Exclusive: ಮಂಗಳೂರಿನಲ್ಲಿ ಗುಟ್ಟಾಗಿ 'ಸಲಾರ್' ಶೂಟಿಂಗ್: ಸೆಟ್‌ಗೆ ರಿಷಬ್ ಎಂಟ್ರಿ ಕೊಟ್ಟಿದ್ದೇಕೆ?

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಮ್ಮೆ ಅಬ್ಬರಿಸಲು ಪ್ರಭಾಸ್ ಸಿದ್ಧರಾಗುತ್ತಿದ್ದಾರೆ. ಇತ್ತೀಚೆಗೆ ಬಂದ ಸಿನಿಮಾ ಟೀಸರ್ ಸೂಪರ್ ಹಿಟ್ ಆಗಿದೆ. ಇನ್ನು ಟ್ರೈಲರ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ತೆರೆಗಪ್ಪಳಿಸಲು 45 ದಿನ ಬಾಕಿ ಇರುವಾಗ ಚಿತ್ರೀಕರಣ ಭರದಿಂದ ಸಾಗಿದೆ.

ಮಿಸ್ಟರ್ ಪರ್ಫೆಕ್ಷನಿಸ್ಟ್ ಪ್ರಶಾಂತ್‌ ನೀಲ್ ತಾವು ಅಂದುಕೊಂಡಂತೆ ಸಿನಿಮಾ ಬರುವವರೆಗೂ ಬಿಡುವವರಲ್ಲ. ಪದೇ ಪದೆ ದೃಶ್ಯಗಳನ್ನು ತಿದ್ದಿ ತೀಡುವ ಕೆಲಸ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಮಂಗಳೂರು ಬಂದರಿನಲ್ಲಿ ಸಣ್ಣ ಪುಟ್ಟ ಪ್ಯಾಚ್‌ವರ್ಕ್‌ ಸನ್ನಿವೇಶಗಳನ್ನು ಸೆರೆ ಹಿಡಿದಿದ್ದಾರೆ. ಸಾಕಷ್ಟು ಜನ ಜೂನಿಯರ್ ಆರ್ಟಿಸ್ಟ್‌ಗಳನ್ನು ಸೇರಿಸಿ ಮುಖ್ಯವಾದ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಇದು ಬಂದರಿನಲ್ಲಿ ನೌಕಾಪಡೆಯ ಸೈನಿಕರು ಇರುವಂತಹ ಸನ್ನಿವೇಶ ಎನ್ನುವುದು ಗೊತ್ತಾಗಿದೆ.

Rishab shetty visits Prabhass Salaar film set in Mangalore

'ಸಲಾರ್' ಸಿನಿಮಾ ಸೆಟ್ಟೇರಿದ ದಿನದಿಂದಲೂ ಕಥೆಯ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಪ್ರಭಾಸ್ ಪಾತ್ರ ಏನು ಎನ್ನುವುದು ಕೂಡ ಇನ್ನು ಗುಟ್ಟಾಗಿಯೇ ಇದೆ. ಸೆಟ್‌ನಿಂದ ಯಾವುದೇ ಫೋಟೊ, ವಿಡಿಯೋ ಲೀಕ್ ಆಗದಂತೆ ನೀಲ್ ಅಂಡ್ ಟೀಮ್ ಮುಂಜಾಗ್ರತೆ ವಹಿಸಿದೆ. ಆದರೂ ಕೂಡ ಆಗೊಮ್ಮೆ ಈಗೊಮ್ಮೆ ಸೆಟ್‌ನಲ್ಲಿ ಫೋಟೊ, ವಿಡಿಯೋ ಲೀಕ್ ಆಗುತ್ತಲೇ ಇತ್ತು. ಮಂಗಳೂರು ಚಿತ್ರೀಕರಣದ ಬಗ್ಗೆಯೂ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿತ್ತು. ಆದರೆ ಸೆಟ್‌ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೋಗಿದ್ದ ಫೋಟೊ ವೈರಲ್ ಆಗಿ ಗುಟ್ಟು ರಟ್ಟಾಗಿದೆ.

