಂದು ಸೂಪರ್ ಹಿಟ್ ಆಗಿದೆ.

  ದಸರಾಗೆ 'ಕಾಂತಾರ' ಸೋಲೊ ರಿಲೀಸ್

  ದಸರಾಗೆ 'ಕಾಂತಾರ' ಸೋಲೊ ರಿಲೀಸ್

  ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ದಸರಾ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಶೂಟಿಂಗ್ ತಡವಾದ ಕಾರಣ ರಿಲೀಸ್ ಡೇಟ್ ಪೋಸ್ಟ್‌ ಪೋನ್ ಅಗಿದೆ. ಇದೀಗ ಅದೇ ದಿನ ರಿಷಬ್ ಶೆಟ್ಟಿ 'ಕಾಂತಾರ' ಕಥೆ ಹೇಳಲು ಬರುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ 'ಮಾರ್ಟಿನ್‌' ವರ್ಸಸ್ 'ಕಾಂತಾರ' ಫೈಟ್ ನಡೆಯುತ್ತೆ ಅಂದುಕೊಳ್ಳಲಾಗಿತ್ತು. ಆದರೆ ಈಗ 'ಕಾಂತಾರ' ಸೋಲೊ ರಿಲೀಸ್ ಕನ್ಫರ್ಮ್ ಆಗಿದೆ. ಸೆಪ್ಟೆಂಬರ್ 5ರ ಬೆಳಗ್ಗೆ 11.45ಕ್ಕೆ ಅಫೀಷಿಯಲ್ ಟ್ರೈಲರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

  'ಕಾಂತಾರ': ಮಾಧುರ್ಯದ ಅಲೆಯ ಜೊತೆಗೆ ಸುಂದರ ದೃಶ್ಯ ಹೆಣಿಗೆ'ಕಾಂತಾರ': ಮಾಧುರ್ಯದ ಅಲೆಯ ಜೊತೆಗೆ ಸುಂದರ ದೃಶ್ಯ ಹೆಣಿಗೆ

  ಲಾಕ್‌ಡೌನ್‌ ಸಮಯದಲ್ಲಿ ಹಣೆದ ಕಥೆ

  ಲಾಕ್‌ಡೌನ್‌ ಸಮಯದಲ್ಲಿ ಹಣೆದ ಕಥೆ

  ಕೊರೊನಾ ಲಾಕ್‌ಡೌನ್‌ನಿಂದ ತಿಂಗಳುಗಟ್ಟಲೆ ಸಿನಿಮಾ ಶೂಟಿಂಗ್ ಬಂದ್ ಆಗಿ ಕಲಾವಿದರು, ತಂತ್ರಜ್ಞರು ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು. ಇದೇ ಸಮಯದಲ್ಲಿ 'ಕಾಂತಾರ' ಕಥೆಯನ್ನು ರಿಷಬ್ ಸಿದ್ಧಪಡಿಸಿದ್ದರು. ವಿಜಯ್ ಕಿರಗಂದೂರು ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. 'ಕಾಂತಾರ' ಅಂದರೆ ನಿಗೂಢ ಕಾಡು ಎನ್ನುವ ಅರ್ಥ ಇದೆ. ಚಿತ್ರದಲ್ಲಿ ಪ್ರಕೃತಿ ಹಾಗೂ ಮನುಷ್ಯ ಸಂಘರ್ಷದ ಕಥೆ ಹೇಳಲಾಗಿದೆ.

  'ಸಿಂಗಾರ ಸಿರಿಯೆ' ಸಾಂಗ್ ಸೂಪರ್ ಹಿಟ್

  'ಸಿಂಗಾರ ಸಿರಿಯೆ' ಸಾಂಗ್ ಸೂಪರ್ ಹಿಟ್

  ಎರಡು ವಾರಗಳ ಹಿಂದೆ ಬಿಡುಗಡೆಯಾದ ಚಿತ್ರದ 'ಸಿಂಗಾರ ಸಿರಿಯೆ' ಸಾಂಗ್ ಸೂಪರ್ ಹಿಟ್ ಆಗಿದೆ. ಅಜನೀಸ್ ಟ್ಯೂನ್, ಪ್ರಮೋದ್ ಮರವಂತೆ ಲಿರಿಕ್ಸ್ ಸೊಗಸಾಗಿದ್ದು, ವಿಜಯ್ ಪ್ರಕಾಶ್ ಹಾಗೂ ಅನನ್ಯಾ ಭಟ್ ವಾಯ್ಸ್‌ನಲ್ಲಿ ಸಾಂಗ್ ಕಿಕ್ ಕೊಡ್ತಿದೆ. ಹಾಸ್ಯದ ಲೇಪನದೊಂದು ಹಾಡನ್ನು ಸೆರೆ ಹಿಡಿದಿರುವ ಪರಿ ಮಜವಾಗಿದೆ. ಈಗಾಗಲೇ ಸಾಂಗ್ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಗಮನ ಸೆಳೆದಿದೆ.

  ಬಹಳ ಅದ್ಧೂರಿ ಸಿನಿಮಾ 'ಕಾಂತಾರ'

  ಬಹಳ ಅದ್ಧೂರಿ ಸಿನಿಮಾ 'ಕಾಂತಾರ'

  ಕಡಿಮೆ ಬಜೆಟ್‌ನಲ್ಲಿ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ರಿಷಬ್ ಶೆಟ್ಟಿ ನಿಸ್ಸೀಮರು. ಆದರೆ ಈ ಬಾರಿ ಅವರ ಬೆನ್ನಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿಂತಿದೆ. ಹಾಗಾಗಿ ಸಿನಿಮಾ ಮೇಕಿಂಗ್, ಪ್ರಮೋಷನ್ ಎಲ್ಲವೂ ದೊಡ್ಡಮಟ್ಟದಲ್ಲಿದೆ. ಅಭಿಮಾನಿಗಳು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವಂತೆ ಹೇಳುತ್ತಿದ್ದಾರೆ. ಆದರೆ ರಿಷಬ್‌ ಶೆಟ್ಟಿಗೆ ಅಂತಹ ಆಲೋಚನೆ ಇದ್ದಂತಿಲ್ಲ.

  Recommended Video

  Jacqueline Fernandez| ಹಣಕ್ಕಾಗಿಯೇ ಸುಕೇಶ್‌ ಜೊತೆ ಸಂಬಂಧ ಬೆಳೆಸಿದ್ದ ಜಾಕ್ವೆಲಿನ್ | Filmibeat Kannada
  English summary
  Rishab Shetty's 'Kantara' Targets Dussehra 2022 For Release. Know MOre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X