ರಿಷಬ್ ಶೆಟ್ಟಿ ಪ್ರಕಾರ ಹರಿಪ್ರಿಯಾ ಮದುವೆಯಾಗುವ ಹುಡುಗ ಹೀಗಿರಬೇಕಂತೆ.!
ಕನ್ನಡ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ ಹಾಗೂ ಅದೃಷ್ಟದ ನಟಿ ಹರಿಪ್ರಿಯಾ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಸೌತ್ ಸಿನಿ ಇಂಡಸ್ಟ್ರಿಯ ಎಲ್ಲಾ ಭಾಷೆಯಲ್ಲೂ ಅಭಿನಯಸಿರುವ ಬಹುಭಾಷ ನಟಿ. ಹರಿಪ್ರಿಯಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 10 ವರ್ಷಕ್ಕಿಂತ ಹೆಚ್ಚಾಗಿದೆ.
2007ರಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಹರಿಪ್ರಿಯಾ ತಮ್ಮದೆ ವಿಭಿನ್ನ ಶೈಲಿಯ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇಂತಹ ಹರಿಪ್ರಿಯಾ ಬಗ್ಗೆ ಅಭಿಮಾನಿಗಳಲ್ಲಿ ಒಂದು ಕುತೂಹಲ ಕಾಡುತ್ತಿದೆ. ಹರಿಪ್ರಿಯಾ ಮದುವೆ ಯಾವಾಗ? ಹರಿಪ್ರಿಯಾ ಮದುವೆ ಆಗುವ ಹುಡುಗ ಯಾರು, ಹೇಗಿರಬೇಕು? ಹೀಗೆ ಒಂದಿಷ್ಟು ವಿಷ್ಯಗಳ ಬಗ್ಗೆ ತಿಳಿದುಕೊಳ್ಳುವ ಆಸೆ ಅಭಿಮಾನಿಗಳಲ್ಲಿದೆ.
ನಾಯಕಿಯರ ಮದುವೆ ವಿಚಾರವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡುವುದು ಹೊಸದೇನಲ್ಲ. ಹಾಗೆ ಪದೇ ಪದೇ ಮದುವೆ ಎಂಬ ಪ್ರಶ್ನೆ ನಟಿಮಣಿಯರಿಗೆ ಎದುರಾಗುವುದು ಸಾಮಾನ್ಯ. ಆದರೀಗ ಧಿಡೀರನೇ ಹರಿಪ್ರಿಯಾ ಮದುವೆ ವಿಚಾರ ಚರ್ಚಯಾಗ್ತಿದೆ. ಇದಕ್ಕೆ ಕಾರಣ ನಿರ್ದೇಶಕ, ನಟ ರಿಷಬ್ ಶೆಟ್ಟಿ.

ಹೌದು, ಹರಿಪ್ರಿಯಾ ಮದುವೆಯಾಗುವ ಹುಡುಗ ಹೇಗಿರಬೇಕು ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ. ರಿಷಬ್ ಪ್ರಕಾರ ಚಂದನವನದ ಚೆಲುವೆ ಹರಿಪ್ರಿಯಾ ಕೈ ಹಿಡಿಯುವ ಹುಡುಗ ಹರಿಪ್ರಿಯಾ ಅವರನ್ನು ತುಂಬಾ ಹೊಗಳುತ್ತಿರಬೇಕಂತೆ, ತುಂಬಾ ಮುದ್ದು ಮಾಡುಬೇಕು, ಸದಾ ಅವರ ಜೊತೆಯೆ ಇರಬೇಕು, ನೋಡೋಕೆ ಚೆನ್ನಾಗಿ ಇರಬೇಕು, ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿನೇ ಆಗುತ್ತೆ ಅಂತಾರೆ ರಿಷಬ್ ಶೆಟ್ಟಿ.
ಹೀಗೆ ಹರಿಪ್ರಿಯಾ ಗಂಡನಾಗುವ ವ್ಯಕ್ತಿಯ ಬಗ್ಗೆ ರಿಷಬ್ ಶೆಟ್ಟಿ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಶೆಟ್ಟರು ಹೇಳಿದನ್ನು ಕೇಳಿದ ನಂತರ ಅಭಿಮಾನಿಗಳಲ್ಲಿದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಇಬ್ಬರು ಉತ್ತಮ ಗಳೆಯರು. ರಿಕ್ಕಿ ಸಿನಿಮಾದ ಮೂಲಕ ಒಂದಾಗಿದ್ದ ಈ ಜೋಡಿ ಈಗ ಬೆಲ್ ಬಾಟಮ್ ಸಿನಿಮಾದಲ್ಲು ಕಮಾಲ್ ಮಾಡಿದೆ. ರಿಕ್ಕಿಯಲ್ಲಿ ಹರಿಪ್ರಿಯಾಗೆ ನಿರ್ದೇಶನ ಮಾಡಿದ್ದ ರಿಷಬ್, ಬೆಲ್ ಬಾಟಮ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.


Click it and Unblock the Notifications