'ಸಲಾರ್' ಸೆಟ್‌ಗೆ ರಿಷಬ್

ಹೌದು. ಇತ್ತೀಚೆಗೆ ಮಂಗಳೂರಿನಲ್ಲಿ 'ಸಲಾರ್' ಸಿನಿಮಾ ಚಿತ್ರೀಕರಣ ನಡೆದಿದ್ದು ರಿಷಬ್ ಶೆಟ್ಟಿ ಸೆಟ್‌ಗೆ ಹೋಗಿ ಬಂದಿದ್ದಾರೆ. 'ಕಾಂತಾರ'-2 ಸಿನಿಮಾ ಪ್ರೀಪ್ರೊಡಕ್ಷನ್‌ ವರ್ಕ್‌ನಲ್ಲಿ ಬ್ಯುಸಿ ಇರುವ ರಿಷಬ್ 'ಸಲಾರ್' ಸೆಟ್‌ನಲ್ಲಿ ಹೊಂಬಾಳೆ ಪ್ರೊಡಕ್ಷನ್ ಮ್ಯಾನೇಜರ್‌ನ ಭೇಟಿ ಮಾಡಿ ಬಂದಿದ್ದಾರೆ. 'ಕಾಂತಾರ'- 2 ಲೊಕೇಶನ್ ಬಗ್ಗೆ ಮಾತುಕತೆ ನಡೆಸಿ ಬಂದಿದ್ದಾರೆ. ಇದೇ ವೇಳೆ ಪ್ರಶಾಂತ್‌ ನೀಲ್ ಜೊತೆ ರಿಷಬ್ ಪರಸ್ಪರ ಉಭಯಕುಶಲೋಪರಿ ವಿಚಾರಿಸಿದ್ದಾರೆ ಎನ್ನಲಾಗ್ತಿದೆ.

ಒಂದು ಸಾಂಗ್ ಬಾಕಿ

'ಸಲಾರ್‌' ಚಿತ್ರದ ಮುಖ್ಯ ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ವರ್ಕ್, ಡಬ್ಬಿಂಗ್ ವರ್ಕ್ ಚಾಲ್ತಿಯಲ್ಲಿದೆ. ಇನ್ನು ಸಣ್ಣ ಪುಟ್ಟ ಪ್ಯಾಚ್ ವರ್ಕ್ ಬಿಟ್ಟರೆ ಒಂದು ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದೆ ಎನ್ನಲಾಗ್ತಿದೆ. ಅದು ಚಿತ್ರದ ಸ್ಪೆಷಲ್ ಸಾಂಗ್ ಆಗಿರಬಹುದು ಎನ್ನುವ ಅಂದಾಜಿದೆ. ಅದು ಬಿಟ್ಟರೆ ಪ್ರಭಾಸ್ ಕಾಣಿಸಿಕೊಂಡಿರುವ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ.

Rishab shetty visits Prabhass Salaar film set in Mangalore

ಆಗಸ್ಟ್ ಕೊನೆಗೆ ಟ್ರೈಲರ್

ಆಕ್ಷನ್ ಪ್ಯಾಕ್ಡ್ 'ಸಲಾರ್' ಟೀಸರ್ ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್‌ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು. ಹಾಗಾಗಿ ಚಿತ್ರತಂಡ ಪೋಸ್ಟ್ ಮಾಡಿ ಆಗಸ್ಟ್ ಕೊನೆಗೆ ಟ್ರೈಲರ್ ರಿಲೀಸ್ ಮಾಡುತ್ತೇವೆ ಎಂದಿದ್ದರು. ಈಗಾಗಲೇ ಬಸ್ರೂರು ಸ್ಟುಡಿಯೋದಲ್ಲಿ ಚಿತ್ರದ ರೀ ರೆಕಾರ್ಡಿಂಗ್ ವರ್ಕ್ ಭರದಿಂದ ಸಾಗುತ್ತಿದೆ. ಟ್ರೈಲರ್‌ಗೆ ಜಬರ್ದಸ್ತ್‌ ಟ್ಯೂನ್ ಹಾಕುವುದರಲ್ಲಿ ರವಿ ಬಸ್ರೂರು ಬ್ಯುಸಿಯಾಗಿದ್ದಾರೆ.

ಸೆಪ್ಟೆಂಬರ್ 28ಕ್ಕೆ ಸಿನಿಮಾ ತೆರೆಗೆ

ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಸಲಾರ್' ಸಿನಿಮಾ ನಿರ್ಮಾಣ ಮಾಡುತ್ತಿದೆ. ಎರಡು ಭಾಗಗಳಾಗಿ 'ಸಲಾರ್' ಕಥೆ ಪ್ರೇಕ್ಷಕರ ಮುಂದೆ ಬರಲಿದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದು ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ, ಪೃಥ್ವಿರಾಜ್ ಸುಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. KGF ಸರಣಿಗೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರ ತಂಡ ಈ ಸರಣಿಗೂ ಕೆಲಸ ಮಾಡುತ್ತಿದೆ.

More from Filmibeat

English summary
Rishab shetty meets Prashanth neel in Prabhas's Salaar Set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X