For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಬರ್ತಡೇಗೆ ಮುಂಚೆಯೇ ಬ್ಲಾಸ್ಟಿಂಗ್ ಸುದ್ದಿ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಈ ವರ್ಷದ ಹುಟ್ಟುಹಬ್ಬ ಅಷ್ಟು ಅದ್ಧೂರಿಯಾಗಿ ನಡೆಯದಿದ್ದರೂ ಅಭಿಮಾನಿಗಳಿಗೆ ಖುಷಿ ಮೇಲೆ ಖುಷಿ ಸಂಗತಿಗಳು ಸಿಕ್ತಾನೆ ಇದೆ. ಅದಾಗಲೇ ಸೆಂಚುರಿ ಸ್ಟಾರ್ ನಟಿಸುತ್ತಿರುವ 123ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

  ಶಿವಣ್ಣನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ

  ಭರ್ಜರಿ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಚಿತ್ರದ ಹೆಸರು ಜುಲೈ 12 ರಂದು ಪ್ರಕಟವಾಗಲಿದೆ. ಇದೀಗ, ಮತ್ತೊಂದು ಬ್ಲಾಸ್ಟಿಂಗ್ ಸುದ್ದಿ ಹೊರಬಿದ್ದಿದೆ. 123ನೇ ಚಿತ್ರದ ಬಗೆಗಿನ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಏಕಾಏಕಿ 126ನೇ ಸಿನಿಮಾದ ಅಪ್‌ಡೇಟ್ ಸಿಕ್ಕಿದೆ. ಹೌದು, ಶಿವಣ್ಣ ನಟನೆಯಲ್ಲಿ ಬರಲಿರುವ ಮತ್ತೊಂದು ಹೊಸ ಸಿನಿಮಾ ಪ್ರಕಟವಾಗಿದೆ. ಮುಂದೆ ಓದಿ...

  ನಿಮಗೆಷ್ಟು ಬೇಸರ ಆಗಿದ್ಯೋ ನನಗೂ ಅಷ್ಟೇ ಆಗಿದೆ: ಅಭಿಮಾನಿಗಳಲ್ಲಿ ಶಿವಣ್ಣ ವಿಶೇಷ ಮನವಿ ನಿಮಗೆಷ್ಟು ಬೇಸರ ಆಗಿದ್ಯೋ ನನಗೂ ಅಷ್ಟೇ ಆಗಿದೆ: ಅಭಿಮಾನಿಗಳಲ್ಲಿ ಶಿವಣ್ಣ ವಿಶೇಷ ಮನವಿ

  ಶಿವಣ್ಣ ಜೊತೆ ರಿಷಭ್ ಶೆಟ್ಟಿ ಸಿನಿಮಾ

  ಶಿವಣ್ಣ ಜೊತೆ ರಿಷಭ್ ಶೆಟ್ಟಿ ಸಿನಿಮಾ

  'ಭಜರಂಗಿ-2' ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಮಿಲ್ಟನ್ ಜೊತೆ ಹೊಸ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಈ ನಡುವೆ 126ನೇ ಸಿನಿಮಾದ ಕುರಿತು ಹೊಸ ಸುದ್ದಿ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಶಿವಣ್ಣನ 126ನೇ ಚಿತ್ರಕ್ಕೆ ರಿಷಭ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರಂತೆ.

  ಜಯಣ್ಣ ಜೊತೆ ಮತ್ತೆ ಸಿನಿಮಾ

  ಜಯಣ್ಣ ಜೊತೆ ಮತ್ತೆ ಸಿನಿಮಾ

  'ಭಜರಂಗಿ-2' ಚಿತ್ರ ನಿರ್ಮಾಣ ಮಾಡಿರುವುದು ಜಯಣ್ಣ-ಭೋಗೇಂದ್ರ. ಈ ನಿರ್ಮಾಪಕರ ಜೊತೆ ಮತ್ತೊಂದು ಸಿನಿಮಾ ಮಾಡಲು ಕರುನಾಡ ಚಕ್ರವರ್ತಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ಹುಟ್ಟುಹಬ್ಬದ ದಿನ ಸಿಗುವ ಸಾಧ್ಯತೆ ಇದೆ.

  ಶಿವಣ್ಣ 123: ಫಸ್ಟ್ ಲುಕ್ ಬಂತು, ಟೈಟಲ್ ಬಗ್ಗೆ ಹೆಚ್ಚಿದ ಕುತೂಹಲಶಿವಣ್ಣ 123: ಫಸ್ಟ್ ಲುಕ್ ಬಂತು, ಟೈಟಲ್ ಬಗ್ಗೆ ಹೆಚ್ಚಿದ ಕುತೂಹಲ

  ಎಸ್‌ಆರ್‌ಕೆ ಮಾಡಬೇಕಿದೆ

  ಎಸ್‌ಆರ್‌ಕೆ ಮಾಡಬೇಕಿದೆ

  ಶಿವಣ್ಣ ಸಂಬಂಧಿ ಲಕ್ಕಿ ಗೋಪಾಲ್ ಜೊತೆ 'ಎಸ್‌ಆರ್‌ಕೆ' ಸಿನಿಮಾ ಮಾಡಬೇಕಿದೆ. ಈ ಸಿನಿಮಾ ಅಧಿಕೃತವಾಗಿ ಆರಂಭವಾಗಿತ್ತು. ಕಿರಣ್ ಕುಮಾರ್ ಸಿ ಗೌಡ ಮತ್ತು ಅರವಿಂದ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಅಪ್‌ಡೇಟ್ ಸಹ ಸಿಗಬೇಕಿದೆ.

  ಹರ್ಷ ಜೊತೆ ಇನ್ನೊಂದು ಚಿತ್ರ

  ಹರ್ಷ ಜೊತೆ ಇನ್ನೊಂದು ಚಿತ್ರ

  ಹರ್ಷ ಜೊತೆ ನಟ ಶಿವರಾಜ್ ಕುಮಾರ್ ಇನ್ನೊಂದು ಸಿನಿಮಾ ಮಾಡಲಿದ್ದಾರೆ. ಭಜರಂಗಿ 2 ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಾಜೆಕ್ಟ್ ಆದ್ಮೇಲೆ ಶಿವಣ್ಣ ಮತ್ತೊಮ್ಮೆ ಹರ್ಷ ಜೊತೆ ಕೈ ಜೋಡಿಸಿದ್ದು, ಆ ಚಿತ್ರಕ್ಕೆ 'ವೇದ' ಎಂದು ಹೆಸರಿಡಲಾಗಿದೆ. ಇದು ಶಿವಣ್ಣನ 125ನೇ ಸಿನಿಮಾ.

  English summary
  Actor-Director Rishab Shetty to direct Shiva Rajkumar's 126th film; produced by Jayanna Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X