For Quick Alerts
  ALLOW NOTIFICATIONS  
  For Daily Alerts

  'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬರ್ತಿದ್ದಾರೆ ರಿಷಬ್: ಏನಿದು ಶೆಟ್ರಾ ಹೊಸ ಕಥೆ?

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಗಿರಿಕಥೆ ಹೇಳಲು ತಯಾರಿ ನಡೆಸುತ್ತಿದ್ದಾರೆ. ರುದ್ರಪ್ರಯಾಗ ಸಿನಿಮಾಗೆ ನಿರ್ದೇಶನ ಮಾಡಲು ಸಜ್ಜಾಗಿದ್ದ ರಿಷಬ್ ಗಿರಿ ಕಥೆ ಹೇಳಲು ಹೊರಟಿದ್ದಾರೆ. ಹರಿಕಥೆ ಕೇಳಿದ್ದೀರಿ. ಇದ್ಯಾವುದಿದು ಗಿರಿ ಕಥೆ ಅಂತೀರಾ?

  Karabu song released date postponed | Pogaru | Dhruva sarja | Filmibeat kannada

  "ಹರಿಕಥೆ ಅಲ್ಲ ಗಿರಿ ಕಥೆ" ರಿಷಬ್ ಶೆಟ್ಟಿ ಅಭಿನಯದ ಹೊಸ ಸಿನಿಮಾದ ಟೈಟಲ್ ಅಂತೆ. ಹೌದು, ರಿಷಬ್ ಶೆಟ್ಟಿ ಲಾಕ್ ಡೌನ್ ನಲ್ಲಿ "ಹರಿಕಥೆ ಅಲ್ಲ ಗಿರಿ ಕಥೆ" ಎನ್ನುವ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೆ ಸಿನಿಮಾದ ಬಗ್ಗೆ ಎಲ್ಲಾ ಮಾತುಕಥೆ ಮುಂಗಿದಿದ್ದು, ಚಿತ್ರತಂಡ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆಯಂತೆ. ಮುಂದೆ ಓದಿ..

  ಗಿರಿ ಕೃಷ್ಣ ನಿರ್ದೇಶನ

  ಗಿರಿ ಕೃಷ್ಣ ನಿರ್ದೇಶನ

  ಹರಿಕಥೆ ಅಲ್ಲ ಗಿರಿ ಕಥೆ ನಿರ್ದೇಶಕ ಗಿರಿ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ರೀಫಿಲ್ ಎನ್ನುವ ಕಿರುಚಿತ್ರದಲ್ಲಿ ನಟಿಸಿದ್ದ ಗಿರಿ ಕೃಷ್ಣ, ಸಾಕಷ್ಟು ಸಿನಿಮಾಗಳಲ್ಲಿಯೂ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಹರಿಕಥೆ ಅಲ್ಲ ಗಿರಿ ಕಥೆ ಸಿನಿಮಾ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭ

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭ

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಹರಿಕಥೆ ಅಲ್ಲ ಗಿರಿ ಕಥೆ ಕಾಮಿಡಿ ಎಂಟಟೈನರ್ ಸಿನಿಮಾವಂತೆ. ವಿಶೇಷ ಅಂದರೆ ಚಿತ್ರ ರಿಷಬ್ ಶೆಟ್ಟಿ ಬ್ಯಾನರ್ ನಲ್ಲಿಯೆ ಮೂಡಿ ಬರುತ್ತಿದೆ ಎಂದು ಹೇಳಲಾಗುತ್ತಿದೆ.

  'ಬೆಲ್ ಬಾಟಮ್'ನಲ್ಲಿ ಚಿತ್ರಪ್ರಿಯರ ಮನಗೆದ್ದಿದ್ದ ಶೆಟ್ರು

  'ಬೆಲ್ ಬಾಟಮ್'ನಲ್ಲಿ ಚಿತ್ರಪ್ರಿಯರ ಮನಗೆದ್ದಿದ್ದ ಶೆಟ್ರು

  ಬೆಲ್ ಬಾಟಮ್ ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ರಿಷಬ್, ಉತ್ತಮ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಕೂಡ ಹೌದು ಎನ್ನುವುದನ್ನು ಸಾಬೀತು ಮಾಡಿದ್ದರು. ಆ ನಂತರ ರಿಷಬ್ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೌಬಾಯ್ ಕೃಷ್ಣ ಆಗಿ ಮತ್ತು ಕಥಾ ಸಂಗಮ ಚಿತ್ರದಲ್ಲಿಯೂ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಮಿಂಚಿದ್ದರು.

  ಅಧಿಕೃತವಾಗಿ ಬಹಿರಂಗವಾಗಿಲ್ಲ

  ಅಧಿಕೃತವಾಗಿ ಬಹಿರಂಗವಾಗಿಲ್ಲ

  ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನೂ ಉಳಿದಂತೆ ಚಿತ್ರಕ್ಕೆ ಯಾರು ಫೈನಲ್ ಆಗಿಲ್ಲ. ಸಧ್ಯದಲ್ಲೇ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಹೆಸರಿನ ಜೊತೆ ಚಿತ್ರತಂಡ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

  ರಿಷಬ್ ಬಳಿ ಇರುವ ಸಿನಿಮಾಗಳು

  ರಿಷಬ್ ಬಳಿ ಇರುವ ಸಿನಿಮಾಗಳು

  ರಿಷಬ್ ಬಳಿ ಸಾಕಷ್ಟು ಸಿನಿಮಾಗಳಿವೆ. ಅಭಿನಯ ಮತ್ತು ನಿರ್ದೇಶನ ಎರಡರಲ್ಲೂ ಬ್ಯುಸಿ ಇರುವ ರಿಷಬ್, ರುದ್ರಪ್ರಯಾಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿಯೂ ಬಣ್ಣಹಚ್ಚುತ್ತಿದ್ದಾರೆ. ಜೊತೆಗೆ ನಾಥುರಾಮ್ ಎನ್ನುವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Director come Actor Rishab Shetty new movie titled 'Harikathe Alla Giri Kathe'. This movie is directed by Giri krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X