»   » ಮತ್ತೆ 'ರಿಚ್ಚಿ' ಅವತಾರದಲ್ಲಿ ರಕ್ಷಿತ್ ಶೆಟ್ಟಿ

ಮತ್ತೆ 'ರಿಚ್ಚಿ' ಅವತಾರದಲ್ಲಿ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

'ರಿಚ್ಚಿ' ಅಂದ ತಕ್ಷಣ ಉಳಿದವರು ಕಂಡಂತೆ ಸಿನಿಮಾ ನೆನಪಾಗುತ್ತದೆ. ಅಷ್ಟರ ಮಟ್ಟಿಗೆ ರಿಚ್ಚಿ ಪಾತ್ರ ನೋಡುಗರನ್ನ ಆಕರ್ಷಣೆ ಮಾಡಿತ್ತು. ಅಷ್ಟೇ ಅಲ್ಲದೆ ಅದೇ ಚಿತ್ರದಲ್ಲಿ ರಿಚ್ಚಿ ಪಾತ್ರದ ಸಂಭಾಷಣೆಗಳು ಟ್ರೆಂಡ್ ಸೆಟ್ ಮಾಡುವಷ್ಟು ಪ್ರಖ್ಯಾತಿಗಳಿಸಿತ್ತು. ಈಗ ಅದೇ ಪಾತ್ರ ಮತ್ತೆ ತೆರೆ ಮೇಲೆ ಮೂಡಿ ಬರಲಿದೆ.

ಹೌದು 'ರಿಚ್ಚಿ' ಹೆಸರಿನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ಹೆಚ್ಚಾಗಿದೆ. ರಿಕ್ಕಿ ಹಾಗೂ ಕಿರಿಕ್ ಪಾರ್ಟಿ ಸಿನಿಮಾ ನಿರ್ದೇಶನ ಮಾಡಿ ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನ್ನಿಸಿಕೊಂಡ ರಿಷಬ್ ಶೆಟ್ಟಿ ರಿಚ್ಚಿ ಪಾತ್ರವನ್ನ ಮನಸ್ಸಿನಲ್ಲಿಟ್ಟಿಕೊಂಡು ಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ನೀವು ಹೀರೋಯಿನ್ ಆಗಬಹುದು.!

ಸದ್ಯ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಶೂಟಿಂಗ್ ಮುಗಿಸಿ 'ಬೆಲ್ ಬಾಟಂ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ರಿಷಬ್ ರಿಚ್ಚಿ ಸಿನಿಮಾ ಕಥೆ ಮಾಡಲು ಸಿದ್ದರಾಗಿದ್ದಾರಂತೆ.

Rishab Shetty will be directing Rakshith Shettys new movie

ವಿಭಿನ್ನವಾಗಿರುವ ಕಥೆಯ ಮೂಲಕ ವೀಕ್ಷರ ಮುಂದೆ ಬರಲು ಸಜ್ಜಾಗಿರುವ ರಿಷಬ್ ಈ ಸಿನಿಮಾ ರಕ್ಷಿತ್ ವೃತ್ತಿ ಜೀವನದಲ್ಲಿ ಬೆಸ್ಟ್ ಎನ್ನಿಸುವಂತಾಗುತ್ತದೆ ಎಂದಿದ್ದಾರೆ.

ರಿಚ್ಚಿ ಪಾತ್ರವನ್ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಲು ನಿರ್ಧರಿಸಿದ್ದು ಟೈಟಲ್ ರಿಚ್ಚಿ ಅಂತಾನೆ ಇರಲಿದ್ಯಾ ಎನ್ನುವುದನ್ನು ನಿರ್ದೇಶಕರು ಕನ್ಫರ್ಮ್ ಮಾಡಿಲ್ಲ.

Rishab Shetty will be directing Rakshith Shettys new movie

ಇನ್ನು ರಕ್ಷಿತ್ ಅಕೌಂಟ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿದ್ದು ಅವುಗಳ ಚಿತ್ರೀಕರಣ ಮುಗಿಸಿದ ನಂತರ ರಿಷಬ್ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

English summary
Kannada director Rishab Shetty will be directing Rakshith Shetty's new movie .The film is likely to be named Ricchi. Currently Rishab is busy with script work

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X