Exclusive: ಕಾಂತಾರ- 2 ಮುಹೂರ್ತ ಯಾವಾಗ? ಹೊಂಬಾಳೆ ಸಂಸ್ಥೆ ಚಿತ್ರತಂಡಕ್ಕೆ ಕೊಟ್ಟಿರುವ ಸೂಚನೆ ಏನು?

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಹಳೇ ಸುದ್ದಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸಂಚಲನ ಸೃಷ್ಟಿಸಿತ್ತು. ವಿದೇಶಗಳಲ್ಲಿ ಜನ ಕ್ಯೂ ನಿಂತು ಟಿಕೆಟ್ ಖರೀದಿಸುವಂತೆ ಮಾಡಿತ್ತು. ಸದ್ಯ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ರಿಷಬ್ ಸಿನಿಮಾ ಪ್ರೀ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ 'ಕಾಂತಾರ' ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸಿತ್ತು. ದಸರಾ ಸಂಭ್ರಮದಲ್ಲಿ ಧೂಳೆಬ್ಬಿಸಿತ್ತು. ರಿಷಬ್ ನಿರ್ದೇಶನ, ನಟನೆಗೆ ಪರಭಾಷಿಕರು ಬಹುಪರಾಕ್ ಎಂದಿದ್ದರು. ಮೊದಲಿಗೆ ಕನ್ನಡದಲ್ಲೇ ಸಿನಿಮಾ ಬಿಡುಗಡೆಯಾದರೂ ಬಳಿಕ ತಾನಾಗಿಯೇ ಪ್ಯಾನ್ ಇಂಡಿಯಾ ಸ್ವರೂಪ ಪಡೆದುಕೊಂಡಿತ್ತು. ತೆಲುಗು, ತಮಿಳು, ಹಿಂದಿ, ಮಲಯಾಳಂ, ತುಳು, ಇಂಗ್ಲೀಷ್ ಭಾಷೆಗಳಲ್ಲಿ ಡಬ್ ಆಗಿ ಸದ್ದು ಮಾಡಿತ್ತು. 'KGF' ಸರಣಿ ಬಳಿಕ ಮತ್ತೊಮ್ಮೆ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಾಯಿತು.

Rishab Shetty to begin Kantara - 2 in Nov end: Hombale Films notice to its Team Members

ಈಗಾಗಲೇ ಚಿತ್ರತಂಡ 'ಕಾಂತಾರ' ಪ್ರೀಕ್ವೆಲ್ ಘೋಷಿಸಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ'-2 ಸಿನಿಮಾ ಮೂಡಿ ಬರಲಿದೆ. ಮಂಗಳೂರಿನಲ್ಲಿ ಬೀಡುಬಿಟ್ಟು ರಿಷಬ್ ಶೆಟ್ಟಿ ಸಿನಿಮಾ ಕತೆ, ಚಿತ್ರಕತೆ ಫೈನಲ್ ಮಾಡಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ತಯಾರಿ ಶುರುವಾಗಿದೆ. ಈಗಾಗಲೇ ಹಾಡುಗಳ ಕಾನ್ಸೆಪ್ಟ್ ರೆಡಿಯಾಗಿದೆ. ಅಜನೀಶ್ ಲೋಕನಾಥ್ ಒಂದಷ್ಟು ಐಡಿಯಾಗಳನ್ನು ಕೊಟ್ಟಿದ್ದು ಶೀಘ್ರದಲ್ಲೇ ರೆಕಾರ್ಡಿಂಗ್ ಶುರುವಾಗಲಿದೆ.

ಇತ್ತೀಚೆಗೆ ಮ್ಯೂಸಿಕ್ ಮಾಂತ್ರಿಕ ಎ. ಆರ್ ರಹಮಾನ್ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಅಜನೀಶ್, ರಿಷಬ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಇಡೀ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದರು. ಮುಖ್ಯವಾಗಿ ಸಂಗೀತದ ಬಗ್ಗೆ ಹೆಚ್ಚು ಮಾತನಾಡಿದ್ದರು. ಈ ಬಗ್ಗೆ ಅಜನೀಶ್ ಲೋಕನಾಥ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

'ಕಾಂತಾರ' ಪ್ರೀಕ್ವೆಲ್ ಮುಹೂರ್ತ ಯಾವಾಗ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ವರ್ಷ ಮೇ, ಜೂನ್ ವೇಳೆಗೆ ಚಿತ್ರೀಕರಣ ಶುರು ಮಾಡಿ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಈ ಹಿಂದೆ ವಿಜಯ್ ಕಿರಗಂದೂರ್ ಹೇಳಿದ್ದರು. ಆದರೆ ಈವರೆಗೆ ಸಿನಿಮಾ ಸೆಟ್ಟೇರಿಲ್ಲ. ನವೆಂಬರ್ ಕೊನೆಗೆ ಸಿನಿಮಾ ಮುಹೂರ್ತ ಎನ್ನುವ ಮಾತುಗಳು ಕೇಳಿಬರ್ತಿದೆ. ಡಿಸೆಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಹೊಂಬಾಳೆ ಸಂಸ್ಥೆ ಇದೇ ವಿಚಾರವನ್ನು ಚಿತ್ರತಂಡದ ಸದಸ್ಯರಿಗೆ ಹೇಳಿದೆಯಂತೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನವೆಂಬರ್ 27ಕ್ಕೆ ಸಿನಿಮಾ ಮುಹೂರ್ತ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ.

Rishab Shetty to begin Kantara - 2 in Nov end: Hombale Films notice to its Team Members

ನವೆಂಬರ್ ಅಂತ್ಯಕ್ಕೆ 'ಕಾಂತಾರ' ಪ್ರೀಕ್ವೆಲ್ ಚಿತ್ರೀಕರಣ ಆರಂಭ. ಎಲ್ಲರೂ ಸಿದ್ಧರಾಗಿರಿ ಎಂದು ಹೊಂಬಾಳೆ ಸಂಸ್ಥೆ ಸೂಚನೆ ನೀಡಿದೆಯಂತೆ. ಆದರೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇನ್ನು ಸಿಕ್ಕಿಲ್ಲ. ಸದ್ಯ 'ಸಲಾರ್' ಸಿನಿಮಾ ರಿಲೀಸ್ ಕೆಲಸಗಳಲ್ಲಿ ಹೊಂಬಾಳೆ ಸಂಸ್ಥೆ ಬ್ಯುಸಿಯಾಗಿದೆ. ಡಿಸೆಂಬರ್ 1ಕ್ಕೆ 'ಸಲಾರ್' ಟ್ರೈಲರ್ ಅನಾವರಣವಾಗಲಿದೆ. 22ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.

'ಕಾಂತಾರ' ಚಿತ್ರದಲ್ಲಿ ಕಾಡುಬೆಟ್ಟು ಶಿವನ ಕತೆಯನ್ನು ನೋಡಿದ್ದೇವೆ. ಪ್ರೀಕ್ವೆಲ್‌ನಲ್ಲಿ ಆತನ ತಂದೆ ಕತೆ ತೆರೆಗೆ ಬರುವ ಸಾಧ್ಯತೆಯಿದೆ. ರಿಷಬ್ ಕೂಡ ಗಡ್ಡ ಬಿಟ್ಟು ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಬಹುತೇಕ ಅದೇ ತಂಡ ಮುಂದಿನ ಚಿತ್ರಕ್ಕೂ ಕೆಲಸ ಮಾಡಲಿದೆ. ಭಾರೀ ಬಜೆಟ್‌ನಲ್ಲೇ ಸಿನಿಮಾ ನಿರ್ಮಾಣವಾಗಲಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ತುಳು ಭಾಷೆಗೂ ಸಿನಿಮಾ ಡಬ್ ಆಗಿ ಬಂದರೆ ಅಚ್ಚರಿಪಡಬೇಕಿಲ್ಲ. ಈ ಬಾರಿ ಚಿತ್ರವನ್ನು ಆಸ್ಕರ್‌ ರೇಸ್‌ಗೆ ಕೊಂಡೊಯ್ಯುವ ಪ್ರಯತ್ನವೂ ನಡೀತಿದೆ. ಕಳೆದ ಬಾರಿ ಚಿತ್ರವನ್ನು 'ಕಾಂತಾರ' ರೇಸ್‌ಗೆ ಕೊಂಡೊಯ್ಯಲು ಸಮಯಾವಕಾಶ ಸಿಗಲಿಲ್ಲ. ಸರಣಿಯ ಮುಂದಿನ ಚಿತ್ರವನ್ನು ಅಂತರಾಷ್ಟ್ರೀಯಮಟ್ಟದ ಪ್ರಶಸ್ತಿ ವೇದಿಕೆಗೆ ಕೊಂಡೊಯ್ಯುವ ಬಗ್ಗೆ ಮೊದಲೇ ತಯಾರಿ ನಡೆಸುತ್ತೇವೆ ಎಂದು ನಿರ್ಮಾಪಕರು ಹೇಳಿದ್ದರು.

More from Filmibeat

English summary
Kantara 2 Shooting Start Date is scheduled to end of November: Hombale Films to Staff:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X